ಕರ್ನಾಟಕ

karnataka

By

Published : Jul 25, 2020, 12:22 AM IST

ETV Bharat / sitara

ಐಎಎಸ್ ಅಧಿಕಾರಿಯಾಗಿ ಬರುತ್ತಿದ್ದಾರೆ 'ಮಗಳು ಜಾನಕಿ'ಯ ನಿರಂಜನ್ !

ಮಗಳು ಜಾನಕಿ ಧಾರಾವಾಹಿಯಲ್ಲಿ ನಿರಂಜನ್​ ಆಗಿ ಅಭಿನಯಿಸಿದ್ದ ರಾಕೇಶ್ ಮಯ್ಯ, ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಘರ್ಷ ಧಾರಾವಾಹಿಯಲ್ಲಿ ಐಎಎಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ.

ರಾಕೇಶ್ ಮಯ್ಯ
ರಾಕೇಶ್ ಮಯ್ಯ

ಟಿ.ಎನ್. ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯಲ್ಲಿ ನಾಯಕ ನಿರಂಜನ್​ ಆಗಿ ನಟಿಸಿ ಮನೆ ಮಾತಾಗಿದ್ದ ರಾಕೇಶ್ ಮಯ್ಯ, ಇದೀಗ ಮತ್ತದೇ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಘರ್ಷ ಧಾರಾವಾಹಿಯಲ್ಲಿ ಐಎಎಸ್ ಆಫೀಸರ್ ರಾಕೇಶ್ ಆಗಿ ರಾಕೇಶ್ ಮಯ್ಯ ಅಭಿನಯಿಸುತ್ತಿದ್ದಾರೆ.

ರಾಕೇಶ್ ಮಯ್ಯ

"ಮಗಳು ಜಾನಕಿಯಲ್ಲಿನ ನಿರಂಜನ ಪಾತ್ರವನ್ನು ನೀವೆಲ್ಲಾ ಮೆಚ್ಚಿಕೊಂಡಿದ್ದೀರಿ. ಮಾತ್ರವಲ್ಲ ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ನಿಮ್ಮ ಪ್ರೀತಿಯ ಮಗಳು ಜಾನಕಿ ಧಾರಾವಾಹಿ ಕಾರಣಾಂತರಗಳಿಂದ ಪ್ರಸಾರ ನಿಲ್ಲಿಸಿರುವುದು ನಿಮಗೆಲ್ಲಾ ತಿಳಿದೇ ಇದೆ. ಇದೀಗ ನಾನು ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಅದು ಹೊಸ ಪಾತ್ರದ ಮೂಲಕ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಶ್ರುತಿ ನಾಯ್ಡು ನಿರ್ದೇಶನದ ಸಂಘರ್ಷ ಧಾರಾವಾಹಿಯಲ್ಲಿ ನಾನು ರಾಕೇಶ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾಯಕಿ ಇಂದಿರಾ ಅವರನ್ನು ಪ್ರೀತಿಸುವ ಪಾತ್ರ ಇದು" ಎನ್ನುತ್ತಾರೆ ರಾಕೇಶ್ ಮಯ್ಯ.

ರಾಕೇಶ್ ಮಯ್ಯ

ರೀಲ್​ನಲ್ಲೂ ರಿಯಲ್:ಮಗಳು ಜಾನಕಿ ಧಾರಾವಾಹಿಯಲ್ಲಿ ನಾನು ಫೇಕ್ ಐಎಎಸ್ ಅಧಿಕಾರಿ ಆಗಿ ನಟಿಸಿದ್ದೆ. ಆಗ ಸುಮಾರು ಜನ ನಿಜವಾಗಿ ಕಾಣಿಸಿಕೊಳ್ಳಿ, ಯಾಕೆ ಸುಮ್ಮಸುಮ್ಮನೆ ಹೇಳ್ತೀರಾ ಎಂದು ಕೇಳಿದ್ದರು. ಆದರೆ ಇದೀಗ ಸಂಘರ್ಷ ಧಾರಾವಾಹಿಯಲ್ಲಿ ನಾನು ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ ಎಂದು ಪಾತ್ರದ ಬಗ್ಗೆ ಹೇಳುತ್ತಾರೆ ಮಯ್ಯ.

ರಾಕೇಶ್ ಮಯ್ಯ

ಪ್ರೀತಿ ಪ್ರೇಮ ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದ ರಾಕೇಶ್ ಮಯ್ಯ ಲವ್ ಲವಿಕೆ ಧಾರಾವಾಹಿಯಲ್ಲಿ ನಾಯಕನ ಅಣ್ಣನಾಗಿ ಅಭಿನಯಿಸಿದ್ದರು. ಮುಂದೆ ನಿಹಾರಿಕಾ ಧಾರಾವಾಹಿಯಲ್ಲಿ ನಾಯಕನ ಗೆಳೆಯನಾಗಿ ನಟಿಸಿದ್ದ ರಾಕೇಶ್ ಮಯ್ಯ ಅವಳು ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. ಮುಂದೆ ಮಗಳು ಜಾನಕಿಯ ನಿರಂಜನ್ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ರಾಕೇಶ್ ಮಯ್ಯ ಇದೀಗ ಸಂಘರ್ಷ ಧಾರಾವಾಹಿಯ ಮೂಲಕ ಮತ್ತೆ ಮರಳಿ ಬರುತ್ತಿದ್ದಾರೆ.

ರಾಕೇಶ್ ಮಯ್ಯ

ಕಿರುಚಿತ್ರದಲ್ಲಿಯೂ ಮಿಂಚಿದ ಪ್ರತಿಭೆ:ಕಿರುತೆರೆಯ ಜೊತೆಗೆ ಒಂದಷ್ಟು ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ ರಾಕೇಶ್ ಮಯ್ಯ. ಸಿಲ್ಕ್ ಬೋರ್ಡ್ ಟ್ರಾಫಿಕ್ ಲವ್ ಸ್ಟೋರಿ, ಮರೀಚಿಕೆ, ಅನಾಹುತ, ಹ್ಯಾಪಿ ಬ್ರೇಕ್ ಅಪ್, ಬಿಸಿ ಬೇಳೆ ಬಾತ್ ಎಂಬ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details