ಕನ್ನಡ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ಕಾಮಿಡಿ ಕಿಲಾಡಿಗಳು ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ - 2 ಆರಂಭವಾಗಲಿದ್ದು ಅದಕ್ಕಾಗಿ ಚಿತ್ರೀಕರಣ ಕೂಡಾ ಜರುಗುತ್ತಿದೆ.
8 ತಿಂಗಳ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾದ ನವರಸ ನಾಯಕ
ಮೂರು ಸೀಸನ್ ಕಾಮಿಡಿ ಕಿಲಾಡಿ ಸ್ಪರ್ಧಿಗಳು ಇದೀಗ ಒಂದೇ ವೇದಿಕೆ ಮೇಲೆ ಸೇರುತ್ತಿದ್ದು ಪ್ರೇಕ್ಷಕರಿಗೆ ಮನರಂಜನೆ ಒದಗಿಸಲು ರೆಡಿಯಾಗಿದ್ದಾರೆ. ಜಗ್ಗೇಶ್ ಕೂಡಾ ಸುಮಾರು 8 ತಿಂಗಳ ನಂತರ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.
ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ 2 ರ ತೀರ್ಪುಗಾರರಾಗಿರುವ ನವರಸ ನಾಯಕ ಜಗ್ಗೇಶ್, ಲಾಕ್ ಡೌನ್ ನಂತರ ಮೊದಲ ಬಾರಿ ಮನೆಯಿಂದ ಹೊರ ಬಂದು ಇದೀಗ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. 'ಕಾಮಿಡಿ ಕಿಲಾಡಿಗಳು, ಚಾಂಪಿಯನ್ಸ್ ಚಿತ್ರೀಕರಣ, 8 ತಿಂಗಳ ನಂತರ ಬಣ್ಣ ಹಚ್ಚುತ್ತಿರುವೆ. ಹರಸಿ, ಹಾರೈಸಿ, ಲವ್ ಯೂ ಆಲ್' ಎಂದು ಜಗ್ಗೇಶ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ವಿಭಿನ್ನ ಹಾಸ್ಯ ಹಾಗೂ ಸ್ಪೂರ್ತಿ ತುಂಬುವ ಮಾತುಗಳಿಗೆ ಹೆಸರಾಗಿರುವ ಜಗ್ಗೇಶ್ ಆರ್ಥಿಕವಾಗಿ ಹಿಂದುಳಿದ ಸ್ಪರ್ಧಿಗಳಿಗೂ ಧೈರ್ಯ ತುಂಬುತ್ತಾರೆ. ಜಗ್ಗೇಶ್ ಅವರೊಂದಿಗೆ ಯೋಗರಾಜ್ ಭಟ್ ಹಾಗೂ ರಕ್ಷಿತ ಕೂಡಾ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಹಾಗೂ ಮಾಸ್ಟರ್ ಆನಂದ್ ನಿರೂಪಕರಾಗಿ ಮುಂದುವರೆಯಲಿದ್ದಾರೆ. ಒಟ್ಟಿನಲ್ಲಿ ಮೂರೂ ಸೀಸನ್ ಕಾಮಿಡಿ ಕಿಲಾಡಿಗಳು ಇದೀಗ ಒಂದೇ ವೇದಿಕೆಯಲ್ಲಿ ಸೇರುತ್ತಿದ್ದು ಪ್ರೇಕ್ಷಕರಿಗಂತೂ ಹಾಸ್ಯದ ಮನರಂಜನೆ ದೊರೆಯುವುದು ಗ್ಯಾರಂಟಿ.