ಕರ್ನಾಟಕ

karnataka

ETV Bharat / sitara

ವೀಕ್ಷಕರಿಗೆ ಬಿಗ್ ಸರ್ಪ್ರೈಸ್​... ಹರೀಶ್​ ರಾಜ್​ ಎಲಿಮಿನೇಟ್​ ಮಾಡಿ ದೊಡ್ಮನೆಗೆ ವಾಪಸ್​ ಕಳಿಸಿದ ಬಿಗ್​ ಬಾಸ್​ - Harish raj

ಭಾನುವಾರ ಕಟ್ಟಕಡೆಯ ಕ್ಷಣಗಳಲ್ಲಿ ಹರೀಶ್​ ರಾಜ್​ ಎಲಿಮಿನೇಟ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್​ ಘೋಷಿಸಿದರು. ಎಲ್ಲರಿಗೂ ವಿದಾಯ ಹೇಳಿ ಹರೀಶ್​ ರಾಜ್​ ಹೊರ ಹೋದ ಸ್ವಲ್ಪ ಹೊತ್ತಿನ ನಂತರ, ಸ್ಟೋರ್​ ರೂಂನಿಂದ ಹೊರಬಂದ್ರು.

ಹರೀಶ್ ರಾಜ್
ಹರೀಶ್ ರಾಜ್

By

Published : Dec 22, 2019, 11:21 PM IST

ಬೆಂಗಳೂರು: ಬಿಗ್​ ಬಾಸ್​ ಮನೆಯಿಂದ ಈ ವಾರ ಎಲಿಮಿನೇಟ್ ಆಗೋದು ಯಾರು ಎಂದು ಕುತೂಹಲದಿಂದ ಕಾಯುತ್ತಿದ್ದ ವೀಕ್ಷಕರಿಗೆ ದೊಡ್ಡ ಸರ್ಪ್ರೈಸ್​ ಸಿಕ್ಕಿದೆ.

ಹರೀಶ್ ರಾಜ್​ ಅವರು ಎಲಿಮಿನೇಟ್ ಆಗುತ್ತಾರೆ ಎಂದು ನಿನ್ನೆ ರಾತ್ರಿಯಿಂದಲೂ ಗಾಸಿಪ್​ ಗಳು ಹರಿದಾಡುತ್ತಿತ್ತು.

ಬಿಗ್ ಬಾಸ್​ ಆ ವಿಷಯವನ್ನು ಸತ್ಯ ಮಾಡಿ, ನೋಡುಗರಿಗೆ ಒಂದು ಟ್ವಿಸ್ಟ್​ ಕೊಟ್ಟಿದ್ದಾರೆ.

ಶನಿವಾರ ಕಿಚ್ಚನ ಪಂಚಾಯಿತಿ ಮುಗಿದಾಗ ಚಂದನ್ ಆಚಾರ್, ಚೈತ್ರಾ ಕೋಟೂರ್​ ಹಾಗೂ ಹರೀಶ್​ ರಾಜ್​ ನಾಮಿನೇಟ್ ಆಗಿದ್ದ ಮೂವರು ಸದಸ್ಯರು.

ಈ ಪೈಕಿ ಹರೀಶ್ ರಾಜ್​ ಹೊರ ಹೋಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಭಾನುವಾರ ಕಟ್ಟಕಡೆಯ ಕ್ಷಣಗಳಲ್ಲಿ ಹರೀಶ್​ ರಾಜ್​ ಎಲಿಮಿನೇಟ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್​ ಘೋಷಿಸಿದರು.

ಎಲ್ಲರಿಗೂ ವಿದಾಯ ಹೇಳಿ ಹರೀಶ್​ ರಾಜ್​ ಹೊರ ಹೋದ ಸ್ವಲ್ಪ ಹೊತ್ತಿನ ನಂತರ, ವಾಸುಕಿ ಅವರೇ ಚಪಾತಿ ಲಟ್ಟಿಸಲು ರೆಡಿ ಇದ್ದೀರಾ ಎನ್ನುವ ಬಿಗ್ ಬಾಸ್​ ಧ್ವನಿ ಕೇಳಿಬಂತು. ಏನಾಯ್ತು ಎನ್ನುವಷ್ಟರಲ್ಲಿ ಸ್ಟೋರ್​ ರೂಂನಿಂದ ಹರೀಶ್​ ರಾಜ್​ ಅವರು ಹೊರಬಂದ್ರು.

ಈ ವಾರ ಎಲಿಮಿನೇಶನ್​ ಇಲ್ಲ ಎಂದು ಬಿಗ್ ಬಾಸ್​ ಘೋಷಿಸಿದ್ದು, ಮುಂದಿನ ವಾರ ಡಬಲ್ ಎಲಿಮಿನೇಶನ್ ಆಗುವ ಸಾಧ್ಯತೆ ಇದೆ.

ಕನಸು ನನಸು ಮಾಡಿದ ಬಿಗ್​ ಬಾಸ್​: ಹರೀಶ್​ ರಾಜ್​ ಅವರು ಮೊನ್ನೆಯಷ್ಟೇ ವಾಸುಕಿ ಅವರೊಟ್ಟಿಗೆ ಚರ್ಚೆ ಮಾಡುತ್ತಾ, ಯಾರಾದರೂ ಎಲಿಮಿನೇಟ್ ಆದಾಗ ನಾವೂ ಅವರೊಟ್ಟಿಗೆ ಓಡಿ ಹೋಗಿ, ಗೇಟ್​ ಹತ್ತಿ ಅಲ್ಲಿಂದ ಪರಾರಿ ಆದರೆ ಹೇಗಿರುತ್ತೆ ಎಂದು ಕೇಳಿದ್ದರು.

ವಾಸುಕಿ ಅದಕ್ಕೆ ಉತ್ತರಿಸಿ ಗೇಟ್​ ಹತ್ರಾನೇ ಗಾರ್ಡ್ಸ್​ಗಳು ಕಾಯ್ತಿರ್ತಾರೆ. ಸ್ಟೋರ್​ ರೂಂನಿಂದ ಮತ್ತೆ ಕಳಿಸುತ್ತಾರೆ ಎಂದು ಹೇಳಿದ್ರು. ವಾಸುಕಿ ಅವರ ಈ ಮಾತು ಕೇಳಿ ಒಮ್ಮೆಯಾದ್ರೂ ಹೋಗಿ ಹೊರಗೆ ಏನಿದೆ ನೋಡ್ಬೇಕು ಎಂದು ಹರೀಶ್​ ರಾಜ್​ ಕೇಳಿದ್ರು. ಬಿಗ್ ಬಾಸ್​ ಹರೀಶ್ ಅವರ ಆಸೆಯನ್ನು ಈಡೇರಿಸಿದೆ.

ABOUT THE AUTHOR

...view details