ಕರ್ನಾಟಕ

karnataka

ETV Bharat / sitara

‘ಪಾರು' ಧಾರಾವಾಹಿ ತಂಡದೊಂದಿಗೆ ದೀಪಾವಳಿ ಸಂಜೆ ಕಳೆದ ಅಭಿಮಾನಿಗಳು - ಪಾರು ಧಾರಾವಾಹಿ ತಂಡದೊಂದಿಗೆ ದೀಪಾವಳಿ ಸಂಜೆ ಕಳೆದ ಅಭಿಮಾನಿಗಳು

ದೀಪಾವಳಿ ಹಬ್ಬದ ವಿಶೇಷ ಎಂದು ಅಭಿಮಾನಿಗಳಿಗಾಗಿ ‘ಪಾರು' ಧಾರಾವಾಹಿ ತಂಡ ‘ಪಾರು-ಸೀರೆ ಸುಗ್ಗಿ ಸಂಭ್ರಮ’ ಎಂಬ ಸ್ಪರ್ಧೆ ಆಯೋಜಿಸಿತ್ತು. ವಿಜೇತರಿಗೆ ಅಖಿಲಾಂಡೇಶ್ವರಿ ಉಡುವಂತಹ 25 ಸಾವಿರ ರೂಪಾಯಿ ಬೆಲೆಬಾಳುವ ಸೀರೆಯನ್ನು ಬಹುಮಾನವಾಗಿ ನೀಡಲಾಯಿತು.

‘ಪಾರು' ಧಾರಾವಾಹಿ ತಂಡ

By

Published : Oct 29, 2019, 9:17 PM IST

ಜೀ ಕನ್ನಡದ ಜನಪ್ರಿಯ ‘ಪಾರು’ ಧಾರಾವಾಹಿಯ ಅಭಿಮಾನಿಗಳಿಗೆ ಈ ದೀಪಾವಳಿ ಮತ್ತಷ್ಟು ಖುಷಿ ತಂದುಕೊಟ್ಟಿತ್ತು. ಅಖಿಲಾಂಡೇಶ್ವರಿ, ಪಾರು, ಆದಿತ್ಯ, ದಾಮಿನಿ ಎಲ್ಲರೂ ತಮ್ಮ ಅರಸನಕೋಟೆಯಲ್ಲೇ ಅಭಿಮಾನಿಗಳನ್ನು ಭೇಟಿ ಮಾಡಿ ಅವರ ಸಂತೋಷವನ್ನು ದುಪ್ಪಟ್ಟುಗೊಳಿಸಿದರು.

ವಿಜೇತರೊಂದಿಗೆ ‘ಪಾರು' ಧಾರಾವಾಹಿ ತಂಡ

ದೀಪಾವಳಿ ಹಬ್ಬದ ವಿಶೇಷ ಎಂದು ಅಭಿಮಾನಿಗಳಿಗಾಗಿ ‘ಪಾರು-ಸೀರೆ ಸುಗ್ಗಿ ಸಂಭ್ರಮ’ ಎಂಬ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿ ಸಂಚಿಕೆಯ ಕೊನೆಯಲ್ಲಿ ಬರುವ ಪ್ರಶ್ನೆಗಳಿಗೆ ಎಸ್​ಎಂಎಸ್ ಮೂಲಕ ಉತ್ತರಿಸಿದವರಲ್ಲಿ 10 ಅದೃಷ್ಟವಂತರಿಗೆ ಅಖಿಲಾಂಡೇಶ್ವರಿ ಮತ್ತು ಅವರ ಅರಸನಕೋಟೆ ಕುಟುಂಬ ಆಯೋಜಿಸಿದ್ದ ಹಬ್ಬದ ಊಟದ ರುಚಿಯನ್ನು ಸವಿಯುವ ಸುವರ್ಣಾವಕಾಶ ಕಲ್ಪಿಸಲಾಗಿತ್ತು. ಅದರಂತೆ ಆ 10 ಅದೃಷ್ಟವಂತರು ಅಖಿಲಾಂಡೇಶ್ವರಿ (ವಿನಯಾ ಪ್ರಸಾದ್), ಪಾರು (ಮೋಕ್ಷಿತಾ), ಆದಿತ್ಯ (ಶರತ್), ದಾಮಿನಿ (ಸಿತಾರಾ) ಸೇರಿ ಧಾರಾವಾಹಿಯ ಇನ್ನಿತರ ಪಾತ್ರಧಾರಿಗಳನ್ನು ಭೇಟಿ ಮಾಡಿ ಅವರೊಂದಿಗೆ ಭೋಜನ ಸವಿದರು.

ವಿನಯಾ ಪ್ರಸಾದ್​​ಗೆ ಸಿಹಿ ತಿನ್ನಿಸುತ್ತಿರುವ ಅಭಿಮಾನಿ

ವಿಜೇತರಿಗೆ ಅಖಿಲಾಂಡೇಶ್ವರಿ ಉಡುವಂತಹ 25 ಸಾವಿರ ರೂಪಾಯಿ ಬೆಲೆಬಾಳುವ ಸೀರೆಯನ್ನು ಬಹುಮಾನವಾಗಿ ನೀಡಲಾಯಿತು. ಈ ಪ್ರಶ್ನೆಯಲ್ಲಿ ಭಾಗವಹಿಸಿದ್ದ ಒಟ್ಟು 7 ಲಕ್ಷ ವೀಕ್ಷಕರ ಪೈಕಿ ವಿಜೇತರಾದ ಧಾರವಾಡದ ಪೂರ್ಣಿಮಾ, ಚಿತ್ರದುರ್ಗದ ಅನಿತಾ, ತುಮಕೂರಿನ ಕಾವ್ಯಾ, ಬೆಳಗಾವಿಯ ಶಿಲ್ಪಾ, ಹಾಸನದ ಮಹಾದೇವಮ್ಮ, ಕೊಪ್ಪಳದ ಚೈತ್ರಾ, ಶಿವಮೊಗ್ಗದ ಚಂದ್ರಕಲಾ ಮತ್ತು ಮೈಸೂರಿನ ರಾಣಿ ಹಾಗೂ ಇನ್ನಿತರರು ಕಲಾವಿದರೊಂದಿಗೆ ಇಡೀ ಸಂಜೆ ಕಳೆದು ಸಂಭ್ರಮಿಸಿದರು. ವಿಶೇಷ ಎಂಬಂತೆ ವಿಜೇತರನ್ನು ಪಾರು ಮತ್ತು ಆದಿತ್ಯ ಸಾಂಪ್ರದಾಯಿಕ ಆರತಿ ತಟ್ಟೆಯೊಂದಿಗೆ ಅರಸನಕೋಟೆ ಮನೆಗೆ ಸ್ವಾಗತಿಸಿದರು. ಇದೇ ವೇಳೆ ಸ್ಪರ್ಧೆಯ ವಿಜೇತರು ಕೂಡಾ ತಮ್ಮ ಮೆಚ್ಚಿನ ಕಲಾವಿದರಿಗೆ ವಿವಿಧ ಉಡುಗೊರೆ ನೀಡಿ ದೀಪಾವಳಿಯ ಶುಭಾಶಯ ಕೋರಿದರು.

‘ಪಾರು' ತಂಡಕ್ಕೆ ಅಭಿಮಾನಿಗಳಿಂದ ಉಡುಗೊರೆ

For All Latest Updates

TAGGED:

ABOUT THE AUTHOR

...view details