ಹಿರಿಯ ನಟ ಜೈ ಜಗದೀಶ್, ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದು ಅವರನ್ನು ಮನೆಯೊಳಗೆ ಕಳಿಸಿಕೊಡಲು ಪತ್ನಿ ವಿಜಯಲಕ್ಷ್ಮಿ ಸಿಂಗ್ ಸಹಿತ ಮೂವರು ಮಕ್ಕಳಾದ ವೈಭವಿ, ವೈನಿಧಿ, ವೈಷ್ಣವಿ ಕೂಡಾ ಬಂದಿದ್ದು ವೀಕ್ಷಕರಿಗೆಲ್ಲಾ ತಿಳಿದೇ ಇದೆ. ಜೈ ಜಗದೀಶ್, ಬಿಗ್ ಬಾಸ್ ಮನೆಯೊಳಗೆ ಒಂದು ವಾರ ಕಳೆದಿದ್ದು ಮಕ್ಕಳು ದಿನನಿತ್ಯವೂ ತಮ್ಮ ಅಪ್ಪನನ್ನು ನೋಡಿ ಖುಷಿ ಪಡುತ್ತಿದ್ದಾರೆ.
ಕಿಶನ್ ಜೊತೆ ಫೈಟ್, ಅಪ್ಪನ ನೇರ ಸ್ವಭಾವ ಹೊಗಳಿ ಶುಭ ಹಾರೈಸಿದ ಜೈಜಗದೀಶ್ ಪುತ್ರಿ - ಜೈಜಗದೀಶ್ ಪುತ್ರಿಯಿಂದ ಅಪ್ಪನಿಗೆ ಶುಭಹಾರೈಕೆ
ಬಿಗ್ಬಾಸ್ ಮನೆಯೊಳಗೆ ಇರುವ ಜೈ ಜಗದೀಶ್ ಬಗ್ಗೆ ಒಂದೆಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಈ ಹಿರಿಯ ನಟನ ಕುಟುಂಬದವರು ಬೆಂಬಲ ನೀಡಿದ್ದಾರೆ. ಹಿರಿಯ ಪುತ್ರಿ ವೈಭವಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಪನಿಗೆ ಶುಭ ಹಾರೈಸಿದ್ದಾರೆ.
![ಕಿಶನ್ ಜೊತೆ ಫೈಟ್, ಅಪ್ಪನ ನೇರ ಸ್ವಭಾವ ಹೊಗಳಿ ಶುಭ ಹಾರೈಸಿದ ಜೈಜಗದೀಶ್ ಪುತ್ರಿ](https://etvbharatimages.akamaized.net/etvbharat/prod-images/768-512-4864359-thumbnail-3x2-bigjai.jpg)
ಕಾರ್ಯಕ್ರಮ ಆರಂಭವಾಗಿ ಒಂದು ವಾರ ಕಳೆಯುತ್ತಾ ಬಂದಿದ್ದು ಇದೀಗ ಮನೆಯೊಳಗೆ ಸಣ್ಣಪುಟ್ಟ ಮನಸ್ತಾಪಗಳು ಆರಂಭವಾಗಿದೆ. ದಿನಕಳೆದಂತೆ ನಗುವಿಗಿಂತ ಕೋಪ, ಅಳು, ಜಗಳ ಬೆಳೆಯುತ್ತಿದೆ. ಕಿಶನ್ ಹಾಗೂ ಜೈಜಗದೀಶ್ ನಡುವೆ ಜಗಳ ನಡೆದ ವೇಳೆ ಜೈ ಜಗದೀಶ್ ಬಹಳ ಹೈಲೈಟ್ ಆಗಿದ್ದರು. ಜೊತೆಗೆ ಈ ಜಗಳದ ಕಾರಣ, ಬಿಗ್ಬಾಸ್ ಮನೆಯಲ್ಲಿ ಜೈ ಜಗದೀಶ್ ಅವರ ನಡವಳಿಕೆ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಕೂಡಾ ನಡೆದಿತ್ತು.
ಇದಕ್ಕೆ ಜೈ ಜಗದೀಶ್ ಮೊದಲ ಪುತ್ರಿ ವೈಭವಿ ಪ್ರತಿಕ್ರಿಯಿಸಿ 'ಅಪ್ಪಾ ನಮಗೆ ನಿನ್ನ ಬಗ್ಗೆ ತುಂಬಾ ಹೆಮ್ಮೆ ಆಗುತ್ತಿದೆ. ಅಪ್ಪ ಆಡಂಬರದ ವ್ಯಕ್ತಿ ಅಲ್ಲ, ಮಾತ್ರವಲ್ಲ ಅವರು ನಾನ್ಸೆನ್ಸ್ ವ್ಯಕ್ತಿ ಕೂಡಾ ಅಲ್ಲ. ಅವರು ಇದ್ದದ್ದನ್ನು ಇದ್ದ ಹಾಗೆ ನೇರವಾಗಿ ಹೇಳುವ ಸ್ವಭಾವದವರು. ಎಲ್ಲರಿಗೂ ಬೇಕಾಗುವುದು ಕೂಡಾ ಅದೇ ತಾನೇ..? ಯಾವಾಗಲೂ ನಮ್ಮೆಲ್ಲರ ಪ್ರೋತ್ಸಾಹ ನಿಮಗೆ ಇದ್ದೇ ಇರುತ್ತದೆ. ಚೆನ್ನಾಗಿ ಆಟ ಆಡಿ ಅಪ್ಪಾ' ಎಂದು ಫೇಸ್ಬುಕ್ನಲ್ಲಿ ಹಂಚಿಕೊಳ್ಳುವುದರ ಮೂಲಕ ಚರ್ಚೆಗೆ ಪುಲ್ಸ್ಟಾಪ್ ಇಟ್ಟಿದ್ದಾರೆ.