ನಗೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಹಾಸ್ಯ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಬಹಳ ಇಷ್ಟ. ಎಷ್ಟೇ ದು:ಖ ಇದ್ದರೂ ಎಲ್ಲವನ್ನೂ ಎಂಜಾಯ್ ಮಾಡುತ್ತಾರೆ. ಇದೀಗ ಸ್ಯಾಂಡಲ್ವುಡ್ ಖ್ಯಾತ ಕಾಮಿಡಿ ನಟರೆಲ್ಲರೂ ನಿಮ್ಮನ್ನು ರಂಜಿಸಲು ಕಿರುತೆರೆಗೆ ಬರುತ್ತಿದ್ದಾರೆ.
ಸಾಧು ಕೋಕಿಲ, ಚಿಕ್ಕಣ್ಣ,ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ನಟಿಸಿರುವ 'ಮನೆ ಮಾರಾಟಕ್ಕಿದೆ' ಸಿನಿಮಾ ಇದೇ ಶನಿವಾರ ಸಂಜೆ 6.30ಕ್ಕೆ ನಿಮ್ಮ ಮೆಚ್ಚಿನ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ವಾರವೂ ಹೊಸ ಮನರಂಜನೆ ಮೂಲಕ ರಂಜಿಸುತ್ತಿರುವ ಉದಯ ವಾಹಿನಿ ಇದೀಗ ನಿಮ್ಮನ್ನು ನಕ್ಕು ನಗಿಸಲು ಹೊರಟಿದೆ. ಮಂಜು ಸ್ವರಾಜ್ ನಿರ್ದೇಶನದ 'ಮನೆ ಮಾರಾಟಕ್ಕಿದೆ' ಸಿನಿಮಾ 2019 ರಲ್ಲಿ ಬಿಡುಗಡೆಯಾಗಿತ್ತು. ತೆಲುಗಿನ 'ಆನಂದೋ ಬ್ರಹ್ಮ' ಎಂಬ ಸಿನಿಮಾದ ರೀಮೇಕ್ ಇದಾಗಿದ್ದು ಈ ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ರಾಜೇಶ್ ನಟರಂಗ, ಕಾರುಣ್ಯಾ ರಾಮ್ ಮತ್ತು ಶ್ರುತಿ ಹರಿಹರನ್ ಅಭಿನಯಿಸಿದ್ದಾರೆ.