ಕೊರೊನಾದಿಂದ ನಗರ ಹಾಗೂ ಹಳ್ಳಿಗಳಲ್ಲಿ ಜನರು ಸಂಕಷ್ಟ ಪಡುತ್ತಿದ್ದು, ಅನೇಕರಿಗೆ ಬೆಡ್, ಆಕ್ಸಿಜನ್ ಕೊರತೆಯುಂಟಾಗಿದೆ. ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಉಪೇಂದ್ರ, ರಾಗಿಣಿ ದ್ವಿವೇದಿ, ಸಂಜನe ಗರ್ಲಾನಿ, ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚಾ ಸೇರಿದಂತೆ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಇದೀಗ ನಟ ಜೆಕೆ ಅಭಿನಯದ ಐರಾವನ್ ಚಿತ್ರತಂಡ, ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಜನರ ಸೇವೆಗೆ ಮುಂದಾಗಿದ್ದಾರೆ. ಐರಾವನ್ ಚಿತ್ರದ ನಿರ್ಮಾಪಕ ಡಾ. ನಿರಂತರ್ ಗಣೇಶ್, ಚಿತ್ರದ ನಾಯಕ ಜಯರಾಮ್ ಕಾರ್ತಿಕ್ (ಜೆಕೆ) ಮತ್ತು ನಟ ವಿವೇಕ್ ಆಕ್ಸಿಜನ್ ವಾಹನವನ್ನು, ಬ್ಯಾಟರಾಯನಪುರ ವ್ಯಾಪ್ತಿಯ ಜನರ ಸೇವೆಗೆ ನೀಡಿದ್ದಾರೆ. ಅದರ ಜೊತೆಗೆ 10 ಸಾವಿರ ಕೋವಿಡ್ ಮೆಡಿಕಲ್ ಕಿಟ್, ಔಷಧಗಳನ್ನೂ ವಿತರಣೆ ಮಾಡಿದ್ದಾರೆ.