ಕರ್ನಾಟಕ

karnataka

ETV Bharat / sitara

ಬಹಳ ಸಮಯದ ನಂತರ ಮತ್ತೆ ನಂ.1 ಸ್ಥಾನ ಪಡೆದುಕೊಂಡ ನಾಗಿಣಿ - ಜೀ ಕನ್ನಡ ವಾಹಿನಿ ಧಾರವಾಹಿಗಳು

ಕೆ.ಎಸ್.ರಾಮ್ ಜೀ ನಿರ್ದೇಶನದ, ಕನ್ನಡದ ಜನಪ್ರಿಯ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ-2 ಈ ಬಾರಿ ನಂ.1 ಸ್ಥಾನದಲ್ಲಿದೆ.

nagini kannada serial in number 1 position
nagini kannada serial in number 1 position

By

Published : Jun 11, 2021, 3:14 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಟಿಆರ್​ಪಿಯಲ್ಲಿ ಮುಂದಿವೆ. ಪಾರು, ಗಟ್ಟಿಮೇಳ, ಜೊತೆಜೊತೆಯಲಿ, ಸತ್ಯ ಧಾರಾವಾಹಿಗಳು ಟಾಪ್ ಒನ್ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದರೂ ಈ ಬಾರಿ ನಂ.1 ಸ್ಥಾನದಲ್ಲಿರುವ ಧಾರಾವಾಹಿ ಯಾವುದೆಂದು ನಿಮಗಾಗಲೇ ಶೀರ್ಷಿಕೆ ನೋಡಿ ತಿಳಿದಿರುತ್ತದೆ.

ಹೌದು, ಕೆ.ಎಸ್.ರಾಮ್ ಜೀ ನಿರ್ದೇಶನದ, ಕನ್ನಡದ ಜನಪ್ರಿಯ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ-2 ಈ ಬಾರಿ ನಂ.1 ಸ್ಥಾನದಲ್ಲಿದೆ. ಪ್ರಸ್ತುತ ಧಾರಾವಾಹಿಯಲ್ಲಿ ನಾಗಿಣಿ ಶಿವಾನಿಯಾಗಿ ನಮ್ರತಾ ಗೌಡ ಅಭಿನಯಿಸುತ್ತಿದ್ದಾರೆ. ನಾಯಕ ತ್ರಿಶೂಲ್ ಆಗಿ ನಿನಾದ್ ಹರಿತ್ಸ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಧಾರಾವಾಹಿ ಯಶಸ್ವಿ ಮುನ್ನೂರು ಸಂಚಿಕೆ ಪೂರೈಸಿತ್ತು.

ನಮ್ರತಾ ಗೌಡ

ಅಂದಹಾಗೆ ಇದುವರೆಗೂ ಟಾಪ್ 4 ಅಥವಾ 3ನೇ ಸ್ಥಾನದಲ್ಲಿರುತ್ತಿದ್ದ ನಾಗಿಣಿ-2 ಎರಡು ವರ್ಷಗಳ ನಂತರ ಮತ್ತೆ ನಂ.1 ಸ್ಥಾನ ಪಡೆದುಕೊಂಡಿರುವುದು ಧಾರಾವಾಹಿ ವೀಕ್ಷಕರಿಗೆ ಸಂತಸ ತಂದಿದೆ. ಧಾರವಾಹಿಯ ಗ್ರಾಫಿಕ್ಸ್ ವರ್ಕ್, ಆಸಕ್ತಿದಾಯಕ ಸಂಚಿಕೆಗಳು ವೀಕ್ಷಕರನ್ನು ರಂಜಿಸುತ್ತಿವೆ.

ನಮ್ರತಾ ಗೌಡ

ನಾಗಿಣಿ ಭಾಗ ಒಂದರಲ್ಲಿ ದೀಪಿಕಾ ದಾಸ್, ದೀಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ನಾಗಿಣಿ-2ರಲ್ಲಿ ನಮ್ರತಾ ಗೌಡ, ನಿನಾದ್ ಹರಿತ್ಸ ಮೋಹನ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ABOUT THE AUTHOR

...view details