'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಕಿರುತೆರೆ ವೀಕ್ಷಕರಿಗಂತೂ ಬಹಳ ಪರಿಚಿತ. ಸೂಪರ್ ಸ್ಟಾರ್ ಜಯಕೃಷ್ಣ ಪಾತ್ರದಲ್ಲಿ ಹೆಂಡ್ತಿ ಎಂಬ ಡೈಲಾಗ್ ಹೇಳುವ ಮೂಲಕ ಕಿರುತೆರೆಪ್ರಿಯರ ಮನಗೆದ್ದ ಜೆಕೆ, ಬಿಗ್ಬಾಸ್ಗೆ ಹೋಗಿ ಬಂದ ನಂತರ ಮತ್ತಷ್ಟು ಖ್ಯಾತಿ ಗಳಿಸಿದರು.
ಲಂಕಾಧಿಪತಿಗೆ ಧ್ವನಿ ನೀಡುತ್ತಿರುವ ಜಯರಾಮ್ ಕಾರ್ತಿಕ್ - Ashwini Nakshatra fame JK
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತೆಯ ರಾಮ' ಡಬ್ಬಿಂಗ್ ಧಾರಾವಾಹಿಯಲ್ಲಿ ರಾವಣನ ತಮ್ಮ ಪಾತ್ರಕ್ಕೆ ಜೆಕೆ ತಾವೇ ಧ್ವನಿ ನೀಡುತ್ತಿದ್ದಾರೆ. ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಜೆಕೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಅಶ್ವಿನಿ ನಕ್ಷತ್ರ' ಧಾರಾವಾಹಿ ನಂತರ ನಂತರ ಸಿನಿಮಾಗಳಲ್ಲಿ ಬ್ಯುಸಿಯಾದ ಜೆಕೆ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ 2 ಧಾರಾವಾಹಿಯಲ್ಲಿ ಆದಿಶೇಷ ಎಂಬ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೆಕೆ ಇದೀಗ 'ಸೀತೆಯ ರಾಮ' ಡಬ್ಬಿಂಗ್ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಸೀತೆಯ ರಾಮ ಹಿಂದಿಯ 'ಸಿಯಾ ಕೆ ರಾಮ್' ಡಬ್ಬಿಂಗ್ ಧಾರಾವಾಹಿ. ಈ ಧಾರಾವಾಹಿಯಲ್ಲಿ ರಾವಣನಾಗಿ ಅಬ್ಬರಿಸಿರುವ ಜೆಕೆ, ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ. ಈ ಸಂಚಿಕೆ ಇದೇ ವಾರ ಪ್ರಸಾರವಾಗಲಿದೆ.
ತಾವು ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋಗಳನ್ನು ಜೆಕೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಸೀತೆಯ ರಾಮ' ಧಾರಾವಾಹಿಯಲ್ಲಿ ರಾಮಾಯಣದ ಮಹತ್ತರ ಘಟನೆಗಳಾದ ಸೀತಾ ಜನನ, ರಾಮನ ಗುರುಕುಲ ವಿದ್ಯಾಭ್ಯಾಸ, ಸೀತಾ ಸ್ವಯಂವರ ,ಲಂಕಾ ದಹನ , ರಾಮ-ರಾವಣರ ಯುದ್ದವನ್ನು ಒಳಗೊಂಡಿದೆ.