ಒಂದೂವರೆ ತಿಂಗಳಿನಿಂದ ಯಾವುದೇ ಧಾರಾವಾಹಿಗಳಿಲ್ಲದೇ ಕಂಗಲಾಗಿ ಕುಳಿತಿದ್ದ ಪ್ರೇಕ್ಷಕರು ಇಂದು ಸಂಜೆ ಯಾವಾಗ ಆಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಂಗನಾಯಕಿ ಧಾರಾವಾಹಿ ಟಿಆರ್ಪಿ ಕಡಿಮೆ ಇರುವ ಕಾರಣದಿಂದ ಪ್ರಸಾರ ನಿಲ್ಲಿಸಿದೆ.
2019 ರಲ್ಲಿ ಆರಂಭವಾಗಿರುವ ರಂಗನಾಯಕಿ ಧಾರಾವಾಹಿ ಅತೀ ಕಡಿಮೆ ಅವಧಿಯಲ್ಲಿ ಪ್ರಸಾರ ನಿಲ್ಲಿಸಿರುವುದು ಬೇಸರದ ಸಂಗತಿಯಾದರೂ ಟಿಆರ್ಪಿ ಕಡಿಮೆ ಇರುವ ಕಾರಣ ಅದನ್ನು ನಿಲ್ಲಿಸುವುದು ಅನಿವಾರ್ಯವಾಗಿದೆ. ಅಂದ ಹಾಗೇ ಪ್ರತಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿದ್ದ ರಂಗನಾಯಕಿ ಮುಕ್ತಾಯಗೊಂಡಿರುವುದರಿಂದ ಆ ಜಾಗಕ್ಕೆ ಸೀತಾವಲ್ಲಭ ಧಾರಾವಾಹಿ ಪ್ರಸಾರ ಕಾಣಲಿದೆ.
ಧಾರಾವಾಹಿ ಆರಂಭವಾದಾಗಿನಿಂದ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಸೀತಾ ವಲ್ಲಭ ಧಾರಾವಾಹಿಯಲ್ಲಿ ನಾಯಕ ಆರ್ಯನಾಗಿ ಅಭಿನಯಿಸುತ್ತಿರುವ ಜಗನ್ ಮತ್ತು ನಾಯಕಿ ಮೈಥಿಲಿ ಆಗಿ ನಟಿಸುತ್ತಿರುವ ಸುಪ್ರಿಯಾ ಸತ್ಯನಾರಾಯಣ ಅವರ ಮೋಹಕ ಕೆಮೆಸ್ಟ್ರಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇಷ್ಟು ದಿನ ಈ ಮುದ್ದಾದ ಜೋಡಿಯನ್ನು ನೋಡಲು 10 ಗಂಟೆಯ ತನಕ ಕಾಯಬೇಕಿತ್ತು. ಆದರೆ ಇನ್ಮುಂದೆ ಬಹು ಬೇಗನೇ ನೋಡಬಹುದಾಗಿದೆ.
ಅದಲು ಬದಲಾದ ಧಾರಾವಾಹಿ ಪ್ರಸಾರದ ಸಮಯ!