ಕರ್ನಾಟಕ

karnataka

ETV Bharat / sitara

ಸ್ನೇಹಿತನ 'ಕಲಾ ವಿಧ ಫಿಲ್ಮ್ ಅಕಾಡೆಮಿ'​ ಉದ್ಘಾಟಿಸಲಿದ್ದಾರೆ ಸುದೀಪ್ - ಕಿಚ್ಚ ಸುದೀಪ್

ಸದಾ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಿಚ್ಚು ಸುದೀಪ್ ನಾಳೆ ತಮ್ಮ ಸ್ನೇಹಿತ ಸ್ಥಾಪಿಸಿರುವ ಫಿಲಮ್ ಅಕಾಡೆಮಿಯನ್ನು ಉದ್ಘಾಟಿಸಲಿದ್ದಾರೆ. ಸುದೀಪ್ ಸ್ನೇಹಿತ ಯತಿರಾಜ್ ಹಾಗೂ ನಟ ಅರವಿಂದ್ ಇಬ್ಬರೂ ಸೇರಿ ಈ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.

ಕಿಚ್ಚ ಸುದೀಪ್​​​

By

Published : Mar 10, 2019, 1:26 PM IST

ಕಿಚ್ಚ ಸುದೀಪ್ ಹೊಸ ಪ್ರಯತ್ನಗಳಿಗೆ ಹಾಗೂ ಪ್ರತಿಭೆಗಳಿಗೆ ಯಾವಾಗಲೂ ನೀರೆರೆದು ಪ್ರೋತ್ಸಾಹಿಸುತ್ತಾರೆ. ಅದೇ ರೀತಿ ನಾಳೆ ತಮ್ಮ ಸ್ನೇಹಿತ ಹುಟ್ಟುಹಾಕಿರುವ ಫಿಲ್ಮ್​ ಅಕಾಡೆಮಿಯೊಂದನ್ನು ಕಿಚ್ಚ ಸುದೀಪ್ ಉದ್ಘಾಟಿಸಲಿದ್ದಾರೆ.

’ಮೈ ಆಟೋಗ್ರಾಫ್’ ಸಿನಿಮಾದಿಂದ ಸ್ನೇಹಿತರಾಗಿದ್ದ ಯತಿರಾಜ್​​​​​​​​​​​​​​​ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಕಲಾ ವಿಧ ಫಿಲ್ಮ್​ ಅಕಾಡೆಮಿಯನ್ನು ಸ್ಥಾಪಿಸಿದ್ದು, ನಾಳೆ ಸಂಜೆ 6.30ಕ್ಕೆ ಕಿಚ್ಚ ಸುದೀಪ್ ಈ ಫಿಲ್ಮ್​​ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಕೋರಲಿದ್ದಾರೆ.

ಕಿರುತೆರೆ, ಸಿನಿಮಾ ಎರಡರಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಅರವಿಂದ್ ಹಾಗೂ ಪತ್ರಕರ್ತರೂ ಆಗಿರುವ ಯತಿರಾಜ್ ಇಬ್ಬರೂ ಸೇರಿ ಈ ಫಿಲ್ಮ್​​​​​​ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ.

ನಟನೆ, ನಿರೂಪಣೆ, ನಿರ್ದೇಶನ, ಸಂಕಲನ ಹಾಗೂ ಇನ್ನಿತರ ವಿಭಾಗಗಳಲ್ಲಿ ಈ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಯೋಗ, ಮೆಡಿಟೇಶನ್​ ಕೂಡಾ ಕಲಿಸಲಾಗುತ್ತದೆ. 3 ತಿಂಗಳ ತರಬೇತಿಗೆ 30 ಸಾವಿರ ರೂಪಾಯಿ ಫೀಸ್ ಇದ್ದು, ಎಪ್ರಿಲ್ ಮೊದಲ ವಾರದಲ್ಲಿ ತರಬೇತಿ ಆರಂಭವಾಗುತ್ತಿದೆ. ಹಿರಿಯ ಹಾಗೂ ಜನಪ್ರಿಯ ಸಿನಿಮಾ ಹಾಗೂ ಕಿರುತೆರೆ ಸೆಲಿಬ್ರಿಟಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.

ABOUT THE AUTHOR

...view details