ಕರ್ನಾಟಕ

karnataka

ETV Bharat / sitara

ಗೋವಾ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಮುದ್ದುಲಕ್ಷ್ಮಿ - Muddulakshmni serial actress

ಚಿತ್ರೀಕರಣದ ನಡುವೆ ಬ್ರೇಕ್ ಪಡೆದ 'ಮುದ್ದುಲಕ್ಷ್ಮಿ' ಧಾರಾವಾಹಿ ನಟಿ ಅಶ್ವಿನಿ ಈಗ ಗೋವಾ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಗೋವಾ ಸುಂದರ ಕಡಲತೀರದಲ್ಲಿ ತೆಗೆದ ಫೋಟೋಗಳನ್ನು ಅಶ್ವಿನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Muddulakshmi serial actress
ಮುದ್ದುಲಕ್ಷ್ಮಿ

By

Published : Dec 23, 2020, 2:33 PM IST

ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕಿ ಲಕ್ಷ್ಮಿ ಆಗಿ ಅಭಿನಯಿಸುತ್ತಿರುವ ನಟಿ ಅಶ್ವಿನಿ ಈಗ ಶೂಟಿಂಗ್​​ನಿಂದ ಬ್ರೇಕ್ ಪಡೆದು ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಗೋವಾದಲ್ಲಿ ಕಳೆದ ಸುಮಧುರ ಕ್ಷಣಗಳನ್ನು ಅಶ್ವಿನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಗೋವಾ ಕಡಲತೀರದಲ್ಲಿ ತೆಗೆಸಿಕೊಂಡ ಫೋಟೋವನ್ನು ಅಶ್ವಿನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್'ಗೆ ಕನ್ನಡದ ಸಿನಿಮಾಟೋಗ್ರಾಫರ್​​​​

ಕೋವಿಡ್​​​​​​​​​​​​ ಲಾಕ್​​​ಡೌನ್​​​​​​​​​​​​​​​​​​​​​​​​​​​​​​​​ ನಂತರ ಮೇ ತಿಂಗಳಿನಲ್ಲಿ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿತ್ತು. ನಂತರ ನಿರಂತರವಾಗಿ ಶೂಟಿಂಗ್​​​​​ನಲ್ಲಿ ತೊಡಗಿಸಿಕೊಂಡಿದ್ದರು ಅಶ್ವಿನಿ. ಬ್ಯುಸಿ ಶೂಟಿಂಗ್ ನಡುವೆಯೂ ವಿರಾಮ ಪಡೆಯಲು ಬಯಸಿರುವ ಅಶ್ವಿನಿ ಸಣ್ಣ ಬ್ರೇಕ್ ಪಡೆದ ನಂತರ ಮತ್ತೆ ಶೂಟಿಂಗ್ ನತ್ತ ಮರಳಲಿದ್ದಾರೆ. ಮೂಲತಃ ಮೈಸೂರಿನವರಾದ ಅಶ್ವಿನಿ ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿ ಕೆಲಸ ಮಾಡುವ ಮೂಲಕ ಕರಿಯರ್ ಆರಂಭಿಸಿದರು. 'ಮುದ್ದುಲಕ್ಷ್ಮಿ' ಧಾರಾವಾಹಿ ಅವರಿಗೆ ಬ್ರೇಕ್ ನೀಡಿತು. ಮಲೆಯಾಳಂನ ಕರುತಮುತ್ತು ಧಾರಾವಾಹಿಯ ರಿಮೇಕ್ ಆಗಿರುವ ಈ ಧಾರಾವಾಹಿ ಸಮಾಜದಲ್ಲಿರುವ ವರ್ಣ ತಾರತಮ್ಯದ ಕುರಿತ ಕಥೆ ಹೊಂದಿದೆ. ರಂಗಸ್ವಾಮಿ ,ಅನಂತವೇಲು ,ಸೌಂದರ್ಯ, ಖುಷಿ ಆಚಾರ್, ಚರಿತ್ ಬಾಳಪ್ಪ ಹಾಗೂ ಇನ್ನಿತರರು ಪ್ರಮುಖ ತಾರಾಗಣದಲ್ಲಿದ್ದಾರೆ.

ABOUT THE AUTHOR

...view details