ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಅವರ ಮುದ್ದಿನ ಮಗನ ನಾಮಕರಣ ಶಾಸ್ತ್ರವನ್ನು ಶುಕ್ರವಾರ ಅದ್ಧೂರಿಯಾಗಿ ಆಚರಿಸಲಾಯಿತು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಸರ್ಜಾ ಫ್ಯಾಮಿಲಿ ಹಾಗೂ ಮೇಘನಾರಾಜ್ ಕುಟುಂಬ ವರ್ಗದವರು ಭಾಗಿಯಾಗಿದ್ದರು.
ಚಿರು-ಮೇಘನಾ ರಾಜ್ ಪುತ್ರನ ನಾಮಕರಣ ಶಾಸ್ತ್ರದ ಸುಂದರ ಕ್ಷಣಗಳು: ವಿಡಿಯೋ - ನಾಮಕರಣ ಶಾಸ್ತ್ರ
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮಗನಿಗೆ 'ರಾಯನ್ ರಾಜ್ ಸರ್ಜಾ' ಎಂದು ಶುಕ್ರವಾರ ಹೆಸರಿಡಲಾಗಿದ್ದು, ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ನಡೆಸಲಾಗಿತ್ತು. ಈ ಸುಂದರ ಕ್ಷಣದ ವಿಡಿಯೋ ಇಲ್ಲಿದೆ.
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆಯಾಗಿದ್ದ ಕೋರಮಂಗಲದ ಸೇಂಟ್ ಮಾರ್ಕ್ಸ್ ಚರ್ಚ್‌ನಲ್ಲಿಯೇ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದ ಸಂಪ್ರದಾಯದ ಪ್ರಕಾರ ನಾಮಕರಣ ನಡೆದಿದ್ದು, 'ರಾಯನ್ ರಾಜ್ ಸರ್ಜಾ' ಎಂದು ಹೆಸರಿಡಲಾಗಿದೆ.
ಈ ಕಾರ್ಯಕ್ರಮಕ್ಕೆ ಕುಟುಂಬದವರು ಮತ್ತು ಆಪ್ತರು ಮಾತ್ರ ಆಗಮಿಸಿದ್ದರು. ಧ್ರುವ ಸರ್ಜಾ, ಅವರ ಪತ್ನಿ ಪ್ರೇರಣಾ, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ, ನಟಿ ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಸುಧಾರಾಣಿ ಸೇರಿದಂತೆ ಸಾಕಷ್ಟು ಚಿತ್ರರಂಗದ ಸ್ನೇಹಿತರು ಈ ಸಮಾರಂಭಕ್ಕೆ ಸಾಕ್ಷಿಯಾದರು.