ಹೈದರಾಬಾದ್: ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 4 ಆರಂಭಗೊಂಡಿದ್ದು, ಹಿರಿಯ ನಟ ನಾಗಾರ್ಜುನ ಅದರ ನಿರೂಪಣೆ ಮಾಡುತ್ತಿದ್ದಾರೆ. ಈ ವಾರ ತೆಲುಗು ಬಿಗ್ ಬಾಸ್ ವೇದಿಕೆಗೆ ಮತ್ತೊಬ್ಬ ಬಿಗ್ ಬಾಸ್ ಸರಪ್ರೈಸ್ ಎಂಟ್ರಿ ನೀಡಿದ್ದಾರೆ.
ಈ ವಾರದ ವಿಶೇಷವೆಂದರೆ, ಕಿಚ್ಚ ಸುದೀಪ್ ಈ ಶೋಗೆ ವಾರದ ಅತಿಥಿಯಾಗಿ ವೇದಿಕೆ ಏರಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ಮಾಹಿತಿ ನೀಡಿದ್ದು, ನಾಗಾರ್ಜುನ ಜೊತೆಗೆ ಇರುವ ಫೋಟೋವೊಂದನ್ನು ತಮ್ಮ ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 'ಬಿಗ್ ಬಾಸ್' ತೆಲುಗು ಸೀಸನ್ 4ರಲ್ಲಿ ಭಾಗವಹಿಸಿದ್ದರ ಕುರಿತಾಗಿ ಬರೆದುಕೊಂಡಿದ್ದಾರೆ.