ಕರ್ನಾಟಕ

karnataka

ETV Bharat / sitara

'ಮಗಳು ಜಾನಕಿ' ಧಾರಾವಾಹಿಯ ಮಂಗಳತ್ತೆ ಇನ್ನಿಲ್ಲ - undefined

ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಮಂಗಳತ್ತೆ ಪಾತ್ರ ನಿರ್ವಹಿಸುತ್ತಿದ್ದ ಶೋಭಾ ನಿನ್ನೆ ಚಿತ್ರದುರ್ಗದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ನಟಿ ಶೋಭಾ

By

Published : Jul 18, 2019, 2:38 PM IST

'ಮಗಳು ಜಾನಕಿ' ಖಾಸಗಿ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಟಿ.ಎನ್​.ಸೀತಾರಾಮ್ ನಿರ್ದೇಶನದ ಈ ಧಾರಾವಾಹಿ ಬಹುತೇಕ ಮಂದಿಗೆ ಮೆಚ್ಚಿನ ಧಾರಾವಾಹಿ. ಈ ಧಾರಾವಾಹಿಯ ನಟಿಯೊಬ್ಬರ ಸಾವು ಈಗ ತಂಡಕ್ಕೆ ಶಾಕ್ ನೀಡಿದೆ.

ಶೋಭಾ ನಿಧನಕ್ಕೆ ಸಂತಾಪ ಸೂಚಿಸಿದ ನಿರ್ದೇಶಕ ಟಿ.ಎನ್. ಸೀತಾರಾಮ್

ಈ ಧಾರಾವಾಹಿಯಲ್ಲಿ ಮಂಗಳತ್ತೆ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಶೋಭಾ ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕೆ.ಆರ್​​.ಪುರಂ ನಿವಾಸಿಯಾಗಿದ್ದ ಶೋಭಾ ನಿನ್ನೆ ಚಿತ್ರದುರ್ಗದಲ್ಲಿ ನಡೆದ ಲಾರಿ ಹಾಗೂ ಇನೋವಾ ಕಾರಿನ ನಡುವೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಇವರು ಕುಟುಂಬದವರೊಂದಿಗೆ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಇವರೊಂದಿಗೆ ಕುಟುಂಬದ ಐವರು ಕೂಡಾ ಮೃತಪಟ್ಟಿದ್ದಾರೆ. ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಮ್ ಹಾಗೂ ಇಡೀ ಧಾರಾವಾಹಿ ತಂಡಡ ಸದಸ್ಯರು ಶೋಭಾ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details