ಕರ್ನಾಟಕ

karnataka

ETV Bharat / sitara

ಪತಿ ಎದುರೇ ಗಾಯಕಿಗೆ ಕಿಸ್​​​​ ಮಾಡಲು ಯತ್ನ... ವಿಡಿಯೋ ವೈರಲ್​​​​ ​ - ವೈರಲ್

ಗಂಡನ ಜತೆ ಹೋಗುತ್ತಿದ್ದ ಗಾಯಕಿ ಮಿಲೆ ಸೈರಸ್​ಗೆ ವ್ಯಕ್ತಿಯೋರ್ವ ಚುಂಬನಕ್ಕೆ ಮುಂದಾಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Jun 4, 2019, 12:36 PM IST

ಬಾರ್ಸಿಲೋನಾ: ವಿಶ್ವಪ್ರಸಿದ್ಧ ಗಾಯಕಿ ಮಿಲೆ ಸೈರಸ್‌ ಜತೆ ವ್ಯಕ್ತಿಯೋರ್ವ ಅಸಭ್ಯ ವರ್ತನೆ ತೋರಿದ್ದಾನೆ. ಆಕೆಗೆ ಬಲವಂತವಾಗಿ ಮುತ್ತಿಕ್ಕಲು ಯತ್ನಿಸಿದ್ದಾನೆ.

ಇಲ್ಲಿಯ ಪ್ರಿಮಾವೆರಾ ಸೌಂಡ್ ಫೆಸ್ಟಿವಲ್‌ಲ್ಲಿ ಈ ಪ್ರಸಂಗ ನಡೆದಿದ್ದು, ಮಿಲೆ ತನ್ನ ಪತಿ ಲಿಯಾಮ್ ಹೆಮ್ಸ್‌ವರ್ಥ್ ಜೊತೆ ಕಾರಿನತ್ತ ಸಾಗುತ್ತಿದ್ದರು. ಕ್ಯಾಮರಾ ಮನ್​​ಗಳು, ಅಭಿಮಾನಿಗಳ ನೂಕು ನುಗ್ಗಲಿನ ದಟ್ಟಣೆ ನಡುವೆ ಮಿಲೆ ಹೋಗುತ್ತಿದ್ದರು. ಈ ವೇಳೆ ಅನಾಮಿಕನೋರ್ವ ಇವರ ತಲೆಗೂದಲನ್ನು ಹಿಡಿದು, ತಮ್ಮತ್ತ ಎಳೆದುಕೊಂಡು ಚುಂಬಿಸಲು ಮುಂದಾಗಿದ್ದಾನೆ. ಆದರೆ, ಅಷ್ಟರಲ್ಲೇ ಅವರು ಆತನಿಂದ ಬಿಡಿಸಿಕೊಂಡು ಮುಂದೆ ಸಾಗಿದ್ದಾರೆ.

ಈ ಘಟನೆಯ ವಿಡಿಯೋವನ್ನು ಫಾಕ್ಸ್ ನ್ಯೂಸ್​ ತನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಪ್ರಪಂಚಾದ್ಯಂತ ಗೌರವ ಸಂಪಾದಿಸಿರುವ ಮಿಲೆಗೆ ಈ ಘಟನೆ ಮುಜುಗರನ್ನುಂಟು ಮಾಡಿದೆ ಎಂಬುದು ಅಭಿಮಾನಿಗಳ ಮಾತಾಗಿದೆ. ಈ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ABOUT THE AUTHOR

...view details