ಕರ್ನಾಟಕ

karnataka

ETV Bharat / sitara

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬ್ಯೂಟಿ ಕ್ವೀನ್ ಕರಿಷ್ಮಾ ತನ್ನಾ - ಕರಿಷ್ಮಾ ತನ್ನಾ ವಿವಾಹ

ಬ್ಯೂಟಿ ಕ್ವೀನ್ ಕರಿಷ್ಮಾ ತನ್ನಾ ಇಂದು(ಫೆ.5) ಉದ್ಯಮಿ ವರುಣ್ ಬಂಗೇರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Karishma Tanna's wedding festivities begin
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬ್ಯೂಟಿ ಕ್ವೀನ್ ಕರಿಷ್ಮಾ ತನ್ನಾ

By

Published : Feb 5, 2022, 6:50 AM IST

ಒಂದಾದ ಮೇಲೆ ಒಂದರಂತೆ ನಟ, ನಟಿಯರು ಮದುವೆಯಾಗುತ್ತಿದ್ದಾರೆ. ಇತ್ತೀಚೆಗೆ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಖ್ಯಾತ ನಟಿ ಹಾಗೂ ಬ್ಯೂಟಿ ಕ್ವೀನ್ 'ಕರಿಷ್ಮಾ ತನ್ನಾ' ಮದುವೆ ಸಂಭ್ರಮದಲ್ಲಿದ್ದಾರೆ. ಇಂದು (ಫೆ.5) ಹಸೆಮಣೆ ಏರಲು ರೆಡಿಯಾಗಿರೋ ಮದುಮಗಳು ಕರಿಷ್ಮಾ ಮೆಹಂದಿ ಶಾಸ್ತ್ರದ ಸುಂದರ ಪೋಟೋಗಳನ್ನ ತಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬ್ಯೂಟಿ ಕ್ವೀನ್ ಕರಿಷ್ಮಾ ತನ್ನಾ

ಇದನ್ನೂ ಓದಿ:ಸೂರಜ್ ನಂಬಿಯಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ಕೆಜಿಎಫ್​ ನಟಿ ಮೌನಿ ರಾಯ್

ವರುಣ್ ಬಂಗೆರಾ ಜೊತೆಗೆ ನಟಿ ಕರಿಷ್ಮಾ ತನ್ನಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವರುಣ್ ಬಂಗೆರಾ ಮೂಲತಃ ಉದ್ಯಮಿ. ಇಂದು ಮುಂಬೈನಲ್ಲಿ ಅವರ ಮದುವೆ ನಡೆಯಲಿದೆ. ಗುರುವಾರದಿಂದಲ್ಲೇ(ಫೆ.3) ಕರಿಷ್ಮಾ ಮನೆಯಲ್ಲಿ ಮದುವೆಯ ಸಂಭ್ರಮಗಳು ಪ್ರಾರಂಭವಾಗಿದೆ. ಹಿಂದೂ ಸಂಪ್ರದಾಯಗಳಂತೆ ಹಳದಿ ಶಾಸ್ತ್ರಗಳಲ್ಲಿ ಭಾಗಿಯಾಗುವ ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.

ವರುಣ್ ಮಂಗಳೂರು ಮೂಲದವಾಗಿರುವುದರಿಂದ ದಕ್ಷಿಣ ಭಾರತ, ಗುಜರಾತಿ ಶೈಲಿಯಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಕಳೆದ ನವೆಂಬರ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಕರಿಷ್ಮಾ ಮದುವೆ ಫೋಟೋಗಳು ಹೆಚ್ಚು ಹೆಚ್ಚು ಸದ್ದು ಮಾಡುತ್ತದೆ.

ABOUT THE AUTHOR

...view details