ಕರ್ನಾಟಕ

karnataka

ETV Bharat / sitara

ಶೂಟಿಂಗ್​ನಿಂದ ಬ್ರೇಕ್ ಪಡೆದು ಪ್ರಕೃತಿಯ ಮಧ್ಯೆ ಕಾಲ ಕಳೆದ ಗಾನವಿ ಲಕ್ಷ್ಮಣ್ - ಮಗಳು ಜಾನಕಿ ಧಾರಾವಾಹಿಯಲ್ಲಿ ಜಾನಕಿ

ಭಾವಚಿತ್ರ ಸಿನಿಮಾದ ಮೂಲಕ ಸ್ಯಾಂಡಲ್​ವುಡ್ ಪ್ರವೇಶಿಸಲಿರುವ ಗಾನವಿ, ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಹೀರೋ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ಚಿತ್ರಗಳತ್ತ ಗಮನ ಹರಿಸುತ್ತಿರುವ ಗಾನವಿ ಕಿರುತೆರೆಯಲ್ಲಿ ಉತ್ತಮ ಪಾತ್ರ ಸಿಕ್ಕರೆ ಮಾತ್ರ ಅಭಿನಯಿಸುವುದಾಗಿ ಹೇಳಿಕೊಂಡಿದ್ದಾರೆ..

Ganavi Laxman
ಗಾನವಿ ಲಕ್ಷ್ಮಣ್

By

Published : Dec 28, 2020, 12:11 PM IST

ಮಗಳು ಜಾನಕಿ ಧಾರಾವಾಹಿಯಲ್ಲಿ ಜಾನಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದ ಗಾನವಿ ಲಕ್ಷ್ಮಣ್ ಹಿರಿತೆರೆಗೂ ಕಾಲಿಟ್ಟಿದ್ದು, ತುಂಬಾ ಬ್ಯುಸಿಯಾಗಿದ್ದಾರೆ. ಸದ್ಯ ಶೂಟಿಂಗ್​ನಿಂದ ಬ್ರೇಕ್ ಪಡೆದುಕೊಂಡಿರುವ ಗಾನವಿ, ಪ್ರಕೃತಿಯ ಮಧ್ಯೆ ಕಾಲ ಕಳೆಯುತ್ತಿದ್ದಾರೆ. ಆ ಫೋಟೋಗಳನ್ನ ತಮ್ಮ ಇನ್ಸ್‌ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದರ ಜೊತೆಗೆ ಗಾನವಿ ಅವರು ವಿಡಿಯೋವೊಂದನ್ನು ಶೇರ್ ಮಾಡಿದ್ದು, ಕೇಶವಂತೇಶ್ವರ ದೇವಸ್ಥಾನ ಕುಂದಾಪುರಕ್ಕೆ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರಿನವರಾದ ಗಾನವಿ ಚಾರಣದಲ್ಲಿಯೂ ಆಸಕ್ತಿ ಹೊಂದಿದ್ದು "ನಿಸರ್ಗದಲ್ಲಿ ಪಯಣ ಹಾಗೂ ಚಾರಣ ನನ್ನ ಆಸಕ್ತಿಯಾಗಿದೆ.

ರಘು ರಾಮಪ್ಪ ನನ್ನನ್ನು ಚಾರಣದಲ್ಲಿ ಸೇರಿಸಿಕೊಂಡಿರಲೇ ಇಲ್ಲ. ಮಹಿಳೆಯರಿಗೆ ಸ್ಟಾಮಿನೇ ಇಲ್ಲ ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ, ಅವರ ಅಭಿಪ್ರಾಯವನ್ನು ಸುಳ್ಳಾಗಿಸಿ ಚಾರಣವನ್ನು ಪೂರ್ತಿಗೊಳಿಸಿದೆ" ಎಂಬುದನ್ನು ಹಂಚಿಕೊಂಡಿದ್ದಾರೆ.

ಭಾವಚಿತ್ರ ಸಿನಿಮಾದ ಮೂಲಕ ಸ್ಯಾಂಡಲ್​ವುಡ್ ಪ್ರವೇಶಿಸಲಿರುವ ಗಾನವಿ, ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಹೀರೋ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ಚಿತ್ರಗಳತ್ತ ಗಮನ ಹರಿಸುತ್ತಿರುವ ಗಾನವಿ ಕಿರುತೆರೆಯಲ್ಲಿ ಉತ್ತಮ ಪಾತ್ರ ಸಿಕ್ಕರೆ ಮಾತ್ರ ಅಭಿನಯಿಸುವುದಾಗಿ ಹೇಳಿಕೊಂಡಿದ್ದಾರೆ.

ABOUT THE AUTHOR

...view details