ಕರ್ನಾಟಕ

karnataka

ETV Bharat / sitara

ಬಿಗ್ ಬಾಸ್​ಗೆ ಎಕ್ಸ್‌ಕ್ಯೂಸ್‌ ಮೀ ನಟನ ಜೊತೆ ಈ ಮೂವರ ಎಂಟ್ರಿ? - ರವಿಶಂಕರ್

ಇದೇ ತಿಂಗಳ 28 ರಿಂದ ಬಿಗ್​ಬಾಸ್​ ಸೀಸನ್ 8 ಆರಂಭವಾಗಲಿದೆ. ಬಿಗ್​ ಮನೆಯೊಳಗೆ ಈ ಬಾರಿ ಯಾರೆಲ್ಲ ಎಂಟ್ರಿ ಆಗ್ತಾರೆ ಅನ್ನೋ ಕುತೂಹಲ ಪ್ರೇಕ್ಷರಲ್ಲಿ ಹೆಚ್ಚಿದೆ. ಈ ಬಾರಿಯೂ ಬಿಗ್​ಬಾಸ್​ ಮನೆಗೆ ಕಿರುತೆರೆ ನಟ-ನಟಿಯರು ಸೇರಿದಂತೆ ಕೆಲ ಸೆಲೆಬ್ರಿಟಿಗಳು ಪ್ರವೇಶಿಸಲು ಕಾತರರಾಗಿದ್ದಾರೆ.

kannada-bigg-boss-season-8
ಬಿಗ್ ಬಾಸ್ ಸೀಸನ್ 8

By

Published : Feb 10, 2021, 12:57 PM IST

ಫೆಬ್ರವರಿ 28ರಿಂದ ಆರಂಭವಾಗಲಿರುವ ಕನ್ನಡ ಬಿಗ್ ಬಾಸ್ ಸೀಸನ್ 8ಕ್ಕೆ, ದೊಡ್ಮನೆ ಪ್ರವೇಶಿಸಲಿರುವ ಸ್ಪರ್ಧಿಗಳ ಹೆಸರು ವೈರಲ್ ಆಗಿವೆ. ಇದೀಗ ಧಾರಾವಾಹಿ ನಟ-ನಟಿಯರ ಹೆಸರು ಹೆಚ್ಚಾಗಿ ಕೇಳಿಬರುತ್ತಿವೆ.

ಅಗ್ನಿಸಾಕ್ಷಿ ಧಾರಾವಾಹಿಯ ಅಂಜಲಿ ಪಾತ್ರಧಾರಿ ಸುಕೃತ ನಾಗ್ ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಸುಕೃತ ನಾಗ್ ಎಲ್ಲೂ ಹೇಳಿಕೊಂಡಿಲ್ಲ ಹಾಗೂ ವಾಹಿನಿ ಕೂಡ ಬಿಗ್ ಬಾಸ್ ಕೂಡ ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಬಲ್ಲ ಮೂಲಗಳ, ಪ್ರಕಾರ ಸುಕೃತ ನಾಗ್ ಅವರಿಗೆ ಪ್ರಸ್ತುತ ಯಾವುದೇ ಧಾರವಾಹಿಗಳು ಇಲ್ಲದೆ ಇರುವುದರಿಂದ ಅವರು ಬಿಗ್ ಬಾಸ್ ಪ್ರವೇಶಿಸುವುದು ಖಚಿತ ಎನ್ನಲಾಗುತ್ತಿದೆ.

ಸುಕೃತ ನಾಗ್

ಮತ್ತೊಂದೆಡೆ ಅಗ್ನಿಸಾಕ್ಷಿ ಧಾರಾವಾಹಿ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಕೂಡ ಬಿಗ್ ಬಾಸ್ ಸ್ಪರ್ಧಿ ಎನ್ನಲಾಗುತ್ತಿದೆ. ಆದರೆ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಕಾರಣ ವೈಷ್ಣವಿ ಬಿಗ್ ಬಾಸ್ ಗೆ ಹೋಗುವುದು ಸಾಧ್ಯವಿಲ್ಲ. " ಬಿಗ್ ಬಾಸ್ ನಲ್ಲಿ ಭಾಗವಹಿಸುವಂತೆ ನನಗೆ ಕಲರ್ಸ್ ಕನ್ನಡ ವಾಹಿನಿಯಿಂದ ಕರೆ ಬಂದದ್ದು ನಿಜ. ಆದರೆ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ ನಾನು ಇದೀಗ ರಿಯಾಲಿಟಿ ಶೋ ನಲ್ಲಿ ಭಾಗವಹಿಸುವುದು ಸಾಧ್ಯವಿಲ್ಲ. ಅಂದ ಹಾಗೇ, ಈಗಾಗಲೇ ನಾನು ಚಿತ್ರದ ಡಬ್ಬಿಂಗ್ ಮುಗಿಸಿದ್ದು, ಇದೇ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಬಹುಕೃತ ವೇಷಂ ನಲ್ಲಿ ನಾನು ನಕ್ಷತ್ರ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದೇನೆ" ಎಂದಿದ್ದಾರೆ ವೈಷ್ಣವಿ.

