ವಿಭಿನ್ನವಾಗಿ ವೀಕ್ಷಕರನ್ನು ಸೆಳೆಯುವ ಪ್ರಯತ್ನ ಝೀ ವಾಹಿನಿಯ ನಾಗಿಣಿ-2 ಧಾರಾವಾಹಿಯಲ್ಲಿ ನಡೆದಿದೆ. ಧಾರಾವಾಹಿಯ ಮುಖ್ಯ ಪಾತ್ರಧಾರಿಗಳಾದ ತ್ರಿಶೂಲ್ ಮತ್ತು ಶಿವಾನಿ ಮದುವೆಯ ಅರತಕ್ಷತೆಯನ್ನು ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಗಿದೆ.
ಶಿವಾನಿ ಪಾತ್ರಕ್ಕೆ ನಮೃತಾ ಗೌಡ ಬಣ್ಣ ಹಚ್ಚಿದ್ದು, ತ್ರಿಶೂಲ್ ಪಾತ್ರದಲ್ಲಿ ನಿನಾದ್ ಅಭಿನಯಿಸುತ್ತಿದ್ದಾರೆ. ಇಬ್ಬರ ಮದುವೆ ದೃಶ್ಯಗಳನ್ನು ಅದ್ಧೂರಿಯಾಗಿ ಚಿತ್ರಿಸಲಾಗಿದೆ. ಅದರ ಜೊತೆಗೆ ಆರತಕ್ಷತೆ ಕಾರ್ಯಕ್ರಮವನ್ನು ಅಭಿಮಾನಿಗಳೊಂದಿಗೆ ಚಿತ್ರೀಕರಿಸಲಾಗಿದೆ.
ಮಂಡ್ಯದಲ್ಲಿ ಇದರ ಶೂಟಿಂಗ್ ನಡೆದಿದ್ದು, ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. 'ನಾಗಿಣಿ 2' ಧಾರಾವಾಹಿಗೆ ದೊಡ್ಡ ವೀಕ್ಷಕ ವರ್ಗವಿದೆ. ಈ ಸೀರಿಯಲ್ ಕಲಾವಿದರನ್ನು ಭೇಟಿ ಮಾಡಬೇಕು ಮತ್ತು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂಬುವುದು ಅನೇಕ ಅಭಿಮಾನಿಗಳ ಆಸೆಯಾಗಿತ್ತು. ಅದರಂತೆಯೇ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ನಾಗಿಣಿ 2 ತಂಡದೊಂದಿಗೆ ಸೆಲ್ಫಿ ಕ್ಲಕ್ಕಿಸಿಕೊಳ್ಳುತ್ತಿರುವ ಅಭಿಮಾನಿಗಳು ಮಂಡ್ಯದ ಅನೇಕ ಅಭಿಮಾನಿಗಳ ಮನೆಗೆ ತೆರಳಿದ್ದ ಧಾರಾವಾಹಿ ತಂಡ, ಮಿಸ್ ಕಾಲ್ ನೀಡುವ ಸ್ಪರ್ಧೆ ಆಯೋಜಿಸಿತ್ತು. ಅದರಲ್ಲಿ ಆಯ್ಕೆ ಆದವರಿಗೆ ಈ ಆರತಕ್ಷತೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಯಿತು. ಇದು ತಮ್ಮದೇ ಕುಟುಂಬದ ಸಮಾರಂಭ ಎಂಬ ರೀತಿಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. 'ನಾಗಿಣಿ 2' ತಂಡದವರ ಜೊತೆ ವೀಕ್ಷಕರು ಸಂವಾದ ಕೂಡ ನಡೆಸಿದರು.
ನೆಚ್ಚಿನ ಸೀರಿಯಲ್ ತಂಡದೊಂದಿಗೆ ಅಭಿಮಾನಿ ಬಳಗ ಆರತಕ್ಷತೆಗೆ ಬಂದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆಗಮಿಸಿದ್ದ ಎಲ್ಲಾ ಅಭಿಮಾನಿಗಳಿಗೆ ಬಾಳೆ ಎಲೆಯಲ್ಲಿ ಶ್ಯಾವಿಗೆ ಪಾಯಸದ ಭರ್ಜರಿ ಭೋಜನ ಬಡಿಸಲಾಯಿತು. ಒಟ್ಟಿನಲ್ಲಿ ಅಭಿಮಾನಿಗಳ ಜೊತೆ ಸಂಬಂಧ ಗಟ್ಟಿಗೊಳಿಸಲು ಈ ಆರತಕ್ಷತೆ ಕಾರ್ಯಕ್ರಮ ನಡೆಸಲಾಯಿತು. ಈ ವಿಶೇಷ ಎಪಿಸೋಡ್ಗಳು ಶೀಘ್ರದಲ್ಲೇ ಪ್ರಸಾರ ಆಗಲಿವೆ.
ಶಿವಾನಿ ಮತ್ತು ತ್ರಿಶೂಲ್ ಜೊತೆ ಅಭಿಮಾನಿ