ಇನ್ನು 10 ದಿನಗಳಲ್ಲಿ 2019 ಮುಗಿದು ಹೊಸ ವರ್ಷ ಆರಂಭವಾಗುತ್ತದೆ. 2020 ವರ್ಷವನ್ನು ಸ್ವಾಗತಿಸಲು ಈಗಿನಿಂದಲೇ ಎಲ್ಲಾ ತಯಾರಿ ನಡೆಯುತ್ತಿದೆ. ಹೊಸ ವರ್ಷಕ್ಕಾಗಿ ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ಹೆಚ್ಸಿಎಲ್ ಕಾರ್ಯಕ್ರಮ ಕೂಡಾ ಒಂದು.
ಹೆಚ್ಸಿಎಲ್ ಸಂಸ್ಥೆ ವತಿಯಿಂದ ಎಲ್.ಸುಬ್ರಮಣ್ಯಂ, ಶಿವಮಣಿ ಸಂಗೀತ ಸಂಜೆ - ಡಿಸೆಂಬರ್ 27 ರಂದು ಶಿವಮಣಿ ಡ್ರಮ್ ಕಾರ್ಯಕ್ರಮ
ಹೆಚ್ಸಿಎಲ್ ಸಂಸ್ಥೆ ಈಗಾಗಲೇ ದೇಶದ 11 ನಗರದಲ್ಲಿ ಈ ರೀತಿಯ ಸಂಗೀತ ರಸಸಂಜೆ ಆಯೋಜಿಸಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಲಖ್ನೌ, ನಾಗ್ಪುರ್, ಮಧುರೈ, ಚೆನ್ನೈ ಅಲ್ಲದೆ ನ್ಯೂಯಾರ್ಕ್, ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಕೂಡಾ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಹೆಚ್ಸಿಎಲ್ ಸಂಸ್ಥೆಯು ಡಾ.ಎಲ್. ಸುಬ್ರಮಣ್ಯಂ ಪಿಟೀಲು, ಶಿವಮಣಿ ಅವರ ಡ್ರಮ್ ಹಾಗೂ ರೋಂಕಿನಿ ಗುಪ್ತಾ ಅವರ ಗಾಯನದೊಂದಿಗೆ ಸಂಗೀತ ರಸಸಂಜೆಯನ್ನು ಏರ್ಪಡಿಸಿದೆ. ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತ ಸಂಗಮ ಈ ವೇದಿಕೆಯಲ್ಲಿ ಜರುಗಲಿದೆ. ಡಿಸೆಂಬರ್ 27 ರಂದು ಸಂಜೆ 6.30 ಕ್ಕೆ ಬೆಂಗಳೂರಿನ ಡಾ. ಅಂಬೇಡ್ಕರ್ ಭವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್ಸಿಎಲ್ ಸಂಸ್ಥೆ ಈಗಾಗಲೇ ದೇಶದ 11 ನಗರದಲ್ಲಿ ಈ ರೀತಿಯ ಸಂಗೀತ ರಸಸಂಜೆ ಆಯೋಜಿಸಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಲಖ್ನೌ, ನಾಗ್ಪುರ್, ಮಧುರೈ, ಚೆನ್ನೈ ಅಲ್ಲದೆ ನ್ಯೂಯಾರ್ಕ್, ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಕೂಡಾ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಸುದ್ದಿಗೋಷ್ಠಿಯಲ್ಲಿ ಹೆಚ್ಸಿಎಲ್ ಸಂಸ್ಥೆಯ ರೋಹಿತ್ ಕೌಲ್ ಹಾಗೂ ಡಾ.ಎಲ್. ಸುಬ್ರಹ್ಮಣ್ಯಂ ಸುದ್ದಿಗೋಷ್ಠಿಯಲ್ಲಿ ಸಂಗೀತ ಸಂಜೆಯ ಬಗ್ಗೆ ವಿವರಣೆ ನೀಡಿದರು. ಸಂಸ್ಥೆ ಸುಮಾರು 21 ವರ್ಷಗಳಿಂದ ಕಲಾರಸಿಕರನ್ನು ರಂಜಿಸಿದೆ.