ಅಯ್ಯೋ ಆ ಅಹಲ್ಯಾ ಎಷ್ಟು ಜೋರಿದ್ದಾಳೆ..ಮನೆ ಹಾಳು ಮಾಡೋದಕ್ಕೆ ಅಂತಾನೇ ಇರೋದು, ಪಾಪ ಆ ಕಮಲಿಗೆ ಅದೆಷ್ಟು ಕಷ್ಟಾ ಅಂತೀರಾ? ಜೊತೆಜೊತೆಯಲಿ ಹೀರೋ ಅದೆಷ್ಟು ಸ್ಮಾರ್ಟ್ ಅಂತೀರಾ? ಅಖಿಲಾಂಡೇಶ್ವರಿ ಎಷ್ಟು ಚೆಂದ ಅಲ್ವಾ ಹೀಗೆ ಹೆಂಗಳೆಯರ ಬಾಯಲ್ಲಿ ಫುಲ್ ಸೀರಿಯಲ್ನದ್ದೇ ಮಾತು.
ಸತತ ಮೂರನೇ ವಾರವೂ ಮೊದಲ ಸ್ಥಾನ ಕಾಯ್ದುಕೊಂಡ ಜೊತೆಜೊತೆಯಲಿ - ನಮ್ಮನೆ ಯುವರಾಣಿ
ಆರೂರು ಜಗದೀಶ್ ನಿರ್ದೇಶನದ ಜೊತೆಜೊತೆಯಲಿ ಧಾರಾವಾಹಿ ಮೂರನೇ ವಾರ ಕೂಡಾ ಮೊದಲ ಸ್ಥಾನ ಕಾಯ್ದುಕೊಂಡಿದೆ. ಅನಿರುದ್ಧ್ ಜತ್ಕರ್ ಹಾಗೂ ಮೇಘಾಶೆಟ್ಟಿ ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಮ್ಮ ಮಹಿಳೆಯರು ಎಲ್ಲೇ ಹೋದರೂ ತಮ್ಮ ಮೆಚ್ಚಿನ ಧಾರಾವಾಹಿ ಪ್ರಸಾರವಾಗುವ ವೇಳೆಗೆ ಮನೆಯಲ್ಲಿ ಹಾಜರಿರುತ್ತಾರೆ. ಇನ್ನು ಆ ಸಮಯದಲ್ಲಿ ಅವರನ್ನು ಮಾತನಾಡಿಸುವ ಹಾಗಿಲ್ಲ. ಇನ್ನು ರಾಜ್ಯದ ಜನತೆ ಬಹಳ ಇಷ್ಟಪಟ್ಟು ನೋಡುತ್ತಿರುವ ಧಾರಾವಾಹಿಗಳಲ್ಲಿ ಅನಿರುದ್ಧ್ ಜತ್ಕರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಜೊತೆಜೊತೆಯಲಿ ಧಾರಾವಾಹಿ ನಂಬರ್ ಒನ್ ಸ್ಥಾನದಲ್ಲಿದೆ. ಸತತ ಮೂರನೇ ವಾರ ಕೂಡಾ ಈ ಧಾರಾವಾಹಿ ಮೊದಲ ಸ್ಥಾನ ಕಾಯ್ದುಕೊಂಡಿರುವುದು ವಿಶೇಷ. ಸದ್ಯಕ್ಕೆ ಜೊತೆಜೊತೆಯಲಿ (ಜೀ ಕನ್ನಡ) ಧಾರಾವಾಹಿ ಮೊದಲ ಸ್ಥಾನದಲ್ಲಿದ್ದು ಎರಡನೇ ಸ್ಥಾನದಲ್ಲಿ ಮಂಗಳಗೌರಿ ಮದುವೆ (ಕಲರ್ಸ್ ಕನ್ನಡ)ಧಾರಾವಾಹಿ ಇದೆ. ನಂತರ ಕ್ರಮವಾಗಿ ಗಟ್ಟಿಮೇಳ (ಜೀ ಕನ್ನಡ), ಪಾರು (ಜೀ ಕನ್ನಡ), ಯಾರೆ ನೀ ಮೋಹಿನಿ (ಜೀ ಕನ್ನಡ), ಕಮಲಿ (ಕಲರ್ಸ್ ಕನ್ನಡ), ನಮ್ಮನೆ ಯುವರಾಣಿ (ಕಲರ್ಸ್ ಕನ್ನಡ), ನಾಗಿಣಿ (ಜೀ ಕನ್ನಡ), ನಂದಿನಿ (ಉದಯ ಟಿವಿ), ಬ್ರಹ್ಮಗಂಟು (ಜೀ ಕನ್ನಡ) ಧಾರಾವಾಹಿಗಳು ಟಾಪ್ 10 ಸ್ಥಾನದಲ್ಲಿವೆ.