ಕರ್ನಾಟಕ

karnataka

ETV Bharat / sitara

'ಗಿರಿಜಾ ಕಲ್ಯಾಣ'ದಿಂದ 'ಡೆಮೋ ಪೀಸ್'​ ವರೆಗೆ.... ಮಡಿಕೇರಿ ಹುಡುಗ ಲಕ್ಕಿ ಪ್ರಯಾಣ - ಡೆಮೋ ಪೀಸ್

'ಗಿರಿಜಾ ಕಲ್ಯಾಣ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಡಿಕೇರಿ ಹುಡುಗ ಭರತ್ ಬೋಪ್ಪಣ್ಣ ಲಕ್ಕಿ ಎಂದೇ ಫೇಮಸ್​​. 'ಬ್ರಹ್ಮಗಂಟು' ಧಾರಾವಾಹಿ ಮೂಲಕ ಖ್ಯಾತಿಗೆ ಬಂದ ಭರತ್ ಸ್ಪರ್ಶ ರೇಖಾ ನಿರ್ಮಾಣದ 'ಡೆಮೋ ಪೀಸ್' ಸಿನಿಮಾದಲ್ಲೂ ನಾಯಕನಾಗಿ ನಟಿಸುತ್ತಿದ್ದಾರೆ.

ಭರತ್ ಬೋಪ್ಪಣ್ಣ

By

Published : Sep 16, 2019, 8:52 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಲಕ್ಕಿ ಪಾತ್ರಧಾರಿಯಾಗಿ ನಟಿಸುವ ಮೂಲಕ ಹೆಣ್ಣುಮಕ್ಕಳ ಹೃದಯ ಕದ್ದಿರುವ ಈ ಚಾಕೊಲೇಟ್ ಬಾಯ್ ಮಂಜಿನ ನಗರಿ ಮಡಿಕೇರಿಯವರು. ಲಕ್ಕಿ ಎಂದೇ ಹೆಸರುವಾಸಿಯಾದ ಈತನ ಹೆಸರು ಭರತ್ ಬೋಪಣ್ಣ.

'ಬಹ್ಮಗಂಟು' ಖ್ಯಾತಿಯ ಲಕ್ಕಿ

ಪೌರಾಣಿಕ ಧಾರಾವಾಹಿ 'ಗಿರಿಜಾ ಕಲ್ಯಾಣ' ದಲ್ಲಿ ರಾಜಕುಮಾರನ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಟನಾರಂಗಕ್ಕೆ ಪಾದಾರ್ಪಣೆ ಮಾಡಿದ ಭರತ್ ಮಾಡೆಲಿಂಗ್​​ನಲ್ಲೂ ಮಿಂಚಿದ್ದಾರೆ. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಆಸಕ್ತಿ ಹೊಂದಿದ್ದ ಭರತ್, ತಾನು ಕೂಡಾ ಮುಂದೊಂದು ದಿನ ನಟನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲವಂತೆ. ನಾನಿನ್ನೂ ಬಣ್ಣದ ಲೋಕಕ್ಕೆ ಹೊಸಬ. ಈಗಷ್ಟೇ ಈ ಕ್ಷೇತ್ರದಲ್ಲಿ ನಾನು ಗುರುತಿಸಿಕೊಳ್ಳುತ್ತಿದ್ದೇನೆ. ಆದರೆ ಮೊದಲ ಧಾರಾವಾಹಿಯಲ್ಲೇ ಪೌರಾಣಿಕ ಪಾತ್ರದಲ್ಲಿ ನಟಿಸಿದ್ದೇನೆ ಎಂಬುದೇ ನನಗೆ ಖುಷಿ ಎನ್ನುವ ಭರತ್ ಅವರಿಗೆ ವಿಭಿನ್ನ ರೀತಿಯ ಪಾತ್ರಗಳಿಗೆ ಜೀವ ತುಂಬುವ ಮಹಾದಾಸೆ.

'ಬ್ರಹ್ಮಗಂಟು' ಧಾರಾವಾಹಿಯ ಲಕ್ಕಿ, ಗೀತಾ

ಲಕ್ಕಿ ಪಾತ್ರದ ಮೂಲಕವೇ ರಾಜ್ಯದ ಮನೆಮಾತಾಗಿರುವ ಭರತ್ ಬೋಪಣ್ಣ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಸ್ಪರ್ಶ ರೇಖಾ ನಿರ್ಮಾಣದ 'ಡೆಮೋ ಪೀಸ್' ಎಂಬ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ಭರತ್ ನಟಿಸುತ್ತಿದ್ದಾರೆ. ಸಂತಸದ ವಿಚಾರವೆಂದರೆ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಭರತ್ ಅವರ ನಟನೆ ಕಂಡು ಇಷ್ಟಪಟ್ಟು 'ಡೆಮೋ ಪೀಸ್' ಸಿನಿಮಾಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಒಟ್ಟಿನಲ್ಲಿ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಮಂಜಿನ ನಗರಿ ಹುಡುಗ ಭರತ್ ಬೋಪಣ್ಣ ಮಿಂಚಲು ರೆಡಿಯಾಗಿದ್ದಾರೆ.

ಭರತ್ ಬೋಪಣ್ಣ

ABOUT THE AUTHOR

...view details