ಕನ್ನಡ ಕಿರುತೆರೆಯಲ್ಲಿ ಪರ ವಿರೋಧದ ನಡುವೆಯೂ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರ ಕಾಣಲಾರಂಭಿಸಿವೆ. ಒಂದಲ್ಲಾ ಎರಡಲ್ಲ, ಸಾಲು ಸಾಲು ಡಬ್ಬಿಂಗ್ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆರಂಭಿಸಿವೆ.
ರಾಧಾಕೃಷ್ಣ, ಮಹಾಭಾರತ, ದೃಷ್ಟಿ, ನಾಗಕನ್ನಿಕೆ, ಪರಮಾವತಾರಿ ಶ್ರೀಕೃಷ್ಣ, ಅಲಾದ್ದಿನ್, ಗಣೇಶ, ಮಹಾನಾಯಕ ಹೀಗೆ ಈಗ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳದ್ದೇ ಹವಾ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾಭಾರತ' 6.6 ಹಾಗೂ 'ರಾಧಾಕೃಷ್ಣ' 6.4 ರೇಟಿಂಗ್ ಪಡೆದುಕೊಂಡಿದೆ. ಇದೀಗ ಡಬ್ಬಿಂಗ್ ಧಾರಾವಾಹಿಗಳು ಹೆಚ್ಚು ಟಿಆರ್ಪಿ ಗಳಿಸುತ್ತಿವೆ. ಜನರು ಡಬ್ಬಿಂಗ್ ಧಾರಾವಾಹಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಮೊದಲ ಸ್ಥಾನದಲ್ಲಿರುವ ಮಹಾಭಾರತ ಅದರಲ್ಲೂ ಪೌರಾಣಿಕ ಧಾರಾವಾಹಿ 'ಮಹಾಭಾರತ' ಚಿಕ್ಕವರಿಂದ ಹಿಡಿದು ಹಿರಿಯರ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮಾತ್ರವಲ್ಲ ಆರಂಭದ ದಿನಗಳಿಂದಲೂ ಮಹಾಭಾರತ ಧಾರಾವಾಹಿ ಒಳ್ಳೆಯ ರೇಟಿಂಗ್ ಪಡೆದಿತ್ತು. ಅದರಲ್ಲೂ ಕಳೆದ ವಾರ ಪ್ರಸಾರವಾದ ದ್ರೌಪದಿ ವಸ್ತ್ರಾಪಹರಣದ ಸಂಚಿಕೆಗಳು ವೀಕ್ಷಕರನ್ನು ಪುಳಕಿತರನ್ನಾಗಿ ಮಾಡಿದವು. ಅದೇ ಕಾರಣದಿಂದ ಕಳೆದ ವಾರದ ಸಂಚಿಕೆಗಳು ಒಳ್ಳೆಯ ರೇಟಿಂಗ್ ಪಡೆದುಕೊಂಡಿದೆ.
ಇದು ಡಬ್ಬಿಂಗ್ ಸೀರಿಯಲ್ಗಳ ಮಟ್ಟಿಗೆ ಮೊದಲ ಬಾರಿಗೆ ಹೆಚ್ಚಿನ ರೇಟಿಂಗ್ ಪಡೆದ ಧಾರಾವಾಹಿ ಕೂಡಾ ಹೌದು. ಇದಲ್ಲದೆ ರಾಧಾಕೃಷ್ಣ ಕೂಡಾ ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಸುವರ್ಣ ವಾಹಿನಿಯಲ್ಲಿ ಎರಡು ಡಬ್ಬಿಂಗ್ ಧಾರಾವಾಹಿಗಳು ಟಾಪ್ 1 ,ಟಾಪ್ 2 ಸ್ಥಾನಗಳನ್ನು ಗಳಿಸುವ ಮೂಲಕ ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿರುವುದು ನಿಜ.
ಎರಡನೇ ಸ್ಥಾನದಲ್ಲಿರುವ ರಾಧಾಕೃಷ್ಣ