ಕರ್ನಾಟಕ

karnataka

ETV Bharat / sitara

ಬಿಗ್​​​​ಬಾಸ್​​- 8 ಆರಂಭಕ್ಕೆ ಮುಹೂರ್ತ ಇಟ್ಟ ಕಿಚ್ಚ ಜ್ಯೋತಿಷಿ...ವಿಡಿಯೋ - Kannada big boss 8

ಕಲರ್ಸ್ ಕನ್ನಡ ವಾಹಿನಿ ಬಿಗ್​​​ ಬಾಸ್​​​- 8 ಎರಡನೇ ಪ್ರೋಮೋ ಬಿಡುಗಡೆ ಮಾಡಿದೆ. ಪ್ರೋಮೋದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದು ಕಿರುತೆರೆಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಫೆಬ್ರವರಿ 28 ಸಂಜೆ 6 ಗಂಟೆಗೆ ಬಿಗ್​ ಬಾಸ್​​​​ 8 ಕರ್ಟನ್ ರೈಸರ್ ಕಾರ್ಯಕ್ರಮ ನಡೆಯಲಿದೆ.

Big boss season 8
ಬಿಗ್​​​​ಬಾಸ್​​ - 8

By

Published : Feb 16, 2021, 11:52 AM IST

ಬಿಗ್​​​ಬಾಸ್​​​ ಸೀಸನ್ 8 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಫೆಬ್ರವರಿ 28 ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಬಿಗ್​ಬಾಸ್ -8 ಆರಂಭವಾಗಲಿದ್ದು ನಿನ್ನೆಯಷ್ಟೇ ವಾಹಿನಿ, ಸುದೀಪ್​ ಅವರ ಮತ್ತೊಂದು ಟೀಸರ್ ಬಿಡುಗಡೆ ಮಾಡಿದೆ. 100 ದಿನಗಳ ಕಾಲ ಈ ಶೋ ನಡೆಯಲಿದ್ದು, ಈ ಬಾರಿ ಕೂಡಾ ಸುದೀಪ್ ನಿರೂಪಣೆ ಹೊಣೆ ಹೊತ್ತಿದ್ದಾರೆ.

ಇದನ್ನೂ ಓದಿ:ಕಿಶನ್ ಬೆಳಗಲಿ 'ಡಿಯರ್ ಕಣ್ಮಣಿ' ಸಿನಿಮಾಗೆ ಸಾಥ್ ನೀಡಿದ ಪೈಲ್ವಾನ್

ಯಾವ ಸಮಯದಲ್ಲಿ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ಇನ್ನೂ ಮಾಹಿತಿ ನೀಡದಿದ್ದರೂ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರ ಮಾಡಬಹುದು ಎನ್ನಲಾಗುತ್ತಿದೆ. ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಪ್ರೋಮೋವನ್ನು ಸುದೀಪ್ ತಮ್ಮ ಇನ್ಸ್ಟಾಗ್ರಾಮ್​​​​​​​​​ನಲ್ಲಿ ಹಂಚಿಕೊಂಡಿದ್ದಾರೆ. ಜ್ಯೋತಿಷಿ ಪಾತ್ರ ಹಾಗೂ ಜ್ಯೋತಿಷ್ಯ ಕೇಳುವವನ ಪಾತ್ರದಲ್ಲಿ ಸುದೀಪ್ ನಟಿಸಿದ್ದು ಈ ಪ್ರೋಮೋಗೆ ಕಿರುತೆರೆಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮೆಚ್ಚಿನ ಕಾರ್ಯಕ್ರಮವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ ಜನ ಸಾಮಾನ್ಯರಿಗೆ ದೊಡ್ಮನೆಯೊಳಗೆ ಪ್ರವೇಶವಿಲ್ಲ. ಗೀತಾಭಾರತಿ ಭಟ್, ಹಿತಾ ಚಂದ್ರಶೇಖರ್, ಸುಮಂತ್ ಶೈಲೇಂದ್ರ ಸೇರಿ ಅನೇಕ ಸೆಲಬ್ರಿಟಿಗಳ ಹೆಸರು ಕೇಳಿ ಬರುತ್ತಿದ್ದರೂ ಯಾರೆಲ್ಲಾ ಈ ಬಾರಿ ದೊಡ್ಮನೆಯೊಳಗೆ ಹೋಗಲಿದ್ದಾರೆ ಎಂದು ಕೊನೆಯ ಕ್ಷಣದವರೆಗೂ ಕಾಯಲೇಬೇಕಿದೆ.

ABOUT THE AUTHOR

...view details