ಬಿಗ್‌ಬಾಸ್ ಕನ್ನಡ ಸೀಸನ್ 8 ರಲ್ಲಿ ಜನರ ಪ್ರೀತಿಗೆ ಪಾತ್ರರಾಗಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಮನೆಯಿಂದ ಹೊರ ಬಂದ ಮೇಲೆ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದನ್ನು ಕಲರ್ಸ್ ಕನ್ನಡದ ಫೇಸ್ಬುಕ್ ಲೈವ್ನಲ್ಲಿ ಹೇಳಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆ ಸೇರಿದ್ದ ವೈಷ್ಣವಿ ಗೌಡ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗಿದ್ದರು. ಕಾರಣ ಅವರು ಎಂತಹ ಕಷ್ಟದ ಸ್ಥಿತಿ ಬಂದರೂ ಸಿಟ್ಟು ಮಾಡಿಕೊಳ್ಳದೇ ಮೌನ ವಹಿಸಿದ್ದು. ವೈಷ್ಣವಿ ಯಾಕೆ ಇಷ್ಟೊಂದು ಮೌನವಾಗಿರುತ್ತಾರೆ? ಅವರು ತಮ್ಮ ವಾಸ್ತವ ಜೀವನದಲ್ಲೂ ಇಷ್ಟೇ ಸೈಲೆಂಟಾಗಿ ಇರುತ್ತಾರಾ? ಎಂದು ಅಭಿಮಾನಿಗಳು ಪ್ರಶ್ನೆ ಕೇಳಿದ್ದಾರೆ. ಇದೀಗ ನಟಿ ಇದಕ್ಕೆ ಉತ್ತರ ನೀಡಿದ್ದು, ಸಾಕಷ್ಟು ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
'ಬಹುತೇಕರು ನೀವು ನಮ್ಮ ಫೇವರಿಟ್ ಸ್ಪರ್ಧಿ' ಎಂದು ಹೇಳಿಕೊಂಡಿದ್ದರೆ, ಮತ್ತೆ ಕೆಲವರು 'ನಿಮ್ಮನ್ನು ಬಿಗ್ ಬಾಸ್ ಮನೆಯಲ್ಲಿ ನೋಡಿದ ಮೇಲೆ, ಮತ್ತಷ್ಟು ಗೌರವ, ಪ್ರೀತಿ ಹೆಚ್ಚಾಗಿದೆ' ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.