'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಯಾರಿಗೆ ಗೊತ್ತಿಲ್ಲ ಹೇಳಿ. ಲಚ್ಚಿ ಅಲಿಯಾಸ್ ಚಿನ್ನು ಆಗಿ ಕಿರುತೆರೆ ಪ್ರಿಯರ ಮನ ಗೆದ್ದ ಕವಿತಾ ಗೌಡ ಈಗ ಬೆಳ್ಳಿತೆರೆಯಲ್ಲಿ ಕೂಡಾ ಕಮಾಲ್ ಮಾಡಿದ್ದಾರೆ. ಇದರ ಜೊತೆಗೆ ಕವಿತಾ ಗೌಡ 'ವಿದ್ಯಾ ವಿನಾಯಕ' ಎಂಬ ಧಾರಾವಾಹಿಯಲ್ಲಿ ಕೂಡಾ ಪ್ರಮುಖ ಪಾತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ.
ಬೆಟ್ಟ ಹತ್ತಿ ಸೂರ್ಯೋದಯ ಕಣ್ತುಂಬಿಕೊಂಡ ಚಿನ್ನು...ದೇವಿ ಆಶೀರ್ವಾದ ಕೂಡಾ ಪಡೆದ ಲಚ್ಚಿ - ಮಾಕಳಿ ದುರ್ಗಕ್ಕೆ ಭೇಟಿ ನೀಡಿದ ಕವಿತಾ ಗೌಡ
ದೊಡ್ಡಬಳ್ಳಾಪುರ ಜಿಲ್ಲೆಯ ಮಾಕಳಿ ದುರ್ಗ ಬೆಟ್ಟಕ್ಕೆ ಕವಿತಾ ಅವರು ಚಾರಣ ಹೋಗಿದ್ದು ಈ ಫೋಟೋಗಳು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದೆ. ಬೆಳ್ಳಂಬೆಳಗ್ಗೆ ಬೆಟ್ಟ ಹತ್ತಿರುವ ಕವಿತಾಗೆ ಸೂರ್ಯೋದಯದ ಅಂದವನ್ನು ಬೆಟ್ಟದಿಂದಲೇ ಕಣ್ತುಂಬಿಕೊಳ್ಳುವ ಬಯಕೆ. ಅವರ ಈ ಬಯಕೆಗೆ ಸ್ನೇಹಿತರಾದ ದಿಲೀಪ್ ಶೆಟ್ಟಿ ಮತ್ತು ಸಚಿನ್ ಗೌಡ ಸಾಥ್ ನೀಡಿದ್ದಾರೆ.
![ಬೆಟ್ಟ ಹತ್ತಿ ಸೂರ್ಯೋದಯ ಕಣ್ತುಂಬಿಕೊಂಡ ಚಿನ್ನು...ದೇವಿ ಆಶೀರ್ವಾದ ಕೂಡಾ ಪಡೆದ ಲಚ್ಚಿ Kavita gowda](https://etvbharatimages.akamaized.net/etvbharat/prod-images/768-512-6461841-thumbnail-3x2-kavita.jpg)
'ಗೋವಿಂದ ಗೋವಿಂದ' , 'ಹುಟ್ಟುಹಬ್ಬದ ಶುಭಾಶಯಗಳು', 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ವಿದ್ಯಾ ವಿನಾಯಕ' ಧಾರಾವಾಹಿಯ ವಿದ್ಯಾ ಆಗಿ ಮೋಡಿ ಮಾಡಿದ ಕವಿತಾ ಗೌಡ ಸದ್ಯ ಬೆಳ್ಳಿತೆರೆಯಲ್ಲೂ ಬ್ಯುಸಿ. ಬ್ಯುಸಿ ಶೆಡ್ಯೂಲ್ ನಡುವೆ ಕೊಂಚ ಬಿಡುವು ಮಾಡಿಕೊಂಡಿರುವ ಕವಿತಾ ಗೌಡ ಇದೀಗ ಟ್ರಕ್ಕಿಂಗ್ ಹೋಗಿದ್ದಾರೆ. ದೊಡ್ಡಬಳ್ಳಾಪುರ ಜಿಲ್ಲೆಯ ಮಾಕಳಿ ದುರ್ಗ ಬೆಟ್ಟಕ್ಕೆ ಕವಿತಾ ಅವರು ಚಾರಣ ಹೋಗಿದ್ದು ಈ ಫೋಟೋಗಳು ಇನ್ಸ್ಟಾಗ್ರಾಮ್ನಲ್ಲಿ ಹರಿದಾಡುತ್ತಿದೆ. ಬೆಳ್ಳಂಬೆಳಗ್ಗೆ ಬೆಟ್ಟ ಹತ್ತಿರುವ ಕವಿತಾಗೆ ಸೂರ್ಯೋದಯದ ಅಂದವನ್ನು ಬೆಟ್ಟದಿಂದಲೇ ಕಣ್ತುಂಬಿಕೊಳ್ಳುವ ಬಯಕೆ. ಅವರ ಈ ಬಯಕೆಗೆ ಸ್ನೇಹಿತರಾದ ದಿಲೀಪ್ ಶೆಟ್ಟಿ ಮತ್ತು ಸಚಿನ್ ಗೌಡ ಸಾಥ್ ನೀಡಿದ್ದಾರೆ. ತಮ್ಮ ಸ್ನೇಹಿತರೊಡನೆ ಸಂತೋಷವಾಗಿ ಸಮಯ ಕಳೆದಿರುವ ಕವಿತಾ ಕೇವಲ ಚಾರಣ ಮಾತ್ರ ಹೋಗಿಲ್ಲ, ಬದಲಿಗೆ ಬೆಟ್ಟದ ತಪ್ಪಲಿನಲ್ಲಿ ಇರುವ ದೇವಸ್ಥಾನಕ್ಕೆ ಹೋಗಿ ದೇವಿಯ ಆಶೀರ್ವಾದವನ್ನು ಕೂಡಾ ಪಡೆದುಕೊಂಡಿದ್ದಾರೆ.