ಬಿಗ್ಬಾಸ್ ಸೀಸನ್ 8ರ ಕೊನೆಯ ರಿಯಾಲಿಟಿ ಎಪಿಸೋಡ್ ಶುಕ್ರವಾರ ಮುಕ್ತಾಯವಾಗಿದೆ. ಇಂದು (ಶನಿವಾರ) ಹಾಗೂ ನಾಳೆ ಸಂಜೆ ಆರು ಗಂಟೆಗೆ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಅರವಿಂದ್ ಕೆ.ಪಿ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಫಿನಾಲೆ ವಾರದ ತನಕ ತಮ್ಮ ವೈಯಕ್ತಿಕ ಆಟ ಆಡುವ ಮೂಲಕ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ. ಕೊನೆಯ ರಿಯಾಲಿಟಿ ಎಪಿಸೋಡ್ನಲ್ಲಿ ದಿವ್ಯ ಉರುಡುಗ ಅವರ ಫೋಟೋ ವಾಲ್ ಹಾಗೂ ಮಂಜು ಪಾವಗಡ ಅವರ ಈಡೇರದ ಆಸೆ ಈಡೇರಿದೆ.
ಮಂಜು ಪಾವಗಡ ಶಿವರಾಜ್ಕುಮಾರ್ ಅವರ ಶುಭ ಹಾರೈಕೆ ಬೇಕು ಎಂದು ಕೋರಿದ್ದರು. 'ಒಂದೇ ಒಂದು ಆಸೆ ಇದೆ. ಶಿವಣ್ಣ ಅಂದ್ರೆ ಇಷ್ಟ. ಅವರ ಕಡೆಯಿಂದ ಆಶೀರ್ವಾದ ಬೇಕು. ಇದು ನನ್ನ ಆಸೆ. ದಯವಿಟ್ಟು ನೆರವೇರಿಸಿ' ಎಂದು ಮಂಜು ಕಿವಿಯ ಆಕೃತಿ ಬಳಿ ಕೋರಿದ್ದರು.