ಕರ್ನಾಟಕ

karnataka

ETV Bharat / sitara

ಕನ್ನಡದ ಕೋಟ್ಯಧಿಪತಿಗೆ ಕೌಂಟ್​ಡೌನ್​​:ಈ ಸೀಸನ್​​​ನ ಮೊದಲ ಸ್ಪರ್ಧಿ ಇವರೇ ನೋಡಿ - ರಿಯಾಲಿಟಿ ಶೋ

ಕೋಟಿ ಗೆಲ್ಲುವ ಜನಪ್ರಿಯ ರಿಯಾಲಿಟಿ ಶೋ 'ಕನ್ನಡದ ಕೋಟ್ಯಧಿಪತಿ' ನಾಲ್ಕನೇ ಸೀಸನ್​​ಗೆ ಕೌಂಟ್​ಡೌನ್ ಶುರುವಾಗಿದೆ. ಈ ಸೀಸನ್​​ನ ಮೊದಲ ಎಪಿಸೋಡು ನಾಳೆಯಿಂದ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಚಿತ್ರಕೃಪೆ : ಕಲರ್ಸ್​ ಕನ್ನಡ ವಾಹಿನಿ

By

Published : Jun 21, 2019, 10:59 PM IST

ಈಗಾಗಲೇ ಮೊದಲ ಎಪಿಸೋಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪುನೀತ್ ಎದುರು ಹಾಟ್​ ಸೀಟ್​​ಲ್ಲಿ ಕುಳಿತು ಕೋಟಿ ಗೆಲ್ಲುವ ಆಟ ಆಡಿರುವ ಮೊದಲ ಸ್ಪರ್ಧಿ ಯಾರು ಎಂಬುದು ಸದ್ಯ ರಿವೀಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಗ್ರಾಮವಾದ ಸಂಡಳ್ಳಿಯ ಬಡ ಕುಟುಂಬದ ದೀಪಾ ಅಂಬಿಗ ಈ ಸೀಸನ್​​ನ ಮೊದಲ ಸ್ಪರ್ಧಿಯಾಗಿದ್ದಾರೆ.

ಪುನೀತ್ ಜತೆ ದೀಪಾ ಕುಟುಂಬ

ಹೊನ್ನಾವರ ತಾಲೂಕಿನ ಹಳದೀಪುರದ ಶ್ರೀನಿವಾಸರನ್ನು ಮದುವೆಯಾಗಿ ಪ್ರಸ್ತುತದಲ್ಲಿ ಕುಮಟಾದಲ್ಲಿ ವಾಸವಾಗಿದ್ದಾರೆ. ಮೀನುಗಾರಿಕೆ ಇವರ ಕುಟುಂಬದ ಕಸುಬು. ನಿತ್ಯ ಸಮುದ್ರಕ್ಕೆ ಇಳಿದು ಕಡಲ ತೆರೆಯ ವಿರುದ್ಧ ಸೆಣಸಿ ಜೀವನ ನಡೆಸುತ್ತಿದೆ ಈ ಕುಟುಂಬ.

ನಟ ರಾಘಣ್ಣನ ಜತೆ ದೀಪಾ ಕುಟುಂಬ

ದೀಪಾ ಅವರಿಗೆ ಈ ಕಾರ್ಯಕ್ರಮದಲ್ಲಿ ಗೆಲ್ಲುವ ಹಣದಲ್ಲಿ ಪುಟ್ಟ ಮನೆಯೊಂದನ್ನು ಕಟ್ಟುವ ಆಸೆಯಂತೆ. ಅದಕ್ಕಾಗಿಯೇ ಕಾರ್ಯಕ್ರಮದಲ್ಲಿ ಶ್ರದ್ಧೆಯಿಂದ ಭಾಗವಹಿಸಿದ್ದಾರೆ. ಇವರು ಎಷ್ಟು ಪ್ರಶ್ನೆಗೆ ಉತ್ತರಿಸಿದ್ದಾರೆ?ಎಷ್ಟು ಹಣ ಗೆದ್ದಿದ್ದಾರೆ ಎಂಬುದನ್ನು ತಿಳಿಯಲು ನಾಳೆ ರಾತ್ರಿ 8 ಗಂಟೆ ವರೆಗೆ ಕಾಯಲೆಬೇಕು.

ಇನ್ನು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ದೀಪಾ ಅವರಿಗೆ ಉತ್ತರ ಕನ್ನಡ ಜನತೆ ಶುಭ ಕೋರಿದೆ. ಒಳ್ಳೆಯ ರೀತಿಯಲ್ಲಿ ಆಟವಾಡಿ ನಿಮ್ಮ ಕನಸು ನನಸು ಮಾಡಿಕೊಳ್ಳಿ ಎಂದು ಆಶಿಸಿದೆ.

ABOUT THE AUTHOR

...view details