ಮಂಗಳ ಗೌರಿ ಮದುವೆ ಧಾರಾವಾಹಿಯ ಸೌಂದರ್ಯ ಅವರ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಮಂಗಳ ಗೌರಿಯ ಸುಂದರ ವಿಲನ್ ಸೌಂದರ್ಯ ಆಗಿ ನಟಿಸುತ್ತಿರುವ ಅರಮನೆ ನಗರಿ ಚೆಲುವೆಯ ಹೆಸರು ರಾಧಿಕಾ . ನಟಿಯಾಗಬೇಕೆಂಬ ಆಸೆ ಇಲ್ಲದಿದ್ದರೂ ಆಕಸ್ಮಿಕವಾಗಿ ಬಂದ ಅವಕಾಶವನ್ನು ಬಳಸಿಕೊಂಡು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.
ಮಂಗಳಗೌರಿ ಮದುವೆ ಬ್ಯೂಟಿಫುಲ್ ವಿಲನ್ ಸೌಂದರ್ಯ, ಸ್ಟೈಲ್ಗೆ ಹೆಂಗಳೆಯರು ಫಿದಾ..! - ಅಳಗುಳಿಮನೆ
ಮಂಗಳಗೌರಿ ಮದುವೆ ಧಾರಾವಾಹಿಯಿಂದ ಸೌಂದರ್ಯ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ರಾಧಿಕಾ ತಮ್ಮ ಸ್ಟೈಲ್ ಮೂಲಕವೂ ಮನೆ ಮಾತಾಗಿದ್ದಾರೆ. ಇವರು ಧರಿಸುವ ಸೀರೆ, ಧರಿಸುವ ಒಡವೆಗಳಿಗೆ ಹೆಣ್ಣು ಮಕ್ಕಳು ಫಿದಾ ಆಗಿದ್ದಾರೆ.
ಫೇಸ್ಬುಕ್ ಮೂಲಕ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಪಡೆದುಕೊಂಡಿರುವ ರಾಧಿಕಾ ಸದ್ಯ ಕಿರುತೆರೆಯಲ್ಲಿ ಬ್ಯುಸಿ. ಎರಡು ಕನಸು ಧಾರಾವಾಹಿಯ ಮೂಲಕ ಬಣ್ಣದ ಪಯಣ ಆರಂಭಿಸಿದ ಈ ಚೆಲುವೆ ಇದುವರೆಗೂ ಅಳಗುಳಿಮನೆ, ರಾಧಾ ಕಲ್ಯಾಣ, ಖುಷಿ ಕಣಜ, ಕಾದಂಬರಿ, ಮುಂಗಾರುಮಳೆ, ಸ್ವಾತಿಮುತ್ತು, ಪುಟ್ಮಲ್ಲಿ, ಆತ್ಮಬಂಧನ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರಧಾರಿ ಆಗಿ ನಟಿಸುತ್ತಿದ್ದಾರೆ. ನಟನೆಯ ಜೊತೆಗೆ ರೂಪದರ್ಶಿಯಾಗಿಯೂ ರಾಧಿಕಾ ಗುರುತಿಸಿಕೊಂಡಿದ್ದಾರೆ. ಮೈಸೂರ್ ಸಿಲ್ಕ್ಸ್, ಚೈನ್ನೈ ಸಿಲ್ಕ್ಸ್ , ಶಕ್ತಿ ಮಸಾಲಾ, ಜ್ಯುವೆಲ್ಲರಿ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಸೌಂದರ್ಯ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ರಾಧಿಕಾ ತಮ್ಮ ಸ್ಟೈಲ್ ನ ಮೂಲಕವೂ ಮನೆ ಮಾತಾಗಿದ್ದಾರೆ. ಇವರು ಧರಿಸುವ ಸೀರೆ, ಧರಿಸುವ ಒಡವೆಗಳಿಗೆ ಹೆಣ್ಣು ಮಕ್ಕಳು ಫಿದಾ ಆಗಿದ್ದಾರೆ.