ಕರ್ನಾಟಕ

karnataka

ETV Bharat / sitara

ಲಾಕ್​​​ಡೌನ್​​ನಲ್ಲಿ ಫಿಟ್​​ನೆಸ್ ಮಂತ್ರ ಜಪಿಸುತ್ತಿರುವ ‘ಜೊತೆ ಜೊತೆಯಲಿ’ ಮೀರಾ ಹೆಗಡೆ - Television actress workout

ಕಿರುತೆರೆ ನಟಿಯರು ಲಾಕ್​ಡೌನ್ ವೇಳೆ ಫಿಟ್​​​ನೆಸ್​ ಮಂತ್ರ ಜಪಿಸುತ್ತಿದ್ದಾರೆ. ಇದೀಗ ಜೊತೆ ಜೊತೆಯಲಿ ಧಾರವಾಹಿಯ ಮೀರಾ ಪಾತ್ರಧಾರಿ ಮಾನಸ ಮನೋಹರ್​​ ತಮ್ಮ ಫಿಟ್​ನೆಸ್​​ ಗುಟ್ಟು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಸಣ್ಣ ಆಗುವ ಭಯಕೆ ಇರುವವರಿಗೆ ಸಲಹೆ ನೀಡಿದ್ದಾರೆ.

Jote joteyali actress Meera Hegde workout in Lockdown days
ಲಾಕ್​​​ಡೌನ್​​ನಲ್ಲಿ ಫಿಟ್​​ನೆಸ್ ಮಂತ್ರ ಜಪಿಸುತ್ತಿರುವ ‘ಜೊತೆ ಜೊತೆಯಲಿ’ ಮೀರಾ ಹೆಗಡೆ

By

Published : Jul 6, 2020, 10:56 PM IST

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿರುವ ಜೊತೆಜೊತೆಯಲ್ಲಿ ಸೀರಿಯಲ್​​​ನ ಎಲ್ಲಾ ಪಾತ್ರಗಳು ಜನಜನಿತ. ಇದರಲ್ಲಿ ಮೀರಾ ಹೆಗಡೆ ಪಾತ್ರದಲ್ಲಿ ಅಭಿನಯಿಸುತ್ತಿರುವ ಮಾನಸ ಮನೋಹರ್ ಲಾಕ್​​ಡೌನ್ ಸಮಯದಲ್ಲಿ ತಮ್ಮ ಫಿಟ್ ನೆಸ್ ಕುರಿತು ಗಮನಹರಿಸಿದ್ದಾರೆ.

12 ಕೆಜಿ ತೂಕ ಇಳಿಸಿಕೊಂಡಿರುವ ಮಾನಸ ಅವರು ಲಾಕ್​ಡೌನ್ ಸಮಯದಲ್ಲಿ ಪರ್ಸನಲ್ ಟ್ರೈನರ್​ ನೇಮಿಸಿಕೊಂಡು ಅವರು ಕಳುಹಿಸುವ ವರ್ಕೌಟ್ ವಿಡಿಯೋ ನೋಡಿ ಪ್ರತಿದಿನ 2 ಗಂಟೆ ವರ್ಕೌಟ್ ಮಾಡುತ್ತಿದ್ದರು. ಆ ಮೂಲಕ ಬರೋಬ್ಬರಿ 12 ಕೆಜಿ ಕಡಿಮೆಯಾಗಿದ್ದಾರೆ.

ಲಾಕ್​​​ಡೌನ್​​ನಲ್ಲಿ ಫಿಟ್​​ನೆಸ್ ಮಂತ್ರ ಜಪಿಸುತ್ತಿರುವ ‘ಜೊತೆ ಜೊತೆಯಲಿ’ ಮೀರಾ ಹೆಗಡೆ

ವರ್ಕೌಟ್ ಜೊತೆಗೆ ಮನೆಯ ಟೆರೇಸ್​​ನಲ್ಲಿ ಸುಮಾರು ಒಂದು ಗಂಟೆ ವಾಕಿಂಗ್​​ ಮಾಡುತ್ತಿದ್ದ ಮಾನಸ ಸಾಕಷ್ಟು ನೀರು ಕುಡಿಯುತ್ತಿದ್ದರಂತೆ. ಇದರ ಜೊತೆಗೆ ಯೂಟ್ಯೂಬ್​ನಲ್ಲಿ ವಿಡಿಯೋ ನೋಡಿ ವರ್ಕೌಟ್ ಮಾಡುವುದು ಒಳ್ಳೆಯದಲ್ಲ, ಸೆಲೆಬ್ರಿಟಿಗಳು ಮೀಡಿಯಾಗಳಲ್ಲಿ ಅಪ್​​​ಲೋಡ್ ಮಾಡಿದ ವಿಡಿಯೋ ನೋಡಿ ನಾವು ಅದನ್ನು ಫಾಲೋ ಮಾಡುವುದು ಒಳಿತಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.

ಇನ್ನು ಯಾರೋ ಹೇಳಿದ್ದನ್ನು ಕೇಳಿ ವರ್ಕೌಟ್, ಡಯಟ್ ಮಾಡಿ ಅನುಸರಿಸುವುದರಿಂದ ದೇಹದ ಮೇಲೆ ಪರಿಣಾಮ ಆಗಬಹುದು, ಹೀಗಾಗಿ ಡಯಟಿಶಿಯನ್ ಭೇಟಿ ಮಾಡಿ ಅವರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು ಎಂದಿದ್ದಾರೆ.

ಅಲ್ಲದೆ ಸಣ್ಣಗಾಗಬೇಕೆಂದು ಊಟ, ತಿಂಡಿ ಬಿಡುವುದರಿಂದ ಯಾವುದೇ ಪ್ರಯೋಜನ ಸಿಗಲಾರದು. ಇದರ ಜೊತೆಗೆ ಸಮಯಕ್ಕೆ ಸರಿಯಾಗಿ ಆಹಾರ ತಿನ್ನದೇ ಹೋದರೆ ಆರೋಗ್ಯಕ್ಕೆ ಸಮಸ್ಯೆ ಉಂಟಾಗಬಹುದು ಎಂದಿದ್ದಾರೆ.

ಯಾವುದೇ ಆಹಾರ ಇದ್ದರೂ ನಮ್ಮ ದೇಹಕ್ಕೆ ಎಷ್ಟು ಅಗತ್ಯವಿದೆ ಎಂಬುದನ್ನು ನೋಡಿ ತೆಗೆದುಕೊಂಡರೆ ಒಳಿತು. ಇನ್ನು ಸಕ್ಕರೆ, ಉಪ್ಪಿನಿಂದ ದೇಹಕ್ಕೆ ಅಷ್ಟೊಂದು ಉಪಯೋಗ ಇಲ್ಲ ಎನ್ನುವ ಅವರು ಕಾಫಿ, ಟೀ ಇವುಗಳಿಗೆ ಬೆಲ್ಲ, ಜೇನುತುಪ್ಪ ಬಳಸೋದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details