ಕರ್ನಾಟಕ

karnataka

ETV Bharat / sitara

'ಗಾಂಧಾರಿ' ಗುರುತಿಸಲಿಲ್ಲ, ಕೈ ಹಿಡಿದಳು 'ಕಮಲಿ'... ರಿಷಿಗೆ ಅಡುಗೆ ಮಾಡೋದಂದ್ರೆ ಇಷ್ಟವಂತೆ..! - undefined

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕಮಲಿ' ಧಾರಾವಾಹಿಯಲ್ಲಿ ರಿಷಿ ಪಾತ್ರದಲ್ಲಿ ನಟಿಸುತ್ತಿರುವ ನಿರಂಜನ್ ಬಿಡುವಿನ ವೇಳೆಯಲ್ಲಿ ಅಡುಗೆ ಮಾಡಿ ಮನೆ ಮಂದಿಗೆಲ್ಲಾ ಬಡಿಸುತ್ತಾರಂತೆ. ಇದರೊಂದಿಗೆ ಸೈಕ್ಲಿಂಗ್, ಜಿಮ್​​​​​​​​​​​​​ ಮಾಡ್ತಾರಂತೆ.

ನಿರಂಜನ್​

By

Published : Jul 19, 2019, 3:25 PM IST

'ಕಮಲಿ' ಧಾರಾವಾಹಿ ಖ್ಯಾತಿಯ ರಿಷಿ ನಿಮಗೆಲ್ಲಾ ಗೊತ್ತಿದೆ. ಈ ನಟನ ನಿಜ ಹೆಸರು ನಿರಂಜನ್​​. ಧಾರಾವಾಹಿಯಲ್ಲಿ ಕಾಲೇಜು ಪ್ರಾಧ್ಯಾಪಕ ಪಾತ್ರದಲ್ಲಿ ನಟಿಸುತ್ತಿರುವ ರಿಷಿ ಅಲಿಯಾಸ್ ನಿರಂಜನ್​ ಈಗ ಎಲ್ಲಿ ಹೋದರೂ ಅವರನ್ನು ಜನರು ಗುರುತುಹಿಡಿಯುತ್ತಾರಂತೆ.

ನಿರಂಜನ್​

ಧಾರಾವಾಹಿ ಶೂಟಿಂಗ್​​​​ನಲ್ಲೇ ಹೆಚ್ಚು ಸಮಯ ಕಳೆಯುವ ರಿಷಿ ಬಿಡುವು ಸಿಕ್ಕಾಗ ಅಮ್ಮನ ಜೊತೆ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಹೆಚ್ಚು ಸಮಯ ಕಳೆಯುತ್ತಾರಂತೆ. ಅದು ಬಿಟ್ಟರೆ ದೇಹದ ಫಿಟ್ನೆಸ್​​​​​​​​​​​​​​​ಗಾಗಿ ಜಿಮ್ ಹಾಗೂ ಸೈಕ್ಲಿಂಗ್ ಮಾಡುತ್ತಾರಂತೆ. ಅಷ್ಟೇ ಅಲ್ಲ ರಸ್ತೆಯಲ್ಲಿ ಓಡಾಡುವಾಗ ಜನರ ಹಾವಭಾವ ಗುರುತಿಸುತ್ತಾರಂತೆ. ಅದನ್ನು ತಮ್ಮ ನಟನೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡ್ತಾರಂತೆ.

ತನ್ನ ಮುದ್ದು ನಾಯಿಮರಿ ಜೊತೆ ನಿರಂಜನ್​​

ಅವರ ಪ್ರಕಾರ ನಟನೆ ಎಂದರೆ ಅಬ್ಸರ್​ವೇಶನ್​​​​​​​​​​ ಅಂತೆ. ಹೀಗಾಗಿ ನಟನೆ ಬಗ್ಗೆ ರಿಷಿ ಹೆಚ್ಚು ಆಸಕ್ತಿ ಹೊಂದಿರುವುದಾಗಿ ತಿಳಿಸುತ್ತಾರೆ ನಿರಂಜನ್​​​​​​​​. ಈ ಮುನ್ನ ರಿಷಿ 'ಗಾಂಧಾರಿ' ಧಾರಾವಾಹಿಯಲ್ಲಿ ನಟಿಸಿದ್ದರೂ ಅವರಿಗೆ ಹೇಳಿಕೊಳ್ಳುವಂತೆ ಗುರುತು ಸಿಕ್ಕಿರಲಿಲ್ಲವಂತೆ. ಆದರೆ ಕಮಲಿ ಧಾರಾವಾಹಿಯ ಪ್ರಮುಖ ಪಾತ್ರಕ್ಕಾಗಿ ಆಡಿಷನ್​​​ನಲ್ಲಿ ಆಯ್ಕೆಯಾಗಿದ್ದು ನನ್ನ ಪುಣ್ಯ ಎನ್ನುತ್ತಾರೆ ನಿರಂಜನ್​​​​​​.

ರಿಷಿ ಪಾತ್ರಧಾರಿ ನಿರಂಜನ್

For All Latest Updates

TAGGED:

ABOUT THE AUTHOR

...view details