ಕರ್ನಾಟಕ

karnataka

ETV Bharat / sitara

ಆರ್ಯವರ್ಧನ್ ಆಪ್ತ ಜೇಂಡೆಗೆ ಮೂವರು ಆಪ್ತರು... ಯಾರವರು ಗೊತ್ತಾ? - ವೆಂಕಟೇಶ್ ಇನ್ಸ್​ಟಾಗ್ರಾಂ ಪೇಜ್

ಬಿ.ಎಂ.ವೆಂಕಟೇಶ್ ಅವರು ಕನ್ನಡದ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರು. ಸಣ್ಣ ಪರದೆಯಿಂದ ಹಿಡಿದು ಬೆಳ್ಳಿ ಪರದೆಯವರೆಗೆ ತಮ್ಮದೇ ಆದ ಛಾಪನ್ನು ಮೂಡಿಸಿರುವ ವೆಂಕಟೇಶ್, ಇದೀಗ ಜೊತೆ ಜೊತೆಯಲಿ ಜೇಂಡೆ ಪಾತ್ರದ ಮೂಲಕ ಮನೆಮಾತಾಗಿದ್ದಾರೆ.

B.M Venkatesh
B.M Venkatesh

By

Published : Jun 12, 2021, 8:52 AM IST

‘ಜೊತೆ ಜೊತೆಯಲಿ’ ಜೇಂಡೆ ಪಾತ್ರಧಾರಿ ಬಿ.ಎಂ.ವೆಂಕಟೇಶ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್. ಅವರು ಆಗಾಗ್ಗೆ ತಮ್ಮ ಇನ್ಸ್​ಟಾಗ್ರಾಂ ಪೇಜ್​ನಲ್ಲಿ ತಮ್ಮ ಪ್ರಾಜೆಕ್ಟ್, ಕುಟುಂಬ, ಧಾರಾವಾಹಿ, ಸ್ನೇಹಿತರು ಹೀಗೆ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಅವರು ಶೇರ್ ಮಾಡಿದ ವಿಡಿಯೋ ಎಲ್ಲರ ಗಮನ ಸೆಳೆದಿದೆ.

ಜೇಂಡೆ ಆಪ್ತ

ಹೌದು, ವೆಂಕಟೇಶ್ ಅವರು ತಮ್ಮ ಇನ್ಸ್​ಟಾಗ್ರಾಂ ಪೇಜ್​ನಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದು, ಅದು ಅನೇಕ ಅಭಿಮಾನಿಗಳ ಹೃದಯಗಳನ್ನು ಗೆದ್ದಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಅಂತೀರಾ?, ಖಂಡಿತಾ ಇದೆ. ಈ ವಿಡಿಯೋದಲ್ಲಿ ವೆಂಕಟೇಶ್ ಅವರನ್ನು ಅವರ ಮುದ್ದಿನ ಶ್ವಾನಗಳು ಮನೆಗೆ ಸ್ವಾಗತಿಸಿದ ಪರಿ ಎಂಥವರ ಹೃದಯವನ್ನು ಸಹ ಗೆಲ್ಲುತ್ತದೆ.

ತಮ್ಮ ಕೆಲಸ ಮುಗಿಸಿಕೊಂಡು, ಸುದೀರ್ಘ ದಿನದ ನಂತರ ವೆಂಕಟೇಶ್ ತಮ್ಮ ಮನೆಗೆ ಪ್ರವೇಶಿಸುತ್ತಿದ್ದಂತೆ ಅವರನ್ನು ಸ್ವಾಗತಿಸಲು ಸಾಕು ನಾಯಿಗಳು ಅವರ ಮೇಲೆರಗಿ, ಮುತ್ತಿಟ್ಟು, ಬಾಲ ಅಲ್ಲಾಡಿಸುತ್ತಾ ಓಡಾಡುವುದು ವಿಡಿಯೋದಲ್ಲಿ ಕಂಡುಬರುತ್ತದೆ. ವೆಂಕಟೇಶ್ ಅವರು ಹಂಚಿಕೊಂಡಿರುವ ಈ ವಿಡಿಯೋ ನೆಟ್ಟಿಗರ ಗಮನ ಮಾತ್ರ ಸೆಳೆದಿಲ್ಲ, ಉದ್ಯಮದ ಇತರ ಖ್ಯಾತನಾಮರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಹೂ ಮಳೆ ನಟಿ ಸುಜಾತಾ ಅಕ್ಷಯ್ ಕಾಮೆಂಟ್ ವಿಭಾಗದಲ್ಲಿ ಈ ವಿಡಿಯೋಗೆ ಪ್ರತಿಕ್ರಿಯಿಸಿರುವುದನ್ನು ನೀವು ನೋಡಬಹುದು.

ಬಿ.ಎಂ.ವೆಂಕಟೇಶ್ ಅವರು ಕನ್ನಡದ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರು. ಸಣ್ಣ ಪರದೆಯಿಂದ ಹಿಡಿದು ಬೆಳ್ಳಿ ಪರದೆಯವರೆಗೆ ತಮ್ಮದೇ ಆದ ಛಾಪನ್ನು ಮೂಡಿಸಿರುವ ವೆಂಕಟೇಶ್, ಇದೀಗ ಜೊತೆ ಜೊತೆಯಲಿ ಜೇಂಡೆ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಜೊತೆಗೆ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ವೆಂಕಟೇಶ್ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಅವರ ಆಪ್ತ ಸ್ನೇಹಿತನ ಪಾತ್ರ ನಿರ್ವಹಿಸುತ್ತಿದ್ದು, ಆರ್ಯನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಅವರ ಪಾತ್ರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details