ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ದಿಶಾ ಕಿರುತೆರೆ ವೀಕ್ಷಕರಿಗೆ ಪರಿಚಿತಳು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ನಾಯಕಿ ಮಣಿಯಾಗಿ ನಟಿಸಿ ಧಾರಾವಾಹಿ ಪ್ರಿಯರ ಮನ ಸೆಳೆದಿರುವ ಈ ಪುಟಾಣಿ, ಇದೀಗ ಫೋಟೋಶೂಟ್ ಮೂಲಕ ಮತ್ತೆ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ ದಿಶಾ ದಿಶಾ ಇತ್ತೀಚೆಗಷ್ಟೇ ಫೋಟೋಶೂಟ್ ಮಾಡಿಸಿಕೊಂಡಿದ್ದು ಗೊಂಬೆಯ ರೀತಿಯಲ್ಲಿ ಕಂಗೊಳಿಸುತ್ತಿದ್ದಾರೆ. ಸಾಂಪ್ರದಾಯಿಕ ಉಡುಗೆ ಧರಿಸಿ ಫೋಟೋಕ್ಕೆ ಫೋಸ್ ಕೊಟ್ಟಿದ್ದಾಳೆ. ಬಿಳಿ ಸೀರೆ, ಮೆರೂನ್ ರವಿಕೆ ಧರಿಸಿರುವ ಪುಟ್ಟ ಹುಡುಗಿ ದಿಶಾ, ಸಾಂಪ್ರದಾಯಿಕ ಆಭರಣಗಳ ಜೊತೆಗೆ ತುರುಬು ಹಾಗೂ ಮೋಗ್ರಾ ಧರಿಸಿ ಮಿಂಚಿದ್ದಾಳೆ.
ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ ದಿಶಾ ಮಣಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ದಿಶಾಗೆ 'ಕಿನ್ನರಿ' ಮೊದಲ ಧಾರಾವಾಹಿ. ದಿಶಾ ಅಮ್ಮನಿಗೆ ಮಗಳು ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹಾದಾಸೆ ಇದ್ದ ಹಿನ್ನೆಲೆ ದಿಶಾ ಆಡಿಶನ್ಗೆ ಹೋಗಲಾರಂಭಿಸಿದಳು. ಕಿನ್ನರಿ ಧಾರಾವಾಹಿಯ ಆಡಿಶನ್ಲ್ಲಿ ಬರೋಬ್ಬರಿ 200 ಮಕ್ಕಳಿದ್ದು, ಅದರಲ್ಲಿ ದಿಶಾ ಆಯ್ಕೆಯಾಗಿದ್ದರು.
ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ ದಿಶಾ ಇನ್ನು 'ಕಿನ್ನರಿ' ಧಾರಾವಾಹಿ ನಂತರ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ದಿಶಾ ಕಲರ್ಸ್ ಕನ್ನಡದ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಳು. ಜೊತೆಗೆ ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಆರಂಭವಾದ 'ಶಾಂತಂ ಪಾಪಂ ನ ಸೀಸನ್ 3' ಸಂಚಿಕೆಯಲ್ಲಿ ಸಹ ಕಾಣಿಸಿಕೊಂಡಿದ್ದಳು.