ಕರ್ನಾಟಕ

karnataka

ETV Bharat / sitara

ಕನ್ನಡಕ್ಕೆ ಡಬ್ ಆಯ್ತು ಜ್ಯೂ.ಎನ್​​​ಟಿಆರ್​ ಅಭಿನಯದ ಸಿನಿಮಾ - Aravinda sameta Veeraraghava

ಕನ್ನಡಕ್ಕೆ ಈಗಾಗಲೇ ಬಹಳಷ್ಟು ತೆಲುಗು ಸಿನಿಮಾಗಳು ಡಬ್ ಆಗಿವೆ. ಇದೀಗ ಜ್ಯೂನಿಯರ್ ಎನ್​​ಟಿಆರ್ ನಟನೆಯ ಮತ್ತೊಂದು ಸಿನಿಮಾ ಕನ್ನಡಕ್ಕೆ ಡಬ್ ಆಗಿ ಸೆಪ್ಟೆಂಬರ್​ 6 ರಂದು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

Jr NTR movie dubbed in to Kannada
ಜ್ಯೂ.ಎನ್​​​ಟಿಆರ್​ ಅಭಿನಯದ ಸಿನಿಮಾ

By

Published : Sep 4, 2020, 1:54 PM IST

ಡಬ್ಬಿಂಗ್ ಸಿನಿಮಾಗಳು ಕನ್ನಡಕ್ಕೆ ಹೊಸತೇನಲ್ಲ. ವಾರಾಂತ್ಯದಲ್ಲಿ ಹೊಸ ಡಬ್ಬಿಂಗ್ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ರಾರಾಜಿಸುತ್ತಿವೆ. ವಾರ ಪೂರ್ತಿ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾದರೆ ವಾರಾಂತ್ಯದಲ್ಲಿ ಡಬ್ಬಿಂಗ್ ಸಿನಿಮಾಗಳು ಪ್ರಸಾರವಾಗುತ್ತಿವೆ.

ಜ್ಯೂ.ಎನ್​​ಟಿಆರ್, ಪೂಜಾ ಹೆಗ್ಡೆ

ಈ ವಾರ ಕೂಡಾ ಹೊಸ ಡಬ್ಬಿಂಗ್ ಸಿನಿಮಾವೊಂದು ಪ್ರಸಾರವಾಗುತ್ತಿದೆ. ತೆಲುಗಿನಲ್ಲಿ ಹಿಟ್ ಆದ 'ಅರವಿಂದ ಸಮೇತ ವೀರರಾಘವ' ಈಗ ಕನ್ನಡಕ್ಕೆ ಡಬ್ ಆಗಿ ಇದೇ ಭಾನುವಾರ ಸಂಜೆ 6 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಹಳ್ಳಿಯ ಮುಖ್ಯಸ್ಥನ ಬಳಿ ನಾಯಕ ವೀರ ರಾಘವರೆಡ್ಡಿ ಯಾವುದೋ ವಿಚಾರಕ್ಕೆ ಹೋರಾಟ ಮಾಡುತ್ತಾನೆ. ಅಲ್ಲಿಂದ ಅವನಿಗೆ ಹಿಂಸೆ ಆರಂಭವಾಗುತ್ತದೆ.

ಪೂಜಾ ಹೆಗ್ಡೆ

ಹಿಂಸೆಯೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಅರಿತ ನಾಯಕ ಇದೆಲ್ಲದರಿಂದ ದೂರವಿರಲು ಬೇರೆ ಊರಿಗೆ ತೆರಳುತ್ತಾನೆ. ಅಲ್ಲಿಂದ ಅವನ ಬದುಕು ಕೂಡಾ ಬದಲಾಗುತ್ತದೆ. ಇದರ ಜೊತೆಗೆ ವರ್ಷಗಳಿಂದ ವೈಷಮ್ಯದಿಂದಿದ್ದ ಹಳ್ಳಿಗಳ ಮಧ್ಯೆ ಶಾಂತಿ ಕಾಪಾಡಲು ಯತ್ನಿಸುತ್ತಾನೆ. ಮತ್ತೆ ಅವನು ಊರಿಗೆ ಮರಳಿ ಬರುತ್ತಾನಾ..? ಹಳೆ ವೈಷಮ್ಯ ಮಾಯವಾಗುವುದಾ..? ಎಂದು ತಿಳಿಯಲು ನೀವು ಸಿನಿಮಾ ನೋಡಬೇಕು.

'ಅರವಿಂದ ಸಮೇತ ವೀರರಾಘವ'

ಈ ಚಿತ್ರದಲ್ಲಿ ಜ್ಯೂನಿಯರ್ ಎನ್​​​ಟಿಆರ್ ನಾಯಕರಾಗಿ ನಟಿಸಿದ್ದರೆ, ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದಾರೆ. ಉಳಿದಂತೆ ಜಗಪತಿ ಬಾಬು, ಸುನಿಲ್ ,ನವೀನ್ ಚಂದ್ರ , ಸುಪ್ರಿಯಾ ಪಾಠಕ್ ಮುಂತಾದವರು ತಾರಾಗಣದಲ್ಲಿದ್ದಾರೆ.

ABOUT THE AUTHOR

...view details