ಕರ್ನಾಟಕ

karnataka

ETV Bharat / sitara

ಕಿರುತೆರೆ ವೀಕ್ಷಕರಿಗೆ 'ಲಗ್ನಪತ್ರಿಕೆ' ಹಂಚಲು ಹೊರಟ ಹುಡುಗ - Colors Kannada serial Lagnapatrike

ಕಲರ್ಸ್ ಕನ್ನಡದಲ್ಲಿ 'ಲಗ್ನಪತ್ರಿಕೆ' ಎಂಬ ಹೆಸರಿನಲ್ಲಿ ಹೊಸ ಧಾರಾವಾಹಿ ಶೀಘ್ರದಲ್ಲೇ ಆರಂಭವಾಗುತ್ತಿದೆ. ಅರವಿಂದ್ ಕೌಶಿಕ್ ಈ ಧಾರಾವಾಹಿಗೆ ಕಥೆ ಬರೆದಿದ್ದಾರೆ. ಸೂರಜ್ ಹೂಗಾರ್ ಹಾಗೂ ಸಂಜನಾ ಬುರ್ಲಿ ಈ ಧಾರಾವಾಹಿಯಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.

Lagnapatrike new serial
'ಲಗ್ನಪತ್ರಿಕೆ'

By

Published : Sep 1, 2020, 3:51 PM IST

ವಿಭಿನ್ನ ಕಥಾಹಂದರದ ಮೂಲಕ ಕನ್ನಡ ಕಿರುತೆರೆಗೆ ಜನಪ್ರಿಯ ಧಾರಾವಾಹಿಗಳನ್ನು ನೀಡಿದ ಅರವಿಂದ್​​​​​​​​​​​ ಕೌಶಿಕ್ ಇದೀಗ 'ಲಗ್ನಪತ್ರಿಕೆ' ಹಂಚಲು ತಯಾರಾಗಿದ್ದಾರೆ. ಅರವಿಂದ್​​ಗೆ ಮದುವೆಯಾಗಿ ಶಿಲ್ಪ ಎಂಬ ಮುದ್ದಾದ ಪತ್ನಿ ಇದ್ದಾರೆ ಮತ್ತ್ಯಾರದ್ದು ಲಗ್ನಪತ್ರಿಕೆ ಎಂದು ಕನ್ಫ್ಯೂಸ್ ಆಗಬೇಡಿ. ಇದೊಂದು ಹೊಸ ಧಾರಾವಾಹಿ.

ಅರವಿಂದ್ ಕೌಶಿಕ್, ಮದುವೆಗೆ ಸಂಬಂಧಿಸಿ ಹೊಸ ಕಥೆ ಬರೆದಿದ್ದು ಅದು 'ಲಗ್ನಪತ್ರಿಕೆ' ಹೆಸರಿನಲ್ಲಿ ಶೀಘ್ರವೇ ನಿಮ್ಮ ಮುಂದೆ ಬರಲಿದೆ. ಆ ಮೂಲಕ ಮತ್ತೆ ಕಿರುತೆರೆಪ್ರಿಯರಿಗೆ ಮನರಂಜನೆ ನೀಡಲು ಅರವಿಂದ್ ಕೌಶಿಕ್ ಸಜ್ಜಾಗುತ್ತಿದ್ದಾರೆ. ಲವ್ ಮ್ಯಾರೇಜ್ ಹಾಗೂ ಆರೇಂಜ್​​​​​​​​​​ ಮ್ಯಾರೇಜ್ ಯಾವುದೇ ಆಗಿರಲಿ ಗಂಡ-ಹೆಂಡತಿ ನಡುವೆ ಸಣ್ಣ ಪುಟ್ಟ ಜಗಳ ನಡೆಯುವುದು ಮಾಮೂಲು. ಇದನ್ನೇ ಆಧಾರವಾಗಿಟ್ಟುಕೊಂಡು ಅರವಿಂದ್​​​​​​​​​​​ ಕೌಶಿಕ್ ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಕಥೆಯನ್ನು ಬರೆದಿದ್ದಾರೆ. ಈಗಾಗಲೇ ಟೈಟಲ್ ಕಾರ್ಡ್ ಮತ್ತು ಪ್ರೋಮೋ ಬಿಡುಗಡೆಯಾಗಿದ್ದು ಇದು ಉಳಿದ ಧಾರಾವಾಹಿಗಳಿಗಿಂತ ಕೊಂಚ ಭಿನ್ನ ಎಂದು ತಿಳಿಯುತ್ತದೆ.

ಸಂಜನಾ ಬುರ್ಲಿ

ಶೀಘ್ರದಲ್ಲೇ ಧಾರಾವಾಹಿ ಆರಂಭವಾಗಲಿದ್ದು ಸೂರಜ್ ಹೂಗಾರ್ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ಸಂಜನಾ ಬುರ್ಲಿ ಜೊತೆಯಾಗಿದ್ದಾರೆ. ಉಳಿದಂತೆ ಸುಂದರ್, ಮರೀನಾ ತಾರಾ, ರೇಣುಕ, ರವಿ ಭಟ್, ಜ್ಯೋತಿ, ಸುಪ್ರಿಯಾ, ದರ್ಶನ್ ಸೂರ್ಯ ಹಾಗೂ ಇನ್ನಿತರರು ಈ ಧಾರಾವಾಹಿಯ ತಾರಾಬಳಗದಲ್ಲಿದ್ದಾರೆ. 'ಲಗ್ನಪತ್ರಿಕೆ' ಹೇಗೆ ಕಿರುತೆರೆ ಪ್ರಿಯರನ್ನು ರಂಜಿಸಲಿದೆ ಎಂಬುದನ್ನು ಕಾದು ನೋಡಬೇಕು.

ಸೂರಜ್ ಹೂಗಾರ್

ABOUT THE AUTHOR

...view details