ಕರ್ನಾಟಕ

karnataka

ETV Bharat / sitara

ಯುಟ್ಯೂಬ್​ಲ್ಲಿ ಧೂಳೆಬ್ಬಿಸಿದ 'ನನ್ನ ಗೆಳತಿ' ಜವಾರಿ ಸಾಂಗ್ - ಫಿದಾ

ಕಲರ್​ಫುಲ್​ ಆಗಿ ವಿಡಿಯೋ ರೆಕಾರ್ಡಿಂಗ್​ ಕೂಡ ಮಾಡಲಾಗಿದೆ. ಡಿಜೆ ಮಾದರಿಯ ಈ ನಯಾ ಸಾಂಗ್, ಯುಟ್ಯೂಬ್​ನಲ್ಲಿ​ ಏಳು ದಿನಗಳಲ್ಲಿ 12 ಲಕ್ಷ ವೀಕ್ಷಣೆ ಪಡೆದುಕೊಂಡಿದೆ 'ನನ್ನ ಗೆಳತಿ' ಜವಾರಿ ಸಾಂಗ್​.

ಫೋಟೋ ಕೃಪೆ : ಯುಟ್ಯೂಬ್​

By

Published : May 9, 2019, 3:01 PM IST

ವಿಭಿನ್ನ ಶೈಲಿಯ 'ನನ್ನ ಗೆಳತಿ ನನ್ನ ಗೆಳತಿ.. ನನ್ನ ನೋಡಿ ನೀ ನಗತಿ' ಜಾನಪದ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಯಾವ ಸಿನಿಮಾ ಸಾಂಗ್​ಗೂ ಕಡಿಮೆ ಇಲ್ಲದಂತೆ ವೀಕ್ಷಣೆಯಾಗುತ್ತಿದೆ.

ಉತ್ತರ ಕರ್ನಾಟಕ ಶೈಲಿಯ ಈ ಜಾನಪದ ಹಾಡಿಗೆ ಆಧುನಿಕ ಸಂಗೀತದ ಟಚ್​ ಕೊಡಲಾಗಿದೆ. ಜತೆಗೆ ಕಲರ್​ಫುಲ್​ ಆಗಿ ವಿಡಿಯೋ ರೆಕಾರ್ಡಿಂಗ್​ ಕೂಡ ಮಾಡಲಾಗಿದೆ. ಡಿಜೆ ಮಾದರಿಯ ಈ ಹೊಸ ಸಾಂಗ್, ಯುಟ್ಯೂಬ್​ನಲ್ಲಿ​ ಏಳು ದಿನಗಳಲ್ಲಿ 12 ಲಕ್ಷ ವೀಕ್ಷಣೆ ಪಡೆದುಕೊಂಡಿದೆ.

ಮಂಜುನಾಥ್ ಸಂಗಲದ ಬರೆದ ಈ ಸಾಂಗ್​ಗೆ ರಾಕೇಶ್​ ಚೈತ್ರಾ ರೀ-ಕ್ರಿಯೇಷನ್ ಮಾಡಿದ್ದಾರೆ. ಮಾಸ್ಟರಿಂಗ್ ಹಾಗೂ ಮಿಕ್ಸಿಂಗ್ ವಿಜಯ್ ಕುಮಾರ್ ಡಿ ಮಾಡಿದ್ದು, ಅಂಬೆಗಾಲು ಸಿನಿಮಾ ಸ್ಟುಡಿಯೋಸ್​​ನಡಿ ಮೇ.2 ರಂದು ಯುಟ್ಯೂಬ್​ಗೆ ಅಪ್​ಲೋಡ್ ಮಾಡಲಾಗಿದೆ.

ABOUT THE AUTHOR

...view details