ಡಾರ್ಲಿಂಗ್ ಕೃಷ್ಣ ನಿರ್ದೇಶನದ' ಲವ್ ಮಾಕ್ಟೈಲ್' ಸಿನಿಮಾ ಕನ್ನಡ ಸಿನಿ ರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿರುವುದು ಎಲ್ಲರಿಗೂ ತಿಳಿದೆ ಇದೆ. ಕೃಷ್ಣ ಮತ್ತು ಮಿಲನಾ ನಾಗರಾಜ್ ಮುದ್ದಾದ ಜೋಡಿಯ ಅಭಿನಯಕ್ಕೆ ಪ್ರೇಕ್ಷಕ ಫಿದಾ ಆಗಿದ್ದಂತೂ ಸುಳ್ಳಲ್ಲ. ಇದೇ ಭಾನುವಾರ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದೇ ಭಾನುವಾರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ 'ಲವ್ ಮಾಕ್ಟೈಲ್' - ಲವ್ ಮಾಕ್ಟೈಲ್' ಸಿನಿಮಾ
ಡಾರ್ಲಿಂಗ್ ಕೃಷ್ಣ ನಿರ್ದೇಶನದ' ಲವ್ ಮಾಕ್ಟೈಲ್' ಸಿನಿಮಾ ಕನ್ನಡ ಸಿನಿ ರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿರುವುದು ಎಲ್ಲರಿಗೂ ತಿಳಿದೆ ಇದೆ. ಇದೇ ಭಾನುವಾರ ಸಂಜೆ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರವಾಗಲಿದೆ. ಯಾರೆಲ್ಲಾ 'ಲವ್ ಮಾಕ್ಟೈಲ್ ' ನೋಡಲಿಲ್ಲವೋ ಅವರೆಲ್ಲಾ ಮನೆಯಲ್ಲೇ ಕುಳಿತು ನೋಡಬಹುದು.
ಜನವರಿ 31 ರಂದು ಬಿಡುಗಡೆಯಾದ ವಿಭಿನ್ನ ಕಥಾ ಹಂದರ ಹೊಂದಿರುವ 'ಲವ್ ಮಾಕ್ಟೈಲ್' ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದು, ಸಿನಿಮಾ ಬಿಡುಹಡೆಗೊಂಡ ಥಿಯೇಟರ್ಗಳ ಟಿಕೆಟ್ಗಳು ಫುಲ್ ಸೋಲ್ಡ್ ಔಟ್ ಆಗಿದ್ದವು. ಆದಿ ಮತ್ತು ನಿಧಿಮಾ ಮುದ್ದಾದ ಜೋಡಿ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಪ್ರೇಕ್ಷಕರಿಗೆ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೈಲ್ ಭಾಗ -2 ಪ್ರಾರಂಭಿಸುವ ಮೂಲಕ ಸಿಹಿ ಸುದ್ದಿ ಕೊಟ್ಟಿದ್ದಾರೆ.
ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಪ್ರೇಕ್ಷಕರ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದ ಲವ್ ಮಾಕ್ಟೈಲ್ ಸಿನಿಮಾ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಇದೇ ಭಾನುವಾರ ಸಂಜೆ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಯಾರೆಲ್ಲಾ 'ಲವ್ ಮಾಕ್ಟೈಲ್ ' ನೋಡಲಿಲ್ಲವೋ ಅವರೆಲ್ಲಾ ಮನೆಯಲ್ಲೇ ಕುಳಿತು ನೋಡಬಹುದು.