ಕರ್ನಾಟಕ

karnataka

ETV Bharat / sitara

ಹಿರಿತೆರೆಯಲ್ಲೂ ಮಿಂಚಲು ಬರುತ್ತಿದ್ದಾಳೆ ಮಗಳು ಜಾನಕಿ.. - Magalu Janaki Darawahi

ಕೊರೊನಾ ಲಾಕ್​ಡೌನ್​ ವೇಳೆ ತಮ್ಮ ಹುಟ್ಟೂರು ಚಿಕ್ಕಮಗಳೂರಿನಲ್ಲಿ ಲಾಕ್ ಆಗಿರುವ ಗಾನವಿ ಹಸಿರಿನ ಪರಿಸರದ ನಡುವೆ ಹಾಯಾಗಿ ಮನೆ ಮಂದಿಯ ಜೊತೆ ಕಾಲ ಕಳೆಯುತ್ತಿದ್ದಾರೆ..

Magalu Janaki serial star is set to shine in sandalwood
ಹಿರಿತೆರೆಯಲ್ಲೂ ಮಿಂಚಲು ಸಜ್ಜಾಗುತ್ತಿದ್ದಾರೆ ಮಗಳು ಜಾನಕಿ ಖ್ಯಾತಿಯ ಗಾನವಿ

By

Published : Jun 26, 2020, 2:42 PM IST

ಟಿ ಎನ್‌ ಸೀತಾರಾಮ್​ ಅವರ ಮುಖ್ಯ ಭೂಮಿಕೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಮಗಳು ಜಾನಕಿ ಕಾರಣಾಂತರಗಳಿಂದ ಮುಕ್ತಾಯ ಕಂಡಿದೆ. ಮುಗ್ಧ,ಮುದ್ದು ಮುಖದ ಜಾನಕಿ ಕಿರುತೆರೆಯಲ್ಲೀಗ ಕಾಣ್ತಿಲ್ಲ. ಆದರೂ ಪ್ರೇಕ್ಷಕರು ನಿರಾಶೆರಾಗಬೇಕಿಲ್ಲ.. ಹಿರಿತೆರೆಯ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾಳೆ ಮಗಳು ಜಾನಕಿ.

ಹಿರಿತೆರೆಯಲ್ಲೂ ಮಿಂಚಲು ಸಜ್ಜಾಗುತ್ತಿದ್ದಾರೆ ಮಗಳು ಜಾನಕಿ ಖ್ಯಾತಿಯ ಗಾನವಿ

ಮಗಳು ಜಾನಕಿ ಧಾರಾವಾಹಿಯ ಜಾನಕಿ ಆಗಿ ಕಡಿಮೆ ಅವಧಿಯಲ್ಲಿಯೇ ವೀಕ್ಷಕರ ಮನ ಗೆದ್ದಿರುವ ಚಿಕ್ಕಮಗಳೂರಿನ ಚೆಲುವೆಯ ಹೆಸರು ಗಾನವಿ ಲಕ್ಷ್ಮಣ್. ಇಡೀ ಕರ್ನಾಟಕದಾದ್ಯಂತ ಜಾನಕಿ ಎಂದೇ ಮನೆ ಮಾತಾಗಿರುವ ಈಕೆಯ ನಿಜ ಹೆಸರು ಅದೆಷ್ಟೋ ಜನರಿಗೆ ತಿಳಿದೇ ಇಲ್ಲ. ಮಗಳು ಜಾನಕಿ ಧಾರಾವಾಹಿಯ ಮೂಲಕ ಬಣ್ಣದ ಪಯಣ ಆರಂಭಿಸಿರುವ ಗಾನವಿ ಮೊದಲ ಧಾರಾವಾಹಿಯಲ್ಲೇ ಜನಪ್ರಿಯತೆ ಪಡೆದವರು. ಇದೀಗ ಕಾರಣಾಂತರಗಳಿಂದ ಮಗಳು ಜಾನಕಿ ಧಾರಾವಾಹಿ ಮುಕ್ತಾಯಗೊಂಡಿದೆ.

