'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ತಮ್ಮ ಡೈಲಾಗ್, ಮ್ಯಾನರಿಸಂನಿಂದ ಎಲ್ಲರನ್ನೂ ನಕ್ಕು ನಗಿಸುತ್ತಿದ್ದ ನಟಿ ನಯನಾ ಶರತ್, ಇದೀಗ ಉಗ್ರರೂಪ ತಾಳಿದ್ದಾರೆ. ತಮ್ಮ ಪೋಟೋಗೆ ಅಶ್ಲೀಲ ಕಮೆಂಟ್ ಮಾಡಿದ್ದ ನೆಟಿಜನ್ಸ್ ಮೇಲೆ ನಯನಾ ಕಿಡಿ ಕಾರಿದ್ದಾರೆ.
'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನಾ ಶರತ್ ನಯನಾ ತಮ್ಮ ಫೇಸ್ಬುಕ್ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿ ಅದಕ್ಕೆ ಪುಸ್ತಕವೊಂದರಲ್ಲಿದ್ದ ಇಂಗ್ಲೀಷ್ ಕ್ಯಾಪ್ಷನ್ ನೀಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬರು 'ಬೆಳೆಯುವವರೆಗೂ ಕನ್ನಡ ಬೇಕಿತ್ತು ಬೆಳೆದ ನಂತರ ಕನ್ನಡ ಬೇಡ್ವಾ' ಎಂದು ಕಮೆಂಟ್ ಮಾಡಿದ್ದರು. ಇದನ್ನು ಗಮನಿಸಿದ ನಯನಾ ಕೋಪದಿಂದಲೇ ಆ ಕಮೆಂಟ್ಗೆ ಪ್ರತಿಕ್ರಿಯಿಸಿದ್ದಾರೆ.
ಫೇಸ್ಬುಕ್ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ ನಯನಾ ಇದು ಇಷ್ಟಕ್ಕೇ ಮುಗಿದಿಲ್ಲ, ಕೆಲವರು ನಯನಾ ಪರವಾಗಿ ಕಮೆಂಟ್ ಮಾಡಿದರೆ, ಕೆಲವರು ಇಂಗ್ಲೀಷ್ ಪದ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಒಂದು ವಿಡಿಯೋ ಮಾಡಿರುವ ನಯನಾ ಶರತ್, 'ಕನ್ನಡಾಭಿಮಾನಿಗಳಿಗೆ ನಾನು ಕ್ಷಮೆ ಕೇಳುತ್ತೇನೆ. ಕೆಲವರು ಉದ್ದೇಶಪೂರ್ವಕವಾಗಿ ನನ್ನ ಫೋಟೋಗೆ ಅಶ್ಲೀಲ ಪದ ಬಳಸಿ ಕಮೆಂಟ್ ಮಾಡಿದ್ದರು. ಅದು ನನಗೆ ನೋವಾಗಿತ್ತು. ಆದ್ದರಿಂದ ನಾನೂ ಕೂಡಾ ಖಾರವಾಗಿ ಪ್ರತಿಕ್ರಿಯಿಸಿದ್ದೆ'.
ನಯನಾ ಪೋಸ್ಟ್ಗೆ ನೆಟಿಜನ್ಸ್ ಕಮೆಂಟ್ಸ್ 'ನನಗೆ ಕನ್ನಡದ ಮೇಲಿನ ಅಭಿಮಾನ ಎಂದಿಗೂ ಕಡಿಮೆಯಾಗುವುದಿಲ್ಲ. ಇಂಗ್ಲೀಷ್ ಪದ ಬಳಸಿದ ಮಾತ್ರಕ್ಕೆ ನಾನು ಇಂಗ್ಲೀಷ್ ಪ್ರೇಮಿ ಆಗಿಬಿಡುವುದಿಲ್ಲ. ನಾನು ಎಂದಿಗೂ ಕನ್ನಡತಿ ಎಂದು ತಮ್ಮ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.