ವೈಷ್ಣವಿ ಗೌಡ

ಮರೆಗುಳಿ ವಿಜ್ಞಾನಿ ಸುಯ್ ಟಪಾಕ್ ಆಗಿ ಮಜಾ ಟಾಕೀಸ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ರವಿಶಂಕರ್, ವಿಠಲ್ ರಾವ್ ಆಗಿ ಕಿರುತೆರೆ ಲೋಕದಲ್ಲಿ ಫೇಮಸ್ಸು. ಸಿಲ್ಲಿಲಲ್ಲಿಯ ಡಾಕ್ಟರ್ ವಿಠಲ್ ರಾವ್ ಆಗಿ ಸೀರಿಯಲ್ ಪ್ರಿಯರ ಮನ ಸೆಳೆದಿರುವ ರವಿಶಂಕರ್ ಈಗಾಗಲೇ ಹಿರಿತೆರೆಯಲ್ಲೂ ಛಾಪು ಮೂಡಿಸಿದ್ದಾರೆ. ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ರವಿಶಂಕರ್ ನಟಿಸಿದ್ದರೂ, ಜನ ಅವರನ್ನು ಗುರುತಿಸುವುದು ವಿಠಲ್ ರಾವ್ ಆಗಿಯೇ.

ಇದರ ನಡುವೆ ಮಜಾ ಟಾಕೀಸ್ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ರವಿಶಂಕರ್ ಇದೀಗ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಹೌದು, ಬಿಗ್ ಬಾಸ್ ಆಯೋಜಕರು ಈಗಾಗಲೇ ರವಿಶಂಕರ್ ಅವರೊಂದಿಗೆ ಮಾತನಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಕುರಿತು ರವಿಶಂಕರ್ ಅವರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಇದು ನಿಜವಾಗಿ ರವಿ ಅವರು ದೊಡ್ಮನೆಯೊಳಗೆ ಹೋದರೆ ಕಿರುತೆರೆ ವೀಕ್ಷಕರಿಗೆ ಮನರಂಜನೆ ಸಿಗುವುದಂತೂ ಖಚಿತ.

ಸುನಿಲ್ ರಾವ್

ನಟನೆಯ ಮೂಲಕ ಬಣ್ಣದ ಲೋಕದಲ್ಲಿ ಛಾಪು ಮೂಡಿಸಿರುವ ರವಿಶಂಕರ್ ಅತ್ಯದ್ಭುತ ಗಾಯಕರು ಹೌದು. ಸಂಗೀತ ಪ್ರಿಯರ ಮನ ಸೆಳೆದಿರುವ ರವಿಶಂಕರ್ ಗೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಎಂದರೆ ತುಂಬಾ ಇಷ್ಟ. ಅದೇ ಕಾರಣದಿಂದ ಎಸ್‌ಪಿಬಿ ನಿಧನವಾದಾಗಿನಿಂದ ಇಲ್ಲಿಯ ತನಕ ಯಾವುದೇ ಹಾಡನ್ನು ರವಿಶಂಕರ್ ಹಾಡಿಲ್ಲ. ಈ ವಿಚಾರವನ್ನು ಅವರು ಚಾಟ್ ಕಾರ್ನರ್ ಕಾರ್ಯಕ್ರಮದಲ್ಲೂ ಹಂಚಿಕೊಂಡಿದ್ದರು.

ಸುನಿಲ್ ರಾವ್

ಹಾಗೆಯೇ, ಮತ್ತೊಬ್ಬ ಹಾಡುಗಾರ, ನಟ ಸುನಿಲ್ ರಾವ್ ಕೂಡ ಪ್ರವೇಶಿಸಲಿದ್ದಾರೆ ಎಂಬ ಮಾತಿದೆ. ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಸುನಿಲ್‌ ರಾವ್‌ ಅವರಿಗೆ 'ಎಕ್ಸ್‌ಕ್ಯೂಸ್‌ ಮೀ' ದೊಡ್ಡ ಯಶಸ್ಸು ತಂದುಕೊಟ್ಟಿತ್ತು. 'ಲೂಸ್‌ ಕನೆಕ್ಷನ್‌' ವೆಬ್‌ ಸಿರೀಸ್‌ ಮೂಲಕವೂ ಅವರು ಗಮನ ಸೆಳೆದಿದ್ದರು. ಖ್ಯಾತ ಗಾಯಕಿ ಬಿ.ಕೆ. ಸುಮಿತ್ರಾ ಅವರ ಮಗನಾದ ಸುನಿಲ್‌ ಓರ್ವ ಉತ್ತಮ ಗಾಯಕ ಕೂಡ ಹೌದು. ಹಾಗಾಗಿ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ನೀಡಿದರೆ ಎಲ್ಲರನ್ನೂ ರಂಜಿಸುವುದರಲ್ಲಿ ಅನುಮಾನವಿಲ್ಲ. ಆದರೆ ಈ ಬಗ್ಗೆ ಅವರ ಕಡೆಯಿಂದ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.

ಓದಿ : ಬಿಗ್​ಬಾಸ್-8 ಮೂಲಕ ಅನುಷಾ ರಂಗನಾಥ್ ಮತ್ತೆ ಕಿರುತೆರೆಗೆ​​​...?

ABOUT THE AUTHOR

...view details