ಜಾನಕಿ ಅಲಿಯಾಸ್​ ಗಾನವಿ ಈಗೇನು ಮಾಡುತ್ತಿದ್ದಾರೆ?. ಅವರ ಮುಂದಿನ ಪ್ಲಾನ್‌ಗಳೇನು ಎಂಬುದು ತಿಳಿಯಬೇಕೇ? ಹಾಗಿದ್ದರೆ ಇಲ್ಲಿ ಕೇಳಿ.. ಕೊರೊನಾ ಲಾಕ್​ಡೌನ್​ ವೇಳೆ ತಮ್ಮ ಹುಟ್ಟೂರು ಚಿಕ್ಕಮಗಳೂರಿನಲ್ಲಿ ಲಾಕ್ ಆಗಿರುವ ಗಾನವಿ ಹಸಿರಿನ ಪರಿಸರದ ನಡುವೆ ಹಾಯಾಗಿ ಮನೆ ಮಂದಿಯ ಜೊತೆ ಕಾಲ ಕಳೆಯುತ್ತಿದ್ದಾರೆ.

ಮಗಳು ಜಾನಕಿ ಧಾರಾವಾಹಿಯ ಗಾನವಿ

ನಟನೆಯ ಬಗ್ಗೆ ಹೇಳೋದಾದ್ರೆ ಇಷ್ಟು ದಿನ ಕಿರುತೆರೆಯಲ್ಲಿ ಜಾನಕಿ ಆಗಿ ಎಲ್ಲರನ್ನು ರಂಜಿಸಿದ ಚಿಕ್ಕಮಗಳೂರು ಚೆಲುವೆ ಮುಂದೆ ಹಿರಿತೆರೆಗೂ ಕಾಲಿಡಲಿದ್ದಾರೆ. ಗಿರೀಶ್ ನಿರ್ದೇಶನದ ಭಾವಚಿತ್ರ ಸಿನಿಮಾದಲ್ಲಿ ನಟಿಸುವ ಮೂಲಕ ಹಿರಿತೆರೆಗೂ ಪಾದಾರ್ಪಣೆ ಮಾಡಲಿರುವ ಗಾನವಿ ಅಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ.

ಹಿರಿತೆರೆಯಲ್ಲೂ ಮಿಂಚಲು ಸಜ್ಜಾಗುತ್ತಿದ್ದಾರೆ ಮಗಳು ಜಾನಕಿ ಖ್ಯಾತಿಯ ಗಾನವಿ

ಈ ಬಗ್ಗೆ ಸ್ವತಃ ಗಾನವಿ ಮಾತನಾಡಿ, " ನಾನು ಇಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದೇನೆ ಅಂದರೆ ಅದಕ್ಕೆ ಮಗಳು ಜಾನಕಿ ಧಾರಾವಾಹಿಯೇ ಮುಖ್ಯ ಕಾರಣ. ನಾನು ಎಲ್ಲೇ ಹೋದರೂ ಜನ ನನ್ನನ್ನು ಗುರುತಿಸುವುದು ಜಾನಕಿಯಾಗಿ. ನನಗೆ ಇಷ್ಟೊಂದು ಜನಪ್ರಿಯತೆ ತಂದ ಪಾತ್ರ ಜಾನಕಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೀಗ ನಾನು ಹಿರಿತೆರೆಯತ್ತ ಮುಖ ಮಾಡಿದ್ದೇನೆ. ಗಿರೀಶ್ ನಿರ್ದೇಶನದ ಭಾವಚಿತ್ರ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಅಂದ ಹಾಗೇ ಈ ಚಿತ್ರದಲ್ಲಿ ಎರಡು ಶೇಡ್ ಇರುವ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ತಮ್ಮ ಸಿನಿ ಜರ್ನಿ ವಿವರಿಸಿದರು.

ABOUT THE AUTHOR

...view details