ಟಗರು ಪುಟ್ಟಿ ಮಾನ್ವಿತ ಕಾಮತ್ ಮೊದಲ ಬಾರಿಗೆ ಕಿರುತೆರೆಗೆ ಬಂದಿದ್ದಾರೆ. ಅರೆ, ಮಾನ್ವಿತ ಕೂಡಾ ಸಿನಿಮಾ ಬಿಟ್ಟು ಕಿರುತೆರೆಗೆ ಬಂದ್ರಾ ಎಂದುಕೊಳ್ಳಬೇಡಿ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯ ಅತಿಥಿ ಪಾತ್ರದಲ್ಲಿ ಮಾನ್ವಿತ ಕಾಣಿಸಿಕೊಳ್ಳುತ್ತಿದ್ದಾರೆ.
ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಮಾನ್ವಿತ ಕಾಮತ್...!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ಧಾರಾವಾಹಿಯ ಅತಿಥಿ ಪಾತ್ರದಲ್ಲಿ 'ಟಗರು' ಖ್ಯಾತಿಯ ಮಾನ್ವಿತ ಕಾಮತ್ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ರಂಜನಿ ರಾಘವನ್ ಹಾಗೂ ಕಿರಣ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡತಿ ಧಾರಾವಾಹಿಯಲ್ಲಿ ಪಾರ್ಟಿ ನಡೆಯುವ ದೃಶ್ಯವಿದ್ದು ಅದರಲ್ಲಿ ಮಾನ್ವಿತ ಕಾಣಿಸಿಕೊಳ್ಳಲಿದ್ದಾರೆ. ಮಾನ್ವಿತ ಕೇವಲ ಪಾರ್ಟಿ ಎಪಿಸೋಡ್ನಲ್ಲಿ ಮಾತ್ರ ಕಾಣಿಸುತ್ತಾರಾ ಅಥವಾ ಮುಂದಿನ ಸಂಚಿಕೆಗಳಲ್ಲಿ ಕೂಡಾ ಇರಲಿದ್ದಾರಾ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಮಾನ್ವಿತ, ಧಾರಾವಾಹಿಯಲ್ಲಿ ನಟಿಸುತ್ತಿರುವ ವಿಚಾರವನ್ನು ರಂಜನಿ ರಾಘವನ್ ಹೇಳಿಕೊಂಡಿದ್ದಾರೆ. ಮಾನ್ವಿತ ಜೊತೆಗಿರುವ ಫೋಟೋವನ್ನು ರಂಜನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 'ಪಾರ್ಟಿಯಲ್ಲಿ ನಮ್ಮಿಬ್ಬರನ್ನು ಒಟ್ಟಿಗೆ ನೋಡಲಿದ್ದೀರಿ' ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ 'ಅದು ಯಾವ ಪಾರ್ಟಿ ಎಂಬುದನ್ನು ತಿಳಿಯಲು ತಪ್ಪದೆ ಕನ್ನಡತಿ ಧಾರಾವಾಹಿಯನ್ನು ನೋಡಿ' ಎಂದು ಕೂಡಾ ರಂಜನಿ ಬರೆದುಕೊಂಡಿದ್ದಾರೆ.