ಆರೂರು ಜಗದೀಶ್ ನಿರ್ದೇಶನದ 'ಜೊತೆಜೊತೆಯಲಿ' ಧಾರಾವಾಹಿ ಕಿರುತೆರೆ ಲೋಕದಲ್ಲಿ ಇತಿಹಾಸ ಸೃಷ್ಟಿಸಿದೆ. ಧಾರಾವಾಹಿಯೊಂದು ಅತಿ ಹೆಚ್ಚು ಜನಮನ್ನಣೆ ಪಡೆದುಕೊಂಡಿರುವುದು ಇದೇ ಮೊದಲು ಎನ್ನಬಹುದು. ಅಷ್ಟರ ಮಟ್ಟಿಗೆ ಈ ಧಾರಾವಾಹಿ ಪ್ರೇಕ್ಷಕರನ್ನು ಮೋಡಿ ಮಾಡಿದೆ.
ರಾತ್ರಿ 8.30ಕ್ಕೆ ಟಿವಿ ಬಿಟ್ಟು ಕದಲದ ಪ್ರೇಕ್ಷಕ, ಮತ್ತದೇ ರೇಟಿಂಗ್ ಕಾಯ್ದುಕೊಂಡ ಜೊತೆಜೊತೆಯಲಿ! - 7ನೇ ವಾರವೂ ಮೊದಲ ಸ್ಥಾನ ಕಾಯ್ದಕೊಂಡ ಜೊತೆಜೊತೆಯಲಿ
ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿರುವ 'ಜೊತೆಜೊತೆಯಲಿ' ಧಾರಾವಾಹಿ ಅನು, ಆರ್ಯವರ್ಧನ್ ಇಬ್ಬರ ಪ್ರೀತಿಯ ಪಯಣದ ಆರಂಭದಲ್ಲಿದೆ. ಕಳೆದ ವಾರ ಕೂಡಾ ಮೊದಲ ಸ್ಥಾನ ಕಾಯ್ದುಕೊಂಡು ಮನೆ ಮಾತಾಗಿದೆ.
ಕಳೆದ ವಾರ ಕೂಡಾ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿರುವ 'ಜೊತೆಜೊತೆಯಲಿ' ಮೊದಲ ಸ್ಥಾನ ಕಾಯ್ದುಕೊಂಡಿದೆ. ಆರಂಭವಾದ 7 ವಾರಗಳಿಂದ ಸತತವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿರುವ ಈ ಧಾರಾವಾಹಿ, ರಾಜ್ಯದಲ್ಲಿ ಮನೆ ಮನೆ ಮಾತಾಗಿದೆ. ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಹಾಗೂ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಅವರ ನಟನೆ ಹಾಗೂ ಕಥೆಯನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರು ಪ್ರತಿನಿತ್ಯ 8.30 ಕ್ಕೆ ಈ ಧಾರಾವಾಹಿ ನೋಡುವುದನ್ನು ಮಾತ್ರ ಮರೆಯುತ್ತಿಲ್ಲ. ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿರುವ ಧಾರಾವಾಹಿ, ಇದೀಗ ಇಬ್ಬರ ಪ್ರೀತಿಯ ಪಯಣದ ಆರಂಭದಲ್ಲಿದೆ. ಈ ವಾರದಿಂದ ಈ ಧಾರಾವಾಹಿ ಹೊಸ ತಿರುವುಗಳನ್ನು ಪಡೆಯುತ್ತಾ ಮುನ್ನುಗ್ಗಲಿದೆ. ಅನು ಪ್ರೀತಿಯನ್ನು ಆರ್ಯವರ್ಧನ್ ಒಪ್ಪಿಕೊಂಡು ಮದುವೆಯಾಗುತ್ತಾರಾ ಅಥವಾ ತನ್ನ ತಾಯಿ ಒಪ್ಪಿರುವ ಹುಡುಗ ನೊಂದಿಗೆ ಅನು ಮದುವೆಯಾಗಲಿದೆಯಾ ಎಂಬುದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.
'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಕಿರುತೆರೆ ಪಯಣ ಆರಂಭಿಸಿರುವ ಅನಿರುದ್ಧ್, ಆರ್ಯವರ್ಧನ್ ಆಗಿ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ, ಕಿರುತೆರೆ ಲೋಕದಲ್ಲಿ ನಂಬರ್ ಒನ್ ಹೀರೋ ಎನಿಸಿಕೊಂಡಿದ್ದಾರೆ. ವಿಭಿನ್ನ ಕಥಾ ಹಂದರದ ಮೂಲಕ ವಾರವಿಡೀ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿರುವ ಈ ಧಾರಾವಾಹಿ, ಮತ್ತಷ್ಟು ಪ್ರೇಕ್ಷಕರನ್ನು ಗಳಿಸಲಿ ಎಂಬುದು ಅಭಿಮಾನಿಗಳ ಆಶಯ.