ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿ 100 ಎಪಿಸೋಡ್ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಧಾರಾವಾಹಿ ತಂಡ ಜನವರಿ 23 ರಂದು 100 ಕಂತುಗಳನ್ನು ಪೂರೈಸಿದ ಸಂಭ್ರಮ ಆಚರಿಸಿತು. ಸೆಟ್ನಲ್ಲಿ ಕೇಕ್ ಕತ್ತರಿಸುವ ಮೂಲಕ ಧಾರಾವಾಹಿ ತಂಡ ಸಂಭ್ರಮವನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದೆ.
100 ಎಪಿಸೋಡ್ಗಳನ್ನು ಪೂರೈಸಿದ 'ಜೊತೆಜೊತೆಯಲಿ' ಧಾರಾವಾಹಿ - 100 ಎಪಿಸೋಡ್ಗಳನ್ನು ಪೂರೈಸಿದ ಜೊತೆಜೊತೆಯಲಿ
ಸೆಟ್ನಲ್ಲಿ ಕೇಕ್ ಕತ್ತರಿಸುವ ಮೂಲಕ 'ಜೊತೆಜೊತೆಯಲಿ' ಧಾರಾವಾಹಿ ತಂಡ ಸಂಭ್ರಮವನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದೆ. 40-20 ವಯಸ್ಸಿನ ಹೃದಯಗಳ ನಡುವಿನ ಪ್ರೇಮಕಥೆಯನ್ನು ಹೊಂದಿರುವ ಈ ಧಾರಾವಾಹಿ ಆರಂಭವಾಗುತ್ತಿದ್ದಂತೆ ಜನರ ಮನಸ್ಸು ಸೆಳೆಯಿತು. ಈಗ ಈ ಧಾರಾವಾಹಿ ಇತರ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.
40-20 ವಯಸ್ಸಿನ ಹೃದಯಗಳ ನಡುವಿನ ಪ್ರೇಮಕಥೆಯನ್ನು ಹೊಂದಿರುವ ಈ ಧಾರಾವಾಹಿ ಆರಂಭವಾಗುತ್ತಿದ್ದಂತೆ ಜನರ ಮನಸ್ಸು ಸೆಳೆಯಿತು. ಈಗ ಈ ಧಾರಾವಾಹಿ ಇತರ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ. ಕನ್ನಡದಲ್ಲಿ ಈ ಧಾರಾವಾಹಿ ಸೂಪರ್ ಹಿಟ್ ಆಗಿರುವುದಲ್ಲದೆ ತೆಲುಗಿನಲ್ಲಿ ಈಗಾಗಲೇ ರೀಮೇಕ್ ಆಗಿ ಪ್ರಸಾರವಾಗುತ್ತಿದೆ. ಮಲಯಾಳಂನಲ್ಲಿ ಕೂಡಾ ರೀಮೇಕ್ ಆಗುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ 'ಜೊತೆಜೊತೆಯಲಿ' ಅತಿ ಹೆಚ್ಚು ವೀಕ್ಷಕರನ್ನು ಪಡೆದ ಧಾರಾವಾಹಿ ಎಂಬ ಖ್ಯಾತಿಗೆ ಒಳಗಾಗಿತ್ತು.
ಧಾರಾವಾಹಿಯಲ್ಲಿ ಅನು-ಆರ್ಯವರ್ಧನ್ ಜೋಡಿ ಎಲ್ಲರಿಗೂ ಬಹಳ ಮೆಚ್ಚುಗೆಯಾಗಿದೆ. ಮೂಲತಃ ಮರಾಠಿ ಧಾರಾವಾಹಿಯ ರೀಮೇಕ್ ಆಗಿದ್ದರೂ ಧಾರಾವಾಹಿ ಕಥೆಯನ್ನು ಕನ್ನಡದ ಪ್ರೇಕ್ಷಕರಿಗೆ ಅನುಗುಣವಾಗಿ ಬದಲಿಸಲಾಗಿದೆ. ಧಾರಾವಾಹಿ 100 ಎಪಿಸೋಡ್ಗಳನ್ನು ಪೂರೈಸಿದ ಹಿನ್ನೆಲೆ ಸಂಪೂರ್ಣ ಶೀರ್ಷಿಕೆ ಗೀತೆಯನ್ನು ಜೀ ವಾಹಿನಿ ಬಿಡುಗಡೆ ಮಾಡಿದೆ. ತಮ್ಮ ನಡುವೆ ಸಂಚು ರೂಪಿಸುವರನ್ನು ಹಿಮ್ಮೆಟ್ಟಿ, ತಮ್ಮ ನಡುವಿನ ಎಲ್ಲಾ ಅಡೆತಡೆಗಳನ್ನು ದಾಟಿ ಅನು ಹಾಗೂ ಆರ್ಯವರ್ಧನ್ ಒಂದಾಗುತ್ತಾರಾ ಎಂಬುದನ್ನು ಮುಂದಿನ ಎಪಿಸೋಡ್ಗಳಲ್ಲಿ ನೋಡಬೇಕು.