ಕರ್ನಾಟಕ

karnataka

ETV Bharat / sitara

ಸೇವಂತಿ ಧಾರಾವಾಹಿ ನಾಯಕಿಯಾಗಿ ಅರಗಿಣಿ ಚೆಲುವೆ ಮೇಘನಾ ಗೌಡ ಎಂಟ್ರಿ - ಕಿರುತೆರೆ ನಟಿ ಮೇಘನಾ ಗೌಡ ಸುದ್ದಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ನಟಿಸುತ್ತಿದ್ದ ಪಲ್ಲವಿ ಗೌಡ ನಟನೆ ಜಾಗಕ್ಕೆ ಮೇಘನಾ ಗೌಡ ಬಂದಿದ್ದಾರೆ.

meghana-gowda
ಸೇವಂತಿ ನಾಯಕಿಯಾಗಿ ಅರಗಿಣಿ ಚೆಲುವೆ 'ಮೇಘನಾ ಗೌಡ'

By

Published : Feb 20, 2020, 5:18 AM IST

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ನಟಿಸುತ್ತಿದ್ದ ಪಲ್ಲವಿ ಗೌಡ ನಟನೆಗೆ ಬಾಯ್ ಹೇಳಿದ್ದು, ಇದೀಗ ಆ ಜಾಗಕ್ಕೆ ಮೇಘನಾ ಗೌಡ ಬಂದಿದ್ದಾರೆ.

ಸೇವಂತಿ ನಾಯಕಿಯಾಗಿ ಅರಗಿಣಿ ಚೆಲುವೆ 'ಮೇಘನಾ ಗೌಡ'

ಅಂದ ಹಾಗೇ ಉದಯ ವಾಹಿನಿಯ ಪ್ರೇಕ್ಷಕರಿಗೆಲ್ಲಾ ಮೇಘನಾ ಮೊದಲೇ ಪರಿಚಿತರು. ಈ ಮೊದಲು ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಅವಳು ಕಥೆಯಾದವಳು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಮನೆ ಮಾತಾಗಿದ್ದರು.

ಮೇಘನಾ ಗೌಡ

ಅವಳು ಧಾರಾವಾಹಿಯ ನಂತರ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಮೇಘನಾ, ಇದೀಗ ಸೇವಂತಿಯಾಗಿ ಮತ್ತೊಮ್ಮೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಆಕಸ್ಮಿಕವಾಗಿ ನಟನಾ ಲೋಕಕ್ಕೆ ಬಂದ ಮೇಘನಾಗೆ ನಿರೂಪಕಿಯಾಗಬೇಕು ಎಂಬ ಬಯಕೆಯಿತ್ತು. ಫೇಸ್​ಬುಕ್​ನಲ್ಲಿ ಮೇಘನಾ ಫೋಟೋ ನೋಡಿದ ನಿರ್ದೇಶಕ ರವಿಗರಣಿ, 'ಧಾರಾವಾಹಿಯಲ್ಲಿ ನಟಿಸುತ್ತೀರಾ' ಎಂದು ಕೇಳಿದ ಒಂದು ಪ್ರಶ್ನೆ ಇಂದು ಮೇಘನಾ ಅವರನ್ನು ಬಣ್ಣದ ಜಗತ್ತಿನಲ್ಲಿ ಮಿನುಗುವಂತೆ ಮಾಡಿದೆ.

ಮೇಘನಾ ಗೌಡ

ಉತ್ತರ ಕರ್ನಾಟಕದ ಸೊಗಡಿನ ಭಾಷೆಯನ್ನೊಳಗೊಂಡ ಅರಗಿಣಿ ಧಾರಾವಾಹಿಯಲ್ಲಿ ನಾಯಕಿ ಖುಷಿ ಆಗಿ ನಟಿಸಿ ಸೈ ಎನಿಸಿಕೊಂಡ ಮೇಘನಾಗೆ ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಕೊಂಚ ಭಯವಾಗಿತ್ತು‌. ಹಿರಿಯ ಕಲಾವಿದರುಗಳ ನಡುವೆ ನಟಿಸುವುದು ಹೇಗೆ ಎಂಬ ಅಳುಕು ಕಾಡುತ್ತಿತ್ತು. ಆದರೆ, ರವಿ ಗರಣಿ ಮತ್ತು ಹಿರಿಯ ಕಲಾವಿದರುಗಳಿಂದ ಎಲ್ಲವನ್ನು ಸುಲಲಿತವಾಗಿ ಕಲಿತೆ ಎನ್ನುತ್ತಾರೆ ಮೇಘನಾ.

ಸೇವಂತಿ ನಾಯಕಿಯಾಗಿ ಅರಗಿಣಿ ಚೆಲುವೆ 'ಮೇಘನಾ ಗೌಡ'
ಅರಗಿಣಿಯ ಖುಷಿಯಾಗಿ ಜನರ ಮನಸ್ಸು ಸೆಳೆದ ಮೇಘನಾ ಅರಗಿಣಿ ನಂತರ ಸುಮ್ಮನೆ ಕೂರಲಿಲ್ಲ. ಬದಲಿಗೆ ತಮಿಳು, ತೆಲುಗು ಧಾರಾವಾಹಿಯಿಂದ ಅವರಿಗೆ ಅವಕಾಶಗಳು ಬಂದವು. ಅದರಲ್ಲೂ ನಟಿಸಿ ಸೈ ಎನಿಸಿಕೊಂಡಿರು.
ಮೇಘನಾ ಗೌಡ
ನಟನೆಗೆ ಹೆಚ್ಚಿನ ಪ್ರಾಶಸ್ತ್ಯ ಬಯಸುವ ಈಕೆಗೆ ಗ್ಲಾಮರಸ್ ಪಾತ್ರಗಳಿಗಿಂತಲೂ ತೂಕದ ಪಾತ್ರವನ್ನೇ ಬಯಸುವುದು ಹೆಚ್ಚು. ಅದರಲ್ಲೂ ಉತ್ತಮ ಸಂದೇಶ ಸಾರುವಂತಹ ಪಾತ್ರಗಳಿಗೆ ಮೇಘನಾ ಅವರ ಆದ್ಯತೆ ಮೊದಲು. ಮಾತ್ರವಲ್ಲ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಬಯಕೆ ನನ್ನದು ಎನ್ನುವ ಚೆಂದುಳ್ಳಿ ಚೆಲುವೆ ತೆಲುಗಿನ 'ಸ್ವರ್ಣಖಡ್ಗಂ'ನಲ್ಲಿ ನಟಿಸುವ ಮೂಲಕ ಅದನ್ನು ಈಡೇರಿಸಿಕೊಂಡಿದ್ದಾರೆ. ಇದರ ಜೊತೆಗೆ ಹಿರಿಯ ನಟ ಶಶಿಕುಮಾರ್ ಅವರ ಮಗ ಆದಿತ್ಯ ಶಶಿಕುಮಾರ್ ಅಭಿನಯದ 'ಸೀತಾಯಾನಂ'ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿ ಪರದೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.
ಮೇಘನಾ ಗೌಡ

ABOUT THE AUTHOR

...view details