ಕರ್ನಾಟಕ

karnataka

ETV Bharat / sitara

BBK8: ಬಿಗ್​ ಮನೆಯಿಂದ ಚಕ್ರವರ್ತಿ ಚಂದ್ರಚೂಡ್ ಎಲಿಮಿನೇಟ್! - ಚಕ್ರವರ್ತಿ ಚಂದ್ರಚೂಡ್ ಎಲಿಮಿನೇಟ್

ಬಿಗ್​ ಬಾಸ್​ ಮನೆಯಿಂದ ಚಕ್ರವರ್ತಿ ಚಂದ್ರಚೂಡ್ ಅವರು ಈ ವಾರ ಎಲಿಮಿನೇಟ್ ಆಗಿದ್ದಾರೆ.

kannada big boss
kannada big boss

By

Published : Jul 24, 2021, 11:52 PM IST

ಕನ್ನಡ ಬಿಗ್ ಬಾಸ್​​ -8ರ ಶೋನ ಸೆಕೆಂಡ್ ಇನಿಂಗ್ಸ್​ನಲ್ಲಿ ಈ ವಾರಾಂತ್ಯ ಚಕ್ರವರ್ತಿ ಚಂದ್ರಚೂಡ್ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ.

ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​​ನಲ್ಲಿ ನಟ ಸುದೀಪ್ ಅವರು ಚಕ್ರವರ್ತಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಕಳೆದ ವಾರ ಎಲಿಮಿನೇಟ್ ಆಗಿದ್ದ ಪ್ರಿಯಾಂಕಾ, ಚಕ್ರವರ್ತಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಹೀಗಾಗಿ, ಅವರಿಗೆ ಮಧ್ಯದ ಬೆರಳು ತೋರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಚಕ್ರವರ್ತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಶನಿವಾರದ ಕಿಚ್ಚನ ಪಂಚಾಯಿತಿಯಲ್ಲೂ ಸುದೀಪ್ ಅವರು ಈ ಬಗ್ಗೆ ಚಕ್ರವರ್ತಿ ಅವರಿಗೆ ಪ್ರಶ್ನಿಸಿದರು. ಆಗ ಚಕ್ರವರ್ತಿ ಅವರು ಕೋಪದಲ್ಲಿ ಹಾಗೇ ತಪ್ಪಾಗಿ ಮಾಡಿದೆ ಎಂದು ತಪ್ಪೊಪ್ಪಿಕೊಂಡರು.

ಚಕ್ರವರ್ತಿ ಅವರ ಕಳೆದ ವಾರದ ವರ್ತನೆಯೇ ಮನೆಯಿಂದ ಎಲಿಮಿನೇಟ್ ಆಗಲು ಕಾರಣ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತವೆ.

(ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್ ಬೆಂಕಿ: ಸುದೀಪ್ ಕಿವಿ ಮಾತಲ್ಲೂ ’ಮಹಾ’ ಪಂಚ್!)

ABOUT THE AUTHOR

...view details