ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ 'ಗೀತಾ' ಆರಂಭವಾಗಿ ಎರಡು ವಾರಗಳು ಕಳೆದಿವೆ. ಮತ್ತೆ ಮುಂದಿನ ವಾರ 'ಕನ್ನಡತಿ' ಹೆಸರಿನ ಧಾರಾವಾಹಿ ಆರಂಭವಾಗಲಿದ್ದು ಪ್ರೇಕ್ಷಕರು ಈ ಧಾರಾವಾಹಿ ನೋಡಲು ದಿನಗಣನೆ ಮಾಡುತ್ತಿದ್ದಾರೆ.
ಜನವರಿ ಕೊನೆಯ ವಾರದಿಂದ ಪಾಠ ಮಾಡಲು ಬರುತ್ತಿದ್ದಾರೆ 'ಕನ್ನಡತಿ' - ಜನವರಿ 27 ರಂದು 'ಕನ್ನಡತಿ' ಧಾರಾವಾಹಿ ಆರಂಭ
'ಕನ್ನಡತಿ' ಧಾರಾವಾಹಿಯ ಪ್ರೋಮೋ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಧಾರಾವಾಹಿ ತಂಡ ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಇದೇ ಜನವರಿ 27ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕನ್ನಡತಿ' ಧಾರಾವಾಹಿ ಪ್ರಸಾರವಾಗಲಿದೆ.
'ಕನ್ನಡತಿ' ಧಾರಾವಾಹಿಯ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು ನಾಯಕನಾಗಿ ಕಿನ್ನರಿ ಧಾರಾವಾಹಿಯ ಕಿರಣ್ ರಾಜ್ ನಟಿಸಿದ್ದರೆ, ನಾಯಕಿಯಾಗಿ 'ಪುಟ್ಟ ಗೌರಿ ಮದುವೆ' ಖ್ಯಾತಿಯ ರಂಜನಿ ರಾಘವನ್ ಅಭಿನಯಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಕಂಪನಿಯೊಂದಿಗೆ ಮದುವೆಯಾಗಿದ್ದೇನೆ ಎನ್ನುವ ನಾಯಕನಿಗೆ ತನ್ನ ಹಿಂದೆ ಬೀಳುವ ಹುಡುಗಿಯರು ಕಣ್ಣಿಗೆ ಕಾಣುವುದೇ ಇಲ್ಲ. ಏಕೆಂದರೆ ಅವನಿಗೆ ಕಂಪನಿಯೇ ಸರ್ವಸ್ವ. ಜೊತೆಗೆ ಕಂಪನಿಯೆಲ್ಲಾ ತನ್ನದೇ ಎನ್ನುವ ಆತನಿಗೆ ಕಂಪನಿ ದಕ್ಕಬೇಕಿದ್ದರೆ ಆತ ಭುವನೇಶ್ವರಿಯನ್ನು ಮದುವೆ ಆಗಬೇಕು ಎಂಬುದು ಅಜ್ಜಿ ಬರೆದ ವಿಲ್ನಲ್ಲಿ ಇರುತ್ತದೆ. ಆದರೆ ಆಶ್ಚರ್ಯದ ಸಂಗತಿಯೆಂದರೆ ಈ ಭುವನೇಶ್ವರಿ ಯಾರು ಎಂಬುದೇ ಆತನಿಗೆ ಗೊತ್ತಿಲ್ಲ. ಇವರಿಬ್ಬರ ಪರಿಚಯ ಹೇಗಾಗುತ್ತದೆ, ಇವರಿಬ್ಬರ ನಡುವೆ ಪ್ರೀತಿ ಮೂಡುತ್ತದಾ? ಭುವನೇಶ್ವರಿಯನ್ನು ನಾಯಕ ಮದುವೆಯಾಗುತ್ತಾನಾ ಎಂಬುದೇ ಧಾರಾವಾಹಿಯ ಕಥಾ ಹಂದರ.
ಈಗಾಗಲೇ ಧಾರಾವಾಹಿಯ ಪ್ರೋಮೋ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗೆ ಧಾರಾವಾಹಿ ತಂಡ ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಇದೇ ಜನವರಿ 27ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕನ್ನಡತಿ' ಧಾರಾವಾಹಿ ಪ್ರಸಾರವಾಗಲಿದೆ.