ಕರ್ನಾಟಕ

karnataka

ETV Bharat / sitara

ತೆಲುಗು ಕಿರುತೆರೆಗೆ ಹಾರಿದ ಕನ್ನಡದ ನಟ ವಿನಯ್ ಗೌಡ - ಶಿವನ ಪಾತ್ರದಲ್ಲಿ ವಿನಯ್ ಗೌಡ

ಕನ್ನಡ ಧಾರವಾಹಿಗಳಲ್ಲಿ ಮುಖ್ಯವಾಗಿ ಪೌರಾಣಿಕ ಧಾರವಾಹಿಯಲ್ಲಿ ಶಿವನ ಪಾತ್ರದ ಮೂಲಕವೇ ಹೆಚ್ಚು ಮನೆಮಾತಾಗಿದ್ದ ನಟ ವಿನಯ್ ಗೌಡ ಸದ್ಯ ತೆಲುಗು ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

vinay
vinay

By

Published : May 26, 2021, 4:28 PM IST

ಪೌರಾಣಿಕ ಧಾರಾವಾಹಿಗಳಲ್ಲಿ ಶಿವನ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವ ನಟ ವಿನಯ್ ಗೌಡ ಅವರು, ಈಗ ತೆಲುಗು ಕಿರುತೆರೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ವಿನಯ್ ಗೌಡ, ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಧಾರಾವಾಹಿಯ ಮೊದಲ ಪ್ರೋಮೋ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರೋಮೋ ನೋಡಿದರೆ ಧಾರಾವಾಹಿಯಲ್ಲಿ ವಿನಯ್ ನಾಯಕನಾಗಿ ನಟಿಸುತ್ತಿದ್ದಾರೆ ಎಂದು ತಿಳಿದು ಬರುತ್ತದೆ. ಇದರಲ್ಲಿ ಸೂಪರ್ ಸ್ಟೈಲಿಶ್ ಆಗಿ, ಖಡಕ್ ಆಗಿ ಕಾಣಿಸಿಕೊಂಡಿರುವ ವಿನಯ್ ಗೌಡ, ತೆಲುಗಿಗೆ ಪದಾರ್ಪಣೆ ಮಾಡುತ್ತಿರುವ ಸುದ್ದಿ ತಿಳಿಸುತ್ತಿದ್ದಂತೆ ಅವರ ಸ್ನೇಹಿತರಿಂದ ಹಿಡಿದು ಸಹನಟರು, ಅಭಿಮಾನಿಗಳು ಪ್ರತಿಯೊಬ್ಬರೂ ಶುಭಾಶಯ ತಿಳಿಸುತ್ತಿದ್ದಾರೆ.

https://www.instagram.com/p/CPTG5qRHY3d/?utm_medium=copy_link

ರಾವೋಯಿ ಚಂದಮಾಮ ಎಂಬ ತೆಲುಗಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಧಾರಾವಾಹಿ ಈಟಿವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ.‌ ಹಾಗೆಯೇ, ಧಾರಾವಾಹಿಯ ಮೊದಲ ಎಪಿಸೋಡ್​ನ ಕೆಲವು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

https://www.instagram.com/p/CPVDsXHHvTZ/?utm_medium=copy_link

ವಿನಯ್ ಗೌಡ ಅವರು ಇತ್ತೀಚೆಗೆ ‘ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಎಂಬ ಪೌರಾಣಿಕ ಧಾರಾವಾಹಿಯಿಂದ ಹೊರಬರುವುದಾಗಿ ಘೋಷಿಸಿದ್ದರು. ಧಾರಾವಾಹಿಯಲ್ಲಿ ಅವರು ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ABOUT THE AUTHOR

...view details