ಕರ್ನಾಟಕ

karnataka

ETV Bharat / sitara

ಕೋಟ್ಯಧಿಪತಿ ಕಿಕ್​... ಮೀನು ಮಾರುವ ಮಹಿಳೆ ಗಳಿಸಿದ್ದು ಬರೋಬ್ಬರಿ ಇಷ್ಟು...!

ಫಾಸ್ಟೆಸ್ಟ್​ ಫಿಂಗರ್​​ ರೌಂಡ್​ನಲ್ಲಿ ಉತ್ತರ ಕನ್ನಡ ಕುಮಟಾ ಮೂಲದ ದೀಪಾ ಶ್ರೀನಿವಾಸ್ ಹರಿಕಾಂತ್ ವೇಗವಾಗಿ ಉತ್ತರ ನೀಡಿ ನಾಲ್ಕನೇ ಆವೃತ್ತಿಯ ಕನ್ನಡದ ಕೋಟ್ಯಧಿಪತಿಯ ಮೊದಲ ಸ್ಪರ್ಧಿಯಾಗಿ ಹಾಟ್​ಸೀಟ್ ಅಲಂಕರಿಸಿದರು.

By

Published : Jun 24, 2019, 7:56 PM IST

ದೀಪಾ ಶ್ರೀನಿವಾಸ್ ಹರಿಕಾಂತ್

ನಾಲ್ಕನೇ ಆವೃತ್ತಿಯ ಕನ್ನಡದ ಕೋಟ್ಯಧಿಪತಿ ಸೀಸನ್ ಕಿಕ್ ಆರಂಭವಾಗಿದೆ.ಮೊದಲ ಎಪಿಸೋಡ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮನೆಮಾಡಿತ್ತು. ಹಾಗೆಯೇ, ಎಪಿಸೋಡ್​​​ನಲ್ಲಿ ಎಷ್ಟು ಹಣ ಗೆಲ್ಲುತ್ತಾರೆ ಎಂಬುದು ಪ್ರತಿಯೊಬ್ಬ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು.

ಫಾಸ್ಟೆಸ್ಟ್​ ಫಿಂಗರ್​​ ರೌಂಡ್​ನಲ್ಲಿ ಉತ್ತರ ಕನ್ನಡ ಕುಮಟಾ ಮೂಲದ ದೀಪಾ ಶ್ರೀನಿವಾಸ್ ಹರಿಕಾಂತ್ ವೇಗವಾಗಿ ಉತ್ತರ ನೀಡಿ ನಾಲ್ಕನೇ ಆವೃತ್ತಿಯ ಕನ್ನಡದ ಕೋಟ್ಯಧಿಪತಿಯ ಮೊದಲ ಸ್ಪರ್ಧಿಯಾಗಿ ಹಾಟ್​ಸೀಟ್ ಅಲಂಕರಿಸಿದರು.

ಕೋಟ್ಯಧಿಪತಿ ಮೊದಲ ಸ್ಪರ್ಧಿ ದೀಪಾ ಶ್ರೀನಿವಾಸ್ ಹರಿಕಾಂತ್

ಎರಡು ಸೇಫ್​ಜೋನ್​ನ ಹತ್ತು ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿ 3.20 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಂಡರು. ನಂತರದಲ್ಲಿ ಸತತ ಎರಡು ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದ ದೀಪಾ 12.50 ಲಕ್ಷ ಹಣ ಗಳಿಸಿದರು. ನಂತರದಲ್ಲಿ ಪ್ರಶ್ನೆಗೆ ಉತ್ತರಿಸಿದ್ದರೆ ದೀಪಾ ಕೋಟಿ ಗೆಲ್ಲುವ ಬಹುದೊಡ್ಡ ಅವಕಾಶ ಹೊಂದಿದ್ದರು. ಆದರೆ ಆ ವೇಳೆಗೆ ಎಲ್ಲ ಲೈಫ್​ಲೈನ್​ ಬಳಕೆ ಮಾಡಿದ್ದರು.

ಈ ಹಂತದಲ್ಲಿ ಉತ್ತರ ತಪ್ಪಾದಲ್ಲಿ 3.20 ಲಕ್ಷ, ಒಂದು ವೇಳೆ ಸರಿಯುತ್ತರ ನೀಡಿದರೆ 25 ಲಕ್ಷ ಗಳಿಸುವ ಅವಕಾಶ ಹೊಂದಿದ್ದರು. ಆದರೆ ದೀಪಾ ಹಣ ಕಳೆದುಕೊಳ್ಳಲು ಇಷ್ಟಪಡದೆ ಆಟವನ್ನು ಅಲ್ಲಿಗೆ ಮೊಟಕುಗೊಳಿಸಿದರು. ಈ ಮೂಲಕ ಕನ್ನಡದ ಕೋಟ್ಯಧಿಪತಿಯ ನಾಲ್ಕನೇ ಆವೃತ್ತಿಯ ಮೊದಲ ಸ್ಫರ್ಧಿ 12.50 ಲಕ್ಷದೊಂದಿಗೆ ಆಟ ಕೊನೆಗೊಳಿಸಿದರು.

ಪುಟ್ಟದೊಂದು ಮನೆಯ ಕಟ್ಟಿಕೊಳ್ಳುವ ಆಸೆ ಇಟ್ಟುಕೊಂಡಿರುವ ದೀಪಾ ಅವರಿಗೆ ಪುನೀತ್ ಅವರು ಚೆಕ್ ನೀಡಿ ಶುಭ ಹಾರೈಸಿದರು.ಶ್ರೀನಿವಾಸ್​ ಬೋಟ್​ನಲ್ಲಿ ಕೆಲಸ ಮಾಡುತ್ತಾರೆ. ಅವರು ಬರುವುದು ಮೂರು, ಅಥವಾ ಎರಡು ತಿಂಗಳಿಗೊಮ್ಮೆ. ದೀಪಾ ಅವರು ಮೀನು ಮಾರಾಟ ಕೂಡ ಮಾಡುವುದಾಗಿ ಕಾರ್ಯಕ್ರಮದಲ್ಲಿ ತಿಳಿಸಿದ್ದರು.

ABOUT THE AUTHOR

...view details