ವೀಕ್ಷಕರು ಕುತೂಹಲದಿಂದ ಕಾಯುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಶೀಘ್ರವೇ ಆರಂಭವಾಗಲಿದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಿರೂಪಣೆ ಮಾಡುತ್ತಿರುವ ಕನ್ನಡದ ಕೋಟ್ಯಧಿಪತಿ ಇದೇ ತಿಂಗಳು ಅಂದರೆ ಜೂನ್ 22 ರಿಂದ ಪ್ರಾರಂಭವಾಗಲಿದೆ.
ಶೀಘ್ರದಲ್ಲೇ ಕನ್ನಡದ ಕೋಟ್ಯಧಿಪತಿ ಪ್ರಸಾರ: ನಿರೂಪಣೆ ಹೊಣೆ ಹೊತ್ತಿರುವ ಪವರ್ ಸ್ಟಾರ್ - undefined
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಡೆಸಿಕೊಡುತ್ತಿರುವ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮ ಇದೇ ತಿಂಗಳ 22ರಿಂದ ಪ್ರಸಾರವಾಗಲಿದೆ. ಈ ಬಾರಿ ಕಾರ್ಯಕ್ರಮ ವಿಭಿನ್ನವಾಗಿದ್ದು ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿದೆ.
ಈ ಹಿಂದೆ ರಮೇಶ್ ಅರವಿಂದ್ ಈ ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದರು. ಇದೀಗ ಪುನೀತ್ ಮತ್ತೆ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಪುನೀತ್ ಈ ಹಿಂದೆ ಕಿರುತೆರೆಯಲ್ಲಿ ಫ್ಯಾಮಿಲಿ ಪವರ್ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಇದೀಗ ವಾಹಿನಿ ಬಿಡುಗಡೆ ಮಾಡಿರುವ ಕೋಟ್ಯಧಿಪತಿ ಪ್ರೊಮೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡಿದೆ.
ವಯಸ್ಸಾದ ವ್ಯಕ್ತಿಯೊಬ್ಬರು ತಮ್ಮ ಮೊಮ್ಮಗನಿಗೆ ಅವರ ತಾತ, ತಾಯಿ, ತಂದೆ ಪಡೆದಿರುವ ಪ್ರಶಸ್ತಿಗಳನ್ನು ತೋರಿಸುತ್ತಿರುತ್ತಾರೆ. ಆಗ ಮೊಮ್ಮಗ ನೀವು ಯಾವ ಪ್ರಶಸ್ತಿಯನ್ನು ಪಡೆದಿಲ್ಲವೇ ಎಂದು ಪ್ರಶ್ನಿಸುತ್ತಾನೆ. ಕೆಲವು ದಿನಗಳ ನಂತರ ಆ ತಾತ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಂದ ಚೆಕ್ ಪಡೆಯುತ್ತಾರೆ. ಆ ಫೋಟೋವನ್ನು ಮನೆಯ ಗೋಡೆಯ ಮೇಲೆ ತೂಗುಹಾಕುವ ದೃಶ್ಯ ಈ ಪ್ರೊಮೋದಲ್ಲಿದೆ. ಹಿಂದಿನ ಸೀಸನ್ಗಳಿಗಿಂತ ಈ ಸೀಸನ್ ವಿಭಿನ್ನವಾಗಿದೆ ಹಾಗೂ ಭರವಸೆ ಮೂಡಿಸಿದೆ ಎಂಬುದನ್ನು ಪ್ರೋಮೋ ಹೇಳುತ್ತಿದೆ.