ಕರ್ನಾಟಕ

karnataka

ETV Bharat / sitara

ಕನ್ನಡ ಧಾರಾವಾಹಿಯ ತೆಲುಗು ರೀಮೇಕ್​​ನಲ್ಲಿ ಕನ್ನಡತಿ ಮಾನ್ಸಿ ಜೋಷಿ - Paru serial Anushka fame actress

ಕನ್ನಡ ಧಾರಾವಾಹಿಯ ತೆಲುಗು ರೀಮೇಕ್ 'ಅಮೃತ ವರ್ಷಿಣಿ' ಯಲ್ಲಿ ಮಾನ್ಸಿ ಜೋಷಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಬಿಳಿ ಹೆಂಡ್ತಿ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಮಾನ್ಸಿ ಇದೀಗ ತೆಲುಗು ಹಾಗೂ ತಮಿಳು ಕಿರುತೆರೆ ವೀಕ್ಷಕರಿಗೂ ಪರಿಚಯ.

Mansi joshi in Telugu serial
ತೆಲುಗು ಧಾರಾವಾಹಿಯಲ್ಲಿ ಮಾನ್ಸಿ ಜೋಷಿ

By

Published : Nov 2, 2020, 12:11 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿರುವ ಮಾನ್ಸಿ ಜೋಷಿ ಅಭಿನಯಕ್ಕೆ ಮನ ಸೋಲದವರಿಲ್ಲ. ನೆಗೆಟಿವ್ ರೋಲ್ ಮೂಲಕ ಮನೆ ಮಾತಾಗಿರುವ ಮಾನ್ಸಿ ಜೋಷಿ ಇದೀಗ ಅಮೃತ ವರ್ಷಿಣಿಯಾಗಿ ಮೋಡಿ ಮಾಡುತ್ತಿದ್ದಾರೆ.

ಕಿರುತೆರೆ ನಟಿ ಮಾನ್ಸಿ ಜೋಷಿ

ತೆಲುಗು ಭಾಷೆಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಅಮೃತ ವರ್ಷಿಣಿಯ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಮಾನ್ಸಿ ಮೊದಲ ಬಾರಿಗೆ ತೆಲುಗು ಕಿರುತೆರೆ ವೀಕ್ಷಕರಿಗೂ ಪರಿಚಯವಾಗಲು ಹೊರಟಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಸ್ತೂರಿ ನಿವಾಸ' ಧಾರಾವಾಹಿ ತೆಲುಗಿನಲ್ಲಿ 'ಅಮೃತ ವರ್ಷಿಣಿ' ಹೆಸರಿನಲ್ಲಿ ರೀಮೇಕ್ ಆಗುತ್ತಿದೆ. ಕನ್ನಡ ಧಾರಾವಾಹಿಯ ತೆಲುಗು ರೀಮೇಕ್​​​ಗೆ ಕನ್ನಡತಿಯೇ ನಾಯಕಿಯಾಗಿ ನಟಿಸುತ್ತಿರುವುದು ಹೆಮ್ಮೆಯ ವಿಚಾರ.

'ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ರಮ್ಯ ಆಗಿ ನಟಿಸುವ ಮೂಲಕ ಮಾನ್ಸಿ ಜೋಷಿ ಕಿರುತೆರೆಗೆ ಬಂದರು. ನಂತರ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣ್ ತಂಗಿ ಅನ್ವಿತಾ ಆಗಿ ನಟಿಸಿ ಉದಯ ವಾಹಿನಿಯ ನಾಯಕಿ ಧಾರಾವಾಹಿಯಲ್ಲಿ ವಿಲನ್ ಸೌಜನ್ಯ ಆಗಿ ನಟಿಸಿ ಹೆಸರಾದರು. ಇದೀಗ ಪಾರು ಧಾರಾವಾಹಿಯ ಅನುಷ್ಕಾ ಆಗಿ ನಟಿಸಿ ಹೆಸರಾಗಿರುವ ಮಾನ್ಸಿ ಜೋಷಿ ಈ ಬಾರಿಯ ಜೀ ಕುಟುಂಬ ಅವಾರ್ಡ್​ನಲ್ಲಿ ಬೆಸ್ಟ್ ವಿಲನ್ ಪ್ರಶಸ್ತಿ ಪಡೆದಿದ್ದಾರೆ‌.

ಪಾರು ಧಾರಾವಾಹಿ ಖ್ಯಾತಿಯ ಮಾನ್ಸಿ

ತಮಿಳು ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ಮಾನ್ಸಿ ಜೋಷಿ ಕೊರೊನಾ ಲಾಕ್​​ಡೌನ್ ಕಾರಣದಿಂದ ಆ ಧಾರಾವಾಹಿಯಿಂದ ಹೊರ ಬಂದಿದ್ದರು. ಆದರೆ ಅಲ್ಲಿ ಕಳೆದುಕೊಂಡ ಅವಕಾಶವನ್ನು ಮಾನ್ಸಿ ಇದೀಗ ತೆಲುಗು ಧಾರಾವಾಹಿಯಲ್ಲಿ ಗಳಿಸಿದ್ದು, ಪರಭಾಷೆಯಲ್ಲಿ ಮಿಂಚಲು ಹೊರಟಿದ್ದಾರೆ.

ABOUT THE AUTHOR

...